ಕನ್ನಡದ ತೇರು

ಕನ್ನಡದ ತೇರು

ಬರಹ

ಸುಮಾರು ಎರಡುವರೆ ಸಾವಿರ ವರುಷಗಳ ಇತಿಹಾಸವಿರುವ ಕನ್ನಡಕ್ಕೆ ತನ್ನದೇ ಆದ ವಿಶಿಷ್ಟತೆಗಳಿವೆ. ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡ ಈಗ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಗರಿಯನ್ನು ಮುಡಿದುಕೊಂಡಿದೆ. ಕನ್ನಡದ ಕೆಲಸಗಳು ಈಗಲಾದರೂ ಆಗಬೇಕಾಗಿದೆ. ಕರ್ನಾಟಕದಲ್ಲಿ ಸಮರ್ಪಕವಾಗಿ ಕನ್ನಡ ಆಡಳಿತ ಭಾಷೆ ಜಾರಿಯಾಗಬೇಕಾಗಿದೆ. ಕನ್ನಡದಲ್ಲಿರುವ ಎಲ್ಲರಲ್ಲೂ ಕನ್ನಡದ ಜಾಗೃತಿ ಮೂಡಿಸಬೇಕಾಗಿದೆ.  ಕನ್ನಡದ ಕೀರ್ತಿ ಬೆಳಗಲು ಬೇಕಾದ ಸ್ಪೂರ್ತಿ ಕವಿಗಳಲ್ಲೇ ಸಾಕಷ್ಟಿದೆ..

ಕುವೆಂಪುರವರವರ ಕೆಳಗಿನ ಕವಿತೆಗಳ ಸಾಲುಗಳಲ್ಲಿ ಕನ್ನಡಾಭಿಮಾನ ನೋಡಬಹುದಾಗಿದೆ.

೧.

 ಕನ್ನಡ ಎನೆ ಕುಣಿದಾಡುವುದೆನ್ನದೆ
ಕನ್ನಡ ಎನೆ ಕಿವಿನಿಮಿರುವುದು |
ಕಾಮನಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು

೨.

 ಬಾರಿಸು ಕನ್ನಡ ಡಿಂಡಿಮವ,
 ಓ ಕರ್ನಾಟಕ ಹೃದಯ ಶಿವ!

೩.

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ... ಕನ್ನಡವೇ ನಿತ್ಯ..

ಕೆ.ಎಸ್.ನಿಸಾರ್ ಅಹಮದ್ ರವರ ಕವಿತೆಯಲ್ಲಿ ಸದಾ ನಿತ್ಯ ಉತ್ಸವವನ್ನೇ ಮಾಡಿದ್ದಾರೆ.

ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದಲಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ
ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೆ ನಿತ್ಯೋತ್ಸವ

ಕನ್ನಡದ ಕೀರ್ತಿ ವಿಶ್ವ ಮಟ್ಟದಲ್ಲಿ ಬೆಳಗಲಿ.. ಜೈ ಕರ್ನಾಟಕ ಮಾತೆ.....