ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಅವರವರ ಭಾವಕ್ಕೆ...

ಕೈಯಿಂದ

ಹಾರ ಹಾಕಿ

ಸನ್ಮಾನಿಸುವುದು

ಯಥೋಚಿತ

ಮಾನ-ಸನ್ಮಾನ

 

ಕ್ರೇನ್ ಗಳಲಿ

ದೊಡ್ಡ ಹಾರ

ಹಾಕಿಸಿಕೊಳ್ಳುವುದು

ರಾಜಕಾರಣಿಗಳಿಗೆ

ಆಪ್ಯಾಯಮಾನ!

 

ಹುಚ್ಚು ಅಭಿಮಾನದ 

ಹಾರ ಹಾಕಿಸಿಕೊಂಡರೆ

ಅವರು

ಉಳಿಯುವುದೇ

ಅನುಮಾನ!!

***

ನವರಂಗೀ ದುನಿಯಾ

ರಾಜಕಾರಿಣಿಗಳೇ

ಹಾಗೆ...

ಇದು ನವರಂಗೀ

ದುನಿಯಾ

ಬಣ್ಣಗಳ ಹಾರಿಸಿ

ನಭೋಮಂಡಲದಲಿ

ಕಾಮನ ಬಿಲ್ಲನೇ

ಮೂಡಿಸಿ,

ಅವುಗಳನು

ತೋರಿಸಿ

ಓಟುಗಳ

ಸೆರೆ ಹಿಡಿದು

ಅಧಿಕಾರದ

ಮಾಯಾ ರಥದಲಿ

ಆಕಾಶಕೆ ಹಾರಿ

ಮರೆಯಾಗಿ

ಬಿಡುವರು!

***

ಮಿಥ್ಯ-ಸತ್ಯ

ನೀವೇನೇ

ರೋಡ್

ಷೋಗಳನು

ಮಾಡಿ-

ಅದು

ಸಂಭ್ರಮದ

ತೋರಿಕೆಯ ಮಿಥ್ಯ...

 

ಮತದಾರ

ಪ್ರಭುವಿನ

ನಿರ್ಧಾರವದು

ಚುನಾವಣೆ

ಮುಗಿದಮೇಲೆ

ಎಂಬುದು

ವಾಸ್ತವ ಸತ್ಯ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್