ಕಲ್ಲಂಗಡಿ ಹಣ್ಣಿನ ಗೊಜ್ಜು
ಬೇಕಿರುವ ಸಾಮಗ್ರಿ
ಬೀಜ, ಸಿಪ್ಪೆ ತೆಗೆದ ಕಲ್ಲಂಗಡಿ ಹಣ್ಣಿನ (ಬಚ್ಚಂಗಾಯಿ) ತಿರುಳು - ೨ ಕಪ್, ಒಣ ಮೆಣಸಿನ ಕಾಯಿ - ೪, ತೆಂಗಿನ ತುರಿ - ೧ ಕಪ್, ಎಳ್ಳು ಹುಡಿ - ೧ ಚಮಚ, ಸಾಸಿವೆ - ಅರ್ಧ ಚಮಚ, ಬೆಲ್ಲದ ಹುಡಿ - ೧ ಚಮಚ, ಹುಣಸೆ ಹಣ್ಣು - ೧ ಸಣ್ಣ ತುಂಡು, ಒಗ್ಗರಣೆಗೆ - ಎಣ್ಣೆ ೩ ಚಮಚ, ಸಾಸಿವೆ ಕಾಳು - ಅರ್ಧ ಚಮಚ, ಇಂಗು - ಕಾಲು ಚಮಚ, ಅರಶಿನ ಹುಡಿ - ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ತೆಂಗಿನ ತುರಿ, ಹುಣಸೆ ಹಣ್ಣು, ಒಣ ಮೆಣಸಿನ ಕಾಯಿ, ಎಳ್ಳು ಹುಡಿ, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಕಲ್ಲಂಗಡಿ ಹಣ್ಣಿನ ತಿರುಳು, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ ರುಚಿಯಾದ ಕಲ್ಲಂಗಡಿ ಹಣ್ಣಿನ ಗೊಜ್ಜು ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ಸವಿಯಲು ರುಚಿಕರ.