ಕಾಂಪ್ಲೆಕ್ಸ್ friendship

ಕಾಂಪ್ಲೆಕ್ಸ್ friendship

ಬರಹ
iendship’ನಲ್ಲಿ ನಾನಾ ವಿಧ. ಸದ್ಯಕ್ಕೆ ಮೂರನ್ನು ತಿಳಿದುಕೊಳ್ಳೋಣ .... ಸಿಂಪಲ್ friendship ಅಂದರೆ ಎದುರಿಗೆ ಸಿಕ್ಕಾಗ ಯಥಾಶಕ್ತಿ ಕಿಸಿಯುವಿಕೆ. ಅಂದರೆ ತುಟಿ ಅಂಚಿನ ನಗು, ಒಂದೇ ಒಂದು ಹಲ್ಲು ತೋರಿಸಿ ನಗು, ಬಾಯನ್ನು ಸ್ವಲ್ಪವೇ ಹಿಗ್ಗಿಸಿ ನಗು ... ಹೀಗೆ ಯಥಾಶಕ್ತಿ .... ಬಾಯಿ ಇದ್ದಷ್ಟು ಅಥವಾ ಹಲ್ಲಿನ ಬಣ್ಣದ ಮೇಲೆ ಅವಲಂಬಿತವಾಗಿ .... 
ಎರಡನೆಯದು, ಕಾಂಪೌಂಡ್ friendship. ಕೆಲಸ ಮುಗಿಸಿ ಗಂಡ ಮನೆಗೆ ಬಂದು ಅರ್ಧ ಘಂಟೆಯಾದರೂ ಒಂದು ಲೋಟ ಕಾಫಿ ಕೊಡದೆ, ಪಕ್ಕದಮನೆ ಪಂಕಜಮ್ಮನ ಜೊತೆ, ಕಾಂಪೌಂಡ್ ಬದಿಯಲ್ಲಿ ನಿಂತು ಮಿಕ್ಕೆಲ್ಲ ಮನೆಯ ವಿಷಯದ ಬಗ್ಗೆ ಮಾತನಾಡುವುದು. 
ಮೂರನೆಯದು, ಅಂದರೆ ಇಂದಿನ ವಿಚಾರವಾದ ಕಾಂಪ್ಲೆಕ್ಸ್ friendship.
ನಾನು ಕಾಂಪ್ಲೆಕ್ಸ್ ಅಂದಾಗ ನೀವು ಸಿಕ್ಕಾಪಟ್ಟೆ complicated ಆಗಿ ಯೋಚನೆ ಮಾಡಬೇಡಿ. ಇದು ನನ್ನ ಹಾಗೂ ಸುಬ್ಬುವಿನ friendshipಊ ... ಇನ್ನು ಕಾಂಪ್ಲೆಕ್ಸ್ ಅಂದರೇನು? ಅದು ಸುಬ್ಬು specialಉ ... ತಾನು ಕಡಲೇಕಾಯಿ ತಿನ್ನುತ್ತಾ ಇದ್ದೀನಿ ಆದರೆ ಅವನು ಗೋಡಂಬಿ ತಿಂತಾ ಇದ್ದಾನೆ ... ಅನ್ನೋ ಸುಬ್ಬುವಿನ ಕಾಂಪ್ಲೆಕ್ಸು ... ಆ ಇನ್ನೊಬ್ಬನ ಮುಂದೆ ಇವನಿಗೆ inferiority ಕಾಂಪ್ಲೆಕ್ಸು ... ಅಂದರೆ ಕೀಳರಿಮೆ .... 
