ಕಣ್ಣ ಕನ್ನಡಿಯೊಳಗಿಳಿದು

ಕಣ್ಣ ಕನ್ನಡಿಯೊಳಗಿಳಿದು

ಬರಹ

ನನ್ನ ಕಣ್ಣ ಕನ್ನಡಿಯೊಳಗಿಳಿದು ನೋಡು ನಿನ್ನ ರೂಪವ
ಓ ಚೆಲುವೆಯೆ ನಿನ್ನ ಚೆಲುವಿನ ಅರಿವು ನಿನಗಿದೆಯೆ
ಓ ಮನವೆ ಈ ಚೆಲುವೆಯ ಮನದಲಿ ನೀನಿರುವೆಯೆ

ನಿನ್ನ ಹಾಲ್ಗೆನ್ನೆಯ ನೋಡಿ ಬೆಳದಿಂಗಳನು ಮರೆತೆ
ತಂಗಾಳಿ ಜೊತೆಸೇರಿ ನನ್ನುಸಿರಲಿ ಬೆರೆತೆ
ನಿನ್ನ ನಸುನಗೆಯನು ನೋಡಿ ಹಸಿವೆಯನು ಮರೆತೆ
ರಾಗದ ಜೊತೆಸೇರಿ ಹಾಡಿನೊಳು ಬೆರೆತೆ

ಢವ ಢವ ಢವ ಎದೆ ಬಡೆತದಲಿ ನಿನ್ನನು ಕರೆದೆ
ಗೆಜ್ಜೆಯ ಜೊತೆಸೇರಿ ಪ್ರತಿ ಹೆಜ್ಜೆಯಲಿ ಬೆರೆತೆ

ನಿನ್ನ ಅದರುವ ಅಧರವ ನೋಡಿ ಮೌನವ ಕಲೆತೆ
ಸವಿಜೇನ ಜೊತೆಸೇರಿ ಮುತ್ತಿನೊಳು ಬೆರೆತೆ
ನಿನ್ನ ಮಿನುಗುವ ನಯನವ ನೋಡಿ ಕಣ್ ಬೊಟ್ಟನು ಬರೆದೆ
ದಾರಿಯ ಜೊತೆಸೇರಿ ಗುರಿಯೊಳು ಬೆರೆತೆ

ತಡಬಡಿಸುವ ಮನದಲ್ಲಿ ಮಳೆಬಿಲ್ಲನು ಕೊರೆದೆ
ನವಿಲಿನ ಜೊತೆಸೇರಿ ಹೊಸ ಬಣ್ಣವ ಬರೆದೆ

ಓ ಚೆಲುವೆಯೆ ನಿನ್ನ ಚೆಲುವಿನ ಅರಿವು ನಿನಗಿದೆಯೆ
ಓ ಮನವೆ ಈ ಚೆಲುವೆಯ ಮನದಲಿ ನೀನಿರುವೆಯೆ