ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ

ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ

ಬರಹ

ಪುಣೆಯಲ್ಲಿನ CDAC ನಲ್ಲಿ ಸದ್ಯದಲ್ಲೆ ಭಾರತೀಯ ಎಲ್ಲಾ ಭಾಷೆಗಳ ಇನ್‍ಸ್ಕ್ರಿಪ್ಟ್‍ ಕೀ ಲೇಔಟ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಒಂದು ಸಮಾವೇಶ ನಡೆಯುವ ಸಾಧ್ಯತೆ ಇದೆ(ದಿನಾಂಕವಿನ್ನೂ ನಿಗದಿತಗೊಂಡಿಲ್ಲ). ಇನ್‍ಸ್ಕ್ರಿಪ್ಟ್ ಒಂದೇ ಅಲ್ಲದೆ ಬೇರಾವುದೆ ಕೀ ಲೇಔಟ್(ಇನ್‍ಸ್ಕ್ರಿಪ್ಟ್ ಹಾಗು ಕೆಜಿಪಿ) ಗಳಿಗೆ ಸಂಬಂಧಪಟ್ಟ ಯಾವುದೆ ತೊಂದರೆಗಳಿದ್ದರೂ ಅಲ್ಲಿ ಚರ್ಚಿಸಲಾಗುವುದು. ಆದ್ದರಿಂದ ನಿಮಗೆ ಅಂತಹಾ ಯಾವುದೆ ಸಮಸ್ಯೆ ಕಂಡು ಬಂದಿದ್ದಲ್ಲಿ ಇಲ್ಲಿ ತಿಳಿಸಿ. ನಾನು ಅಲ್ಲಿ ಭಾಗವಹಿಸುವ ಸಂಭಾವ್ಯವಿರುವುದರಿಂದ ಆ ಸಮಸ್ಯೆಗಳನ್ನು ಅಲ್ಲಿ ಚರ್ಚೆಗೆ ಇರಿಸಬಹುದಾಗಿದೆ.

ಅಂದ ಹಾಗೆ ಸದ್ಯದಲ್ಲಿನ ಕೆಜಿಪಿ ಕೀ ಲೇಔಟ್‍ ಸರಿಯಾಗಿ ಕೆಲಸ ಮಾಡುತ್ತಿಲ್ಲ.  ಇದಕ್ಕೆ  ಮೈಸೂರಿನ ಶ್ರೀಧರ್ ಅವರು ಪರಿಹಾರವನ್ನು ಕಂಡು ಹಿಡಿದಿದ್ದು, ಅದು ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ  ಅದು ಸಾರ್ವಜನಿಕವಾಗಿ ಎಲ್ಲಾ ಲಿನಕ್ಸ್‍ ವಿತರಣೆಗಳಲ್ಲಿ ಲಭ್ಯವಾಗಬೇಕೆಂದರೆ ಇನ್ನೂ  ಅಪ್‍ಸ್ಟ್ರೀಮ್‍ನಲ್ಲಿ ಸೇರಿಸಲ್ಪಡಬೇಕಿದೆ.  ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮಿಕ್ಕುಳಿದ ಕೀ ಲೇಔಟ್‍ಗೆ ಸಂಬಂಧಿಸಿದ ಏನೆ ಸಮಸ್ಯೆಗಳಿದ್ದರೂ ಇಲ್ಲಿ ತಿಳಿಸಿ ಅಥವ ನನಗೆ ನೇರವಾಗಿ ಮೈಲ್ ಮಾಡಿ.