ಒಂದು ಒಳ್ಳೆಯ ನುಡಿ - 196

ಒಂದು ಒಳ್ಳೆಯ ನುಡಿ - 196

* ನಾವಾಗಿ ದಾರಿತಪ್ಪುವುದು ಬೇರೆ.ಮಾತಿನಲ್ಲೇ ಬೆಣ್ಣೆ ಸೇರಿಸಿ ದಾರಿತಪ್ಪಿಸುವುದು (ನಯವಾಗಿ ಮಾತನಾಡುವುದು) ಬೇರೆ. ಮಾತು ಕೇಳುವ ನಾವು ಯಾವುದು ಒಳ್ಳೆಯದು, ಯಾವುದು ಅನಗತ್ಯವಾದದ್ದು ಎಂದು ಆಲೋಚಿಸಿ ನಿರ್ಧಾರಕ್ಕೆ ಬರಬೇಕು. ಮಾತೇ ಮುತ್ತು :ಮಾತೇ ಮೃತ್ಯುವಿಗೆ ಹೇತು ಅಲ್ಲವೇ? ಜಾಗ್ರತೆ ವಹಿಸೋಣ.

* ನಾವು ಇತರರಿಗಾಗಿ ಎಷ್ಟು ಬೇಕಾದರೂ ದುಡಿಯಬಹುದು.ಆದರೆ ಅವರ ದುಡಿಮೆಯ ಸಂಪಾದನೆಗೆ ಕೈಚಾಚಬಾರದು. ಕಷ್ಟವಿದೆ ಎಂದಾದರೆ ಕೇಳಿ ತೆಗೆದುಕೊಳ್ಳಬಹುದು.ಅದು ಸಭ್ಯತೆಯ ಲಕ್ಷಣ.

* ಹಣವಿದ್ದವರು, ದೊಡ್ಡವರೆಂದು ಅನಿಸಿಕೊಂಡವರು ಮಾಡುವ ದಾನ, ತ್ಯಾಗ, ಸಹಕಾರಕ್ಕಿಂತ, ಪಾಪದವರು, ದೀನರು, ಬಡವರು, ಚಿಕ್ಕವರು ಮಾಡುವ ಸಹಕಾರ ಅತ್ಯಂತ ದೊಡ್ಡದು ಮತ್ತು ಬೆಲೆಯುಳ್ಳದ್ದು.

* ಸತ್ಯ ಎನ್ನುವುದು ಸುಳ್ಳಿನ ಹೊದಿಕೆಯಿಂದ ಮುಚ್ಚಿದ್ದರೂ,ನೋಟಿನ ಕಂತೆಗಳಲ್ಲಿ ಹುದುಗಿದ್ದರೂ, ಕೊಡವಿಕೊಂಡು ಎದ್ದು ಬಂದು ರಾರಾಜಿಸಬಹುದು. ಸತ್ಯಮೇವ ಜಯತೇ ಅಲ್ಲವೇ? ಸತ್ಯವೇ ತಂದೆ ತಾಯಿ, ಬಂಧು ಬಳಗ, ಭಗವಂತ ಎಂದು ನಂಬಿದವರು ನಾವು. ಸತ್ಯ ಧರ್ಮದ ತಳಹದಿ.

* ಸೌಂದರ್ಯವೆನ್ನುವುದು ಅಂತರ್ಯದಲ್ಲಿ ಅಡಗಿರುವುದು. ಜಾಣನಾದವ, ಬುದ್ಧಿವಂತನೆನಿಸಿದವ ಅದನ್ನು ಹುಡುಕಿ ಶೋಧಿಸಿ ತೆಗೆಯಬಲ್ಲ.

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