ಕಲೆಯೆಂಬ ಬಾಲ್ಯಾವಸ್ಥೆಯ ಸಾಧನೆ ಮಾಡಿ ಬದುಕಿದರೆ ತೊಗಲಿನ ಆಕಳಿಕೆ ಖಂಡಿತ ಶೀಘ್ರ!: ಗಾದೆಗೊಂದು ಗುದ್ದು ಭಾಗ ೪
ಬರಹ
(೧೬) ಕಲೆಯು ತೊಗಲಿದ್ದಂತೆ. ತಿರುಳಿದ್ದಂತೆ ಅದು ಮುದಿಯಾಗಿ, ಹಿಗ್ಗಿ ಕುಗ್ಗುತ್ತದೆ. ಆದ್ದರಿಂದ ಚರ್ಮದ ಆಳಕ್ಕಿಳಿವ ಬದಲು ಚರ್ಮವಾಗುವುದೇ ಕಲೆ!
(೧೭) ಬಾಲ್ಯಾವಸ್ಥೆಯ ಮೂರ್ಖತನದಿಂದ ತಪ್ಪಿಸಿಕೊಳ್ಳುವದನ್ನು ಪ್ರೌಢ ಬದುಕು ಎನ್ನುತ್ತೇವೆ.
(೧೮) "ಏನಾದರೂ ಸಾಧನೆ ಮಾಡುವುದು ಅಥವ ಮಾಡದಿರುವುದು" ಎಂಬುದೊಂದು ಆಯ್ಕೆಯಲ್ಲ. ಅದೊಂದು ಹೇಳಿಕೆಯಷ್ಟೇ!
(೧೯) ಕೊಲ್ಲಬೇಕೆಂಬ ಮನುಷ್ಯನ ಮೂಲಭೂತ ತುಡಿತದ ವಿರುದ್ಧ ಅಸಹಾಯಕತೆಯ ಹೇಳಿಕೆಯೇ, "ಬದುಕಿ, ಬದುಕಲು ಬಿಡಿ!" ಎಂಬ ನಾಣ್ನುಡಿ.
(೨೦) ಗುರುವಿಗೂ ಶಿಷ್ಯನಿಗೂ ಇರುವ ಮೂಲಭೂತ ವ್ಯತ್ಯಾಸವೆಂದರೆ, ಗುರುವು ಕಾರ್ಯನಿಮಿತ್ತನಾಗಿರುವಾಗ ಆಕಳಿಸುವ ಅವಕಾಶವಿರುವುದಿಲ್ಲ!