ಯಾರಿಗೂ ಈ ಸುಬ್ಬುವಿನ ಗುಣ ಇಷ್ಟವಾಗದೆ ಇರುವುದರಿಂದ ಅವನಿಗೆ ಇರುವ ಸ್ನೇಹಿತ ಅಂದರೆ ನಾನೊಬ್ಬನೇ ... ನಾನು ಹೇಗೆ ಇವನಿಗೆ ತಗಲಿಹಾಕಿಕೊಂಡು ಇನ್ನೂ ನೇತಾಡ್ತಾ ಇದ್ದೀನಿ ಅಂಬೋದು ಚಿದಂಬರ ರಹಸ್ಯ ... ಯಾಕೇಂದ್ರೆ ಅದು ನನಗೇ ಗೊತ್ತಿಲ್ಲ ! ಇದು ಇಂದು ನೆನ್ನೆಯದಲ್ಲ .... ಬಹಳ ವರ್ಷಗಳದ್ದು ... ಇಂತಹ ಕಾಂಪ್ಲೆಕ್ಸ್ ಸುಬ್ಬುವಿನ ಮತ್ತು ನನ್ನ ಮಧ್ಯೆ ಇರುವ friendshipನ ವಿಚಾರಕ್ಕೆ ನಾನಿಟ್ಟ ಕಾಂಪ್ಲಿಕೇಟೆಡ್ ಹೆಸರು ’ಕಾಂಪ್ಲೆಕ್ಸ್ friendship’ ಅಂತ.....
ಅವನಿಗೆ ತಿಳುವಳಿಕೆ ಹೇಳಲು ನಾನೂ ಬಹಳಷ್ಟು ಸಾರಿ ಪ್ರಯತ್ನ ಪಟ್ಟಿದ್ದೇನೆ ... ಸುಬ್ಬು ಇನ್ನೂ ಸುಧಾರಿಸಿಲ್ಲ ... ನನ್ನ ಪ್ರಯತ್ನ ಕಂಡು ಯಾರೋ ಹೇಳಿದರು ’ನೀನು ಅವನಂತಾಗಬಹುದು ಅಷ್ಟೇ.. ಆದರೆ ಅವನು ಸುಧಾರಿಸೋದಿಲ್ಲ’. ಆದರೆ ನನಗೆ ಮಾತ್ರ ಇವನು ಒಂದಲ್ಲಾ ಒಂದು ದಿನ ತಾನು ಇನ್ನೊಬ್ಬರಿಗಿಂತ ಮೇಲಿದ್ದೀನಿ ಎಂಬ ಸಂದೇಶ ಹೊತ್ತು ತರುತ್ತಾನೆ ಎಂಬೋ ಗ್ಯಾರಂಟಿ .... 
ಸುಬ್ಬುವಿಗೆ ಎರಡನೇ ವರ್ಷ ಪಿಯುಸಿ’ಯಲ್ಲಿ ಕಡಿಮೆ ಅಂಕ ಬಂದು ಇವನ ಪರಿಚಯದವರೆಲ್ಲಾ ಇಂಜಿನೀರಿಂಗು ಅಥವಾ ಡೆಂಟಲ್ಲು ಅಂತ ಆಚೆ ಈಚೆ ಹೋದಾಗ ಇವನು ಮೆಂಟಲ್ ತರಹ ಆಡ್ತಿದ್ದ. ಆ ಸಮಯದಲ್ಲಿ ನಾನೇನು ಹೇಳಿದರೂ ಇವನಿಗೆ ತಟ್ಟಲಿಲ್ಲ. ವಿಜ್ಞ್ನಾನ, ಗಣಿತ ನಮ್ಮಂತಹವರಿಗಲ್ಲ ಎಂಬೋ ತಾತ್ಸಾರ ಮೂಡಿಸಿಕೊಂಡು, ಎದುರಿಗೆ ಹಳೇ ಪರಿಚಯದವ್ರು ಕಂಡರೆ ಮುಖ ಮರೆಸಿಕೊಂಡು ಹೋಗೋ ಅಷ್ಟು ಕೀಳರಿಮೆ ಮೂಡಿಸಿಕೊಂಡ. 
ಓದು ಮುಗಿದ ಮೇಲೆ, ಕೆಲಸಕ್ಕೆ ಸೇರಿಕೊಂಡ ಸುಬ್ಬು. ತಾನು ಸೇರಿದ ಕೆಲಸದಲ್ಲಿ ಡ್ರಸ್ ಕೋಡ್ ಎಂಬುದೇನೂ ಇರಲಿಲ್ಲ. ಮೈ ಮೇಲೆ ಬಟ್ಟೆ ಇದ್ದರೆ ಸಾಕಿತ್ತು. ಒಮ್ಮೆ ಹೀಗೆ ಕೆಲವರು ಪರಿಚಯದವರನ್ನು ಸೂಟು-ಬೂಟು-ಟೈ’ನಲ್ಲಿ ನೋಡಿದಾಗ ಮತ್ತೆ ಕಾಂಪ್ಲೆಕ್ಸ್ ಶುರು. ಅವರೆಲ್ಲರಿಂದ ದೂರ ಸರಿದ.
