ಒದ್ದೆ ಕಣ್ಗಳು...
ಕವನ
ಎಲ್ಲೋ ಹುಟ್ಟಿ ಹೇಗೋ ಬೆಳೆದು
ಗರಿಗೆದರಿ ಹಾರುತ ಸಂಭ್ರಮಿಸುವ ಕ್ಷಣ
ನವಿರಾಗಿ ಬೀಸುತಿಹ ಬಿರುಗಾಳಿಯ
ಅಬ್ಬರಕೆ ಸಿಕ್ಕಿ ತಬ್ಬಿಬ್ಬಾದ ಪ್ರಣಯ ಪಕ್ಷಿಯಂತಾಗಿದೆ
ಅವಳ ಸ್ಥಿತಿ.
ಆರ್ಭಟಿಸುವ ಯತ್ನ ಮೌನವನು ಧರಿಸಿ,
ಪರಿತಪಿಸಿಹಳು ಸೋಲುತ್ತಿದ್ದಿನೇನೋ ಎಂದು ಹವಣಿಸಿ.
ಸೋಲೊಪ್ಪುವ ಸ್ಥಿತಿಯಲ್ಲಿ ಅವಳಿಲ್ಲ,
ಗೆಲುವೂ ಇನ್ನೂ ಅವಳತ್ತ ಸುಳಿದೇ ಇಲ್ಲ,
ಕಾಯುವ ಕಾತುರತೆಯೂ ಅವಳಲಿಲ್ಲ.
ಭರವಸೆಗಳೆಲ್ಲಾ ದು:ಖದ ಕರಿಛಾಯೆಯೊಳಗೆ ಅಡಗಿರಲು
ಕುಳಿತಿಹಳು, ತನ್ನದಲ್ಲದ ತಪ್ಪಿಗೆ ತನ್ನನೇ ಶಪಿಸುತ್ತಾ...
ಹಲವಾರು ಕಥೆಗಳನ್ನು ಹೇಳುತ್ತಿರುವಂತೆ ಕಾಣುತಿದೆ
ಪಕ್ಕದ ಮನೆಯ ಮಗುವಿಗೂ ಇವಳ ಮುಖ.
ತನ್ನ ಪುಟ್ಟ ಮಗುವಿಗಿದಾವುದರ ಅರಿವಿಲ್ಲ ಇನ್ನೂ,
ಆಡಿಸುತಿದೆ ಆಟಿಕೆಗಳ.
ಗಂಡ. ಮನದ ‘ಮನೆ’ಯೊಳಗಿದ್ದೂ ಇಲ್ಲದಂತೆ...
ಅಲ್ಲಿಲ್ಲ ಯಾರಿಗೂ ಹಂಬಲ, ಕಥೆ ಕೇಳಲು.
ಅವರವರ ಲೋಕದೊಳಗೆ ಅವರು, ಇವರು, ಎಲ್ಲರೂ...
Comments
ಉ: ಒದ್ದೆ ಕಣ್ಗಳು...
In reply to ಉ: ಒದ್ದೆ ಕಣ್ಗಳು... by raghumuliya
ಉ: ಒದ್ದೆ ಕಣ್ಗಳು...