ಒಂದು ಚಂದ್ರನ ಬಗ್ಗೆ!
ಕವನ
ಅನೇಕ ದಿನಗಳ ಹಿಂದೆ
ಚಂದ್ರನನ್ನ ಮುರಿದು ಹಾಕಿದ
ಪಾಪದಲ್ಲಿ
ನಾನೂ ಭಾಗಿಯಾಗಿದ್ದೆ
ಇತ್ತೀಚಿಗೆ
ಆಗಮೆಘಗಳ ಮೇಲೆ
ಬದುಕುಬಂಡಿಯನ್ನು
ಓಡಿಸುಕೊಂಡು ಹೋಗುತ್ತಿರುವಾಗ
ಅದೇ ಚಂದ್ರ ಕಾಣಿಸಿದ
ಹಾಗೆಯೇ..ಮುರಿದೆ ಇದ್ದಾನೆ
ಈಗ ಆಗಸದ ಮಡಿಲೂ ಇಲ್ಲದಾಗಿದೆ
ಆದರೇನಂತೆ! ಒಂದು ಪುಟಾಣಿ ಕಾಂತಿ ಚಕ್ರ
ಸುತ್ತಲೂ ಹರಡಿಕೊಂಡಿದೆ
ಕ್ಷಮೆ ಯಾಚಿಸಬೇಕಂತಿದ್ದೆ!
ನಕ್ಷತ್ರಗಳ ಒಡೆನಾಟದಲ್ಲಿ
ಚಂದ್ರ ನನ್ನ ಕಡೆ ಗಮನ ಕೊಟ್ಟಿಲ್ಲ
ಫರವಾಗಿಲ್ಲ!
ಕಾದಿರಿಲಿಕ್ಕೆ
ಇನ್ನೂ ಆಯಸ್ಸು ಉಳಿದಿದೆ!