ಒಂದು ಒಳ್ಳೆಯ ನುಡಿ - 38

ಒಂದು ಒಳ್ಳೆಯ ನುಡಿ - 38

*ಓದು* ಮಾನವನಿಗೆ ಇಂದಿನ ದಿನದಲ್ಲಿ ಅವಶ್ಯಕ. 'ಓದಿ ಏನು ಕಟ್ಟೆ ಹಾಕಲಿದೆ? ಎಂದು ಹೇಳುವುದಿದೆ. ಓದುವುದರಿಂದ ಅನುಭವಗಳು ವಿಶಾಲವಾಗುವುದು ಸಹಜ. ಭೂತ, ವರ್ತಮಾನ, ಭವಿಷ್ಯತ್  ಓದಿನ ಮೂಲಕ ತಿಳಿಯಬಹುದು. ಸಾವಿರಾರು ವರುಷಗಳ ಹಿಂದಿನ ಘಟನೆ, ಓದುವುದರಿಂದ ತಿಳಿದು ಬರುತ್ತದೆ. ನಮಗೆ ತಿಳಿಯದ್ದನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕು. ಅದಕ್ಕೆ ನಮಗೆ ಬೇಕಾದ್ದು *ಜ್ಞಾನಾರ್ಜನೆ*. ಪಂಡಿತರೋ, ಗುರುಗಳೋ ಬೇಕು. ಗುರುಮುಖೇನವೇ ಕೆಲವನ್ನು ಕಲಿಯಬೇಕು.

ಯಃ ಪಠತಿ ಲಿಖತಿ

ಪರಿಪೃಚ್ಛತಿ ಪಂಡಿತಾನುಪಾಶ್ರಯತಿ/

ತಸ್ಯ ದಿವಾಕರಕಿರಣೈಃ

ನಲಿನೀವ ವಿಕಾಸ್ಯತೇ ಬುದ್ಧಿಃ//

ಯಾವನು ಓದುತ್ತಾನೋ, ಬರೆಯುತ್ತಾನೋ, ಪ್ರಶ್ನಿಸುವ ಮನೋಭಾವ ಹೊಂದಿರುತ್ತಾನೋ, ಪಂಡಿತರು, ಗುರುಗಳನ್ನು ಆಶ್ರಯಿಸಿ ವಿದ್ಯೆ ಕಲಿಯುತ್ತಾನೋ, ಅವನ ಬುದ್ಧಿಯು ಸೂರ್ಯನ ಕಿರಣಗಳ ಸ್ಪರ್ಶದಿಂದ ಅರಳುವ ಕಮಲದಂತೆ ಅರಳುವುದು, ವಿಕಾಸ ಹೊಂದುವುದು.

ಬುದ್ಧಿಯ ವಿಕಾಸವೇ ಜೀವನದ ದಾರಿ.ಅದಕ್ಕಾಗಿ *ಓದು,ಬರಹ, ಜಿಜ್ಞಾಸೆ, ಪಂಡಿತರ ಆಶ್ರಯ, ಗುರುಗಳ ಕೃಪಾಕಟಾಕ್ಷ* ಇವೆಲ್ಲಾ ನಮಗೆ ಬೇಕು. ಇವಿಲ್ಲದ ಬಾಳು ವ್ಯರ್ಥ.

ಪರನಿಂದೆಯಲ್ಲಿ ಪಾಂಡಿತ್ಯ ತೋರಿಸುವವರು, ತಮ್ಮ ಕರ್ತವ್ಯದಲ್ಲಿ ಲೋಪ ಎಸಗುವವರು, ಗುಣವಂತರನ್ನು ದ್ವೇಷಿಸುವವರು ಜೀವನದಲ್ಲಿ ಯಾವತ್ತೂ ಮೇಲೆ ಬರುವುದಿಲ್ಲ.

-ರತ್ನಾ ಕೆ.ಭಟ್, ತಲಂಜೇರಿ

(ಆಧಾರ:ಸುಭಾಷಿತ ಸಂಗ್ರಹ)