ಹೀಗೇ ಕೆಲವು ವರ್ಷ ಕಳೆದ ಮೇಲೆ ಮದುವೆ ಆಯ್ತು. ತನ್ನ ಮದುವೆಗೆ ಹೆಚ್ಚು ಜನ ಬರಲಿ ಎಂಬ ಉದ್ದೇಶದಿಂದ ಸಿಕ್ಕವರಿಗೆಲ್ಲಾ ಕಾರ್ಡ್ ಹಂಚಿದ್ದ. ಕೆಲವರು ಬಂದರು ಹಲವಾರು ಜನ ಬರಲಿಲ್ಲ. ಇವನು ಕಾರ್ಡ್ ಕೊಟ್ಟನಲ್ಲ ಎಂದು ಅವರೂ ಇವನಿಗೆ ತಮ್ಮ ಮದುವೆ ಕಾರ್ಡ್ ಕಳಿಸಿದ್ದರು. ಒಂದೆರಡು ಮದುವೆಗೆ ಹೋದ ಆಮೇಲೆ ಬಿಟ್ಟ. ಯಾಕೆ ಅಂದಿರಾ? ಅಲ್ಲೂ ಕಾಂಪ್ಲೆಕ್ಸ್. ಇವನ ಮದುವೆ ಆಗಿದ್ದು ಒಂದು ಸಾಧಾರಣ ಛತ್ರ. ಇವನ ದುರಾದೃಷ್ಟ, ಮಿಕ್ಕವರದು ಧಾಮ್ ಧೂಮ್ ಎಂದು ದೊಡ್ಡ ಹೋಟೆಲ್’ಗಳಲ್ಲಿ ನೆಡೆದ ಮದುವೆ. 
ತಾನು ಕೈನೆಟಿಕ್ ಹೋಂಡ ಓಡಿಸಿದರೆ ಮಿಕ್ಕವರು ಕಾರು ... ಅಲ್ಲಿ ಕಾಂಪ್ಲೆಕ್ಸು ... ತಾನೊಂದು ಸಾಧರಣ ಕಂಪನಿಯಾದರೆ ಬೇರೆಯವರು ಅಮೇರಿಕ, ಯು.ಕೆ’ಗಳಲ್ಲಿ ಕೆಲಸ ... ಅಲ್ಲಿ ಕಾಂಪ್ಲೆಕ್ಸು ... ಬೇರೆಯವರು ಮೇನೇಜರ್ ಆಗಿದ್ದಾರೆ ತಾನು ಮೇನೇಜರ್ ಅಲ್ಲಾ ... ಅಲ್ಲಿ ಕಾಂಪ್ಲೆಕ್ಸು ... ಒಂದೇ ಎರಡೇ ?
ನಾನೂ ದೇಶ ಬಿಟ್ಟು ಹೊರದೇಶಕ್ಕೆ ಬಂದೆ ... ಸುಬ್ಬುವಿನ ಜೊತೆ ಈಗ ಕೇವಲ ಈ-ಮೈಲ್ ಸಂಪರ್ಕ ಮಾತ್ರ ... ಹೀಗೇ ಒಂದು ಸಾರಿ ಊರಿಗೆ ಹೋದಾಗ ಅಕಸ್ಮಾತ್ ಸಿಕ್ಕಿದ ... ನಾನು ಹೊರದೇಶದಲ್ಲಿ ಇದ್ದೀನಿ ಅನ್ನೋ ವಿಷಯಕ್ಕೆ ಇವನ ರೋಗ ಶುರು ಅಂತ ಅಂದುಕೊಂಡೆ ... ಆದರೆ, ಅಂಥಾದ್ದೇನೂ ಕಾಣಿಸಲಿಲ್ಲ... 
