ಒಂದು ಒಳ್ಳೆಯ ನುಡಿ (73) - ಸಮಯ

ಒಂದು ಒಳ್ಳೆಯ ನುಡಿ (73) - ಸಮಯ

ಕಳೆದು ಹೋದ ಸಮಯವು ಎಂದಿಗೂ ಮರಳಿ ಬರುವುದಿಲ್ಲ. ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಪ್ರತಿಯೊಂದು ಕ್ಷಣವು ಅಮೂಲ್ಯ. ಗಡಿಯಾರದ ಮುಳ್ಳನ್ನು ಹಿಂದಕ್ಕೆ ಮಾಡಿ, ಸಮಯವನ್ನು ಹಿಂದೆ ಹೋಗುವಂತೆ ಮಾಡಬಹುದು. ಆದರೆ, ಜೀವನದಲ್ಲಿ ಹಾಗಲ್ಲ. ಜೀವನದಲ್ಲಿ ಸಿಗುವುದು ಕಡಿಮೆ ಸಮಯ. ಆದರೂ, ಆ ಸಮಯದಲ್ಲಿ ನಮಗೆ 'ಸಾರ್ಥಕತೆ' ಎಂಬುದರ ಅನುಭವವಾಗಬೇಕು. 

ಗಡಿಯಾರದ ಮುಳ್ಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಬಹುದೆಂದು 'ಜೀವನ' ಎಂಬ ಗಡಿಯಾರದ ಮುಳ್ಳನ್ನು ಹಿಂದಕ್ಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಪ್ರತಿಕ್ಷಣವನ್ನು  'ಸಾರ್ಥಕತೆ'ಯಿಂದ ಜೀವಿಸೋಣ.                                                                                              

ಚಿತ್ರ-ಬರಹ: ನವ್ಯಾ ಹೆಬ್ಬಾರ