Skip to main content
ಕವನ
ಮುಗಿಲ ತಾರೆಯ ಮಡಿಲಲಿ
ನಿನ್ನ ನಗುವ ಕಣ್ಣಲಿ
ಮಳೆಬಿಲ್ಲಿನ ಸುಖದ ರಂಗಲಿ
ಮನ ಇನಿಯನ ಪ್ರೀತಿಯಲಿ
ನನ್ನ ಹೃದಯ ಮಿಂಚಿದೆ
ನಕ್ಕು ನಲಿದು ಹಾರಾಡಿದೆ
ಪ್ರೀತಿಯ ತೆರೆಯಲಿ ಮುಳುಗಿದೆ
ನೀ ಪ್ರೇಮದ ಕವನ ಹಾಡಿದೆ
ನೆಲುಮೆಯ ಪತ್ರವ ಬರೆದಿಹೆ
ಮುಗಿಲ ತಾರೆಯ ಮಡಿಲಲಿ
ಮಧುಚಂದ್ರನ ಬೆಳಕಲಿ
ತನು ಮನವು ನಿನ್ನಲಿ
ಮನ ಮುಳುಗಿದೆ ಪ್ರೀತಿಯಲಿ