ಬದಲಿಗೆ, ’ನಿನ್ನ ಬರಹ ಓದುತ್ತಿರುತ್ತೇನೆ’ ಅಂತ ಮಾತ್ರ ಅಂದ .... ’ಚೆನ್ನಾಗಿರುತ್ತೆ ಅನ್ನೋ ಪ್ರಶಂಸೆಯಾಗಲಿ, ಕೆಟ್ಟದಾಗಿರುತ್ತೆ ಅನ್ನೋ ತೆಗೆಳಿಕೆಯಾಗಲಿ ಅಥವಾ ಹೀಗೆ ಬರೆಯಬಹುದಿತ್ತು ಎಂಬ ಸಲಹೆಯಾಗಲಿ ಏನೂ ಇರಲಿಲ್ಲ’. ಸುಮ್ಮನಾದೆ ಯಾಕೆಂದರೆ ಅಲ್ಲೂ ಎಲ್ಲಿ ಅವನಿಗೆ ಕಾಂಪ್ಲೆಕ್ಸ್ ಶುರುವಾಗುತ್ತೋ ಅಂತ ... 
ಮಾತಿನ ಮಧ್ಯೆ ನಾನೂ ಈ ನಡುವೆ ಬರೀತೀನಿ ಅಂದ .... 
ಬಹಳ ಸಂತೋಷದಿಂದ "ಅರ್ರೇ ! ಸುಬ್ಬು ... ಪತ್ರಿಕೆಗೋ, ಬ್ಲಾಗೋ, ಎಲ್ಲಿ ಬರೀತಿ, ಯಾವ ವಿಷಯದ ಬಗ್ಗೆ ಬರೀತಿ, ಹೇಳೋ" ಅಂತ ಆತುರ ತೋರಿದೆ ...
ಅವನು ನುಡಿದ ... 
ನಾನು ಬಹಳ ವರ್ಷಗಳಿಂದ ಕಾದಿದ್ದ ದಿನ ... ಅಂದರೆ, ತಾನು ಇನ್ನೊಬ್ಬನಿಗಿಂತ ಮೇಲು ಎಂಬ ಭಾವ ಅವನಿಗೆ ಬರುತ್ತದೆ ಎಂಬ ದಿನ ... ಅದು, ಇದೇ ದಿನ ಎಂದು ನನಗೆ ಅರಿವಾಗಿರಲಿಲ್ಲ ... ನನಗೇ ಒದ್ದುಗೊಂಡು ಬರುತ್ತೆ ಎಂಬುದನ್ನಂತೂ ಖಂಡಿತಾ ನಿರೀಕ್ಷೆ ಮಾಡಿರಲಿಲ್ಲ ....
ಅವನು ನುಡಿದಿದ್ದ "ನಾನು ನಿನ್ನ ಹಾಗೆ ಕನ್ನಡದಲ್ಲಿ ಬರೆಯೋಲ್ಲ ಕಣೋ ...  my writings are always in English " ... ಅಂತ ! ಪಾಪಿ ಸುಬ್ಬು !!

friendship’ನಲ್ಲಿ ನಾನಾ ವಿಧ. ಸದ್ಯಕ್ಕೆ ಮೂರನ್ನು ತಿಳಿದುಕೊಳ್ಳೋಣ .... ಸಿಂಪಲ್ friendship ಅಂದರೆ ಎದುರಿಗೆ ಸಿಕ್ಕಾಗ ಯಥಾಶಕ್ತಿ ಕಿಸಿಯುವಿಕೆ. ಅಂದರೆ ತುಟಿ ಅಂಚಿನ ನಗು, ಒಂದೇ ಒಂದು ಹಲ್ಲು ತೋರಿಸಿ ನಗು, ಬಾಯನ್ನು ಸ್ವಲ್ಪವೇ ಹಿಗ್ಗಿಸಿ ನಗು ... ಹೀಗೆ ಯಥಾಶಕ್ತಿ .... ಬಾಯಿ ಇದ್ದಷ್ಟು ಅಥವಾ ಹಲ್ಲಿನ ಬಣ್ಣದ ಮೇಲೆ ಅವಲಂಬಿತವಾಗಿ .... 