ಕಪ್ಪು ಹೂಗಳು
ಕವನ
ಸ್ವಾಭಿಮಾನದಿ ಬೀಗುವ, ಮೊನಚು ನಗುವಿನ
ಬಂಡಾಯ ಭಾವ ಸುಮ ಪರಿಮಳದ
ಬೀದಿ ಬದಿಯ ಕೆಸರಿನೆದೆಯ ಮೇಲೆ ಕೆಂಪು
ಪತಾಕೆಯ ನೀಲಿ, ಹಳದಿ ಬೇಲಿ ಹೂಗಳು.
ಬಾಗಿಸುತ್ತದೆ ನೀರು, ಗೊಬ್ಬರ ನಿಯತ್ತು
ಮಮತೆ ದೇಶಿಯತೆ ಅಪ್ಯಾಯ ಮಾನ ತಾಕತ್ತು
ಕಡುಗಂಧದ ಅಂದಕ್ಕೆ ಪ್ರತಿ ಸವಾಲು
ಉಳಿದೆಲ್ಲಾ ಕೈತೋಟದೂಗಳ ನಿವಾಳಿಸುವಿಕೆ.
ಕತ್ತಲಡಿಯ ಕಪ್ಪು ಮಣ್ಣಿನಲ್ಲಿ ನಗುವ
ಹಸಿದ ಎಲ್ಲರೆದೆಯಲ್ಲಿ ಒಂದಾಗಿ ಬೆಳೆವ
ನೋವ ಕದ ಮುಚ್ಚಿ ಎದೆ ಎತ್ತಿ ಕಣ್ಮನ ಸೆಳೆವ
ಕಪ್ಪು ಹೂಗಳು ಮತ್ತು ಹೆಳೆವ ಸಮಾಜ