ಒಪ್ಪಂದದ ಸಂಬಂಧ
ಕವನ
ಅವರೊಳಗೆ ನಡೆದಿದ್ದ ಆ ಒಂದು ಒಪ್ಪಂದ
ಈತನಕ ಉಳಿದಿತ್ತು ಈರ್ವರಲಿ ಸಂಭಂದ
ಅದು ಈಗ ಹಳತಾಯ್ತು, ಅನುಬಂಧ ಹಳಸಿತ್ತು
ಬೇರ್ಪಡುವ ಕಾಲವದು ಬಳಿಗೆ ಬಂದಾಯ್ತು
ಒಲವಿದ್ದ ಆ ದಿನದೆ ಮೈಮರೆತು ಜೊತೆಯಾಗಿ
ಉದರದಲಿ ಚಿಗುರೊಡೆದು ಒಂದಾದ ಫಲವಾಗಿ
ಇಬ್ಬರಿಗು ಬೇಕಿಲ್ಲ,ಯಾರೀಗ ಹೊರಬೇಕು
ಪಾಲನೆಯ ಹೊಣೆ ಹೊರಲು ಮನವಿರಲು ಬೇಕು
ದಾಹವನು ತೀರಿಸಲು ಬೇಕಿತ್ತು ಜೊತೆಯೊಂದು
ಉತ್ಸಾಹ ಇಳಿದಾಗ ನಡುವಲ್ಲಿ ಬಿರುಕೊಂದು
ಉತ್ತರಕೆ,ದಕ್ಷಿಣಕೆ ಮುಖಮಾಡಿ ನಿಂತಿರಲು
ಹಡೆದಿರುವ ಕುಡಿಯಿರಲು ಯಾರೀಗ ದಿಕ್ಕು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
