ಕಣ್ ಹನಿಗಳಲ್ಲಿ ತುಂಬಿರುವೆ.......ಓ ಸಖಿಯೇ.........
ಕಣ್ಣುಗಳಲ್ಲಿ ಕಾಣದೆ ಮನವೆಂದು ಮರೆಯದೆ
ಮನದಲಿ ಮನೆ ಮಾಡಿರುವೆ
ಕಾಡುವ ನೆನಪಲಿ ಸುಖವೆನಿದೆಯೆ
ಎಲ್ಲ ದೇವರ ವಿದಿಯೆ...................
ಬೆಸರದ ಬದುಕ್ಕಿಲ್ಲಿ ಸುಖ ಕೊಂಡೊಯ್ದು....
ಕೊಟ್ಟೆಯ ಎಲ್ಲ ದುಃಖ ನನಗೆ
ನಿನ್ನಿಲ್ಲದ ಬಾಳು ಬಾಳಲ್ಲ
ನಿನ್ನಿಲ್ಲದೆ ಬದುಕ್ಕಿಲ್ಲ......
ಉಸಿರಿದ್ದು ಸತ್ತಂತೆ,ಕಣ್ಣಿದ್ದು ಕುರುಡಂತೆ
ಬರಿದಾಯ್ತು ಬದುಕು ನೀನಿಲ್ಲದೆ
ಮನಸಿಗೆ ಶಾಂತಿಯಿಲ್ಲ,ಸವಿಯಾದ ಮಾತಿಲ್ಲ
ಮರೆತವೆ ಆ ಎಲ್ಲ ಕೊಟ್ಟ ಮಾತುಗಳು.....................
ಉಸಿರಿರುವ ತನಕ ಉಸಿರಾಗಿರುವೆ ಎಂದೆ
ಹೃದಯಕ್ಕೆ ಬಡಿತವಾಗುವೆ ಎಂದೆ
ಕೊಟ್ಟ ಬರವಸೆಗಳೆಲ್ಲ ಗಾಳಿಮಾತಾಯ್ತೆ...
ಜಂಟಿಯಾದ ಬಾಳಿಗೆ ಒಂಟಿ ಮಾಡಿದೆಯಲ್ಲೆ..............
ಹೆದರಬೇಡ ನಾನಿಲ್ಲವೆ ಬಾಳಿನಲ್ಲಿ ಎಂದೆ
ಕೊನೆಗೊ ತಪಿದೆಯ,ಆಡಿದ ಮಾತ
ಅದುವೇ ವಿದಿಯ ಆಟ........
ನನ್ನ ಬಿಟ್ಟು ನೀ........
ಚಿರನಿದ್ರೆಗೆ ಶರಣಾದರೆ ನನಗೆನೆ ಇಲ್ಲಿ ಕೆಲಸ
ಒಂಟಿ ಬಾಳಿಲ್ಲಿ ತರವಲ್ಲ ಕಣೆ.
ಬರುವೆ ನಿನ್ನಯ ಲೋಕಕ್ಕೆ..............
ಕಣ್ಣಿನ್ನಲ್ಲಿ ಹನಿಗಳು ತುಂಬಿ
ತಡೆಯುತ್ತಿವೆ ಆಡುವ ಮಾತನು
ಬಿಕ್ಕಳಿಸಿ ಬರುತ್ತಿದೆಯೆ ದುಃಖ.
ಕಣ್ಣಿರೊರಸುವರಾರೆ ನನಗೆ........
ಅದಕ್ಕೆ ಬರುವೆನೆ ನಿನ್ನಯ ಬಳಿಗೆ.........ಓ ಸಖಿಯೇ............