ಕಾಕತಾಳೀಯ ಪಂದ್ಯ - ಭಾರತ ಹಾಗು ದಕ್ಷಿಣ ಆಫ್ರಿಕಾ (2006 ಹಾಗು 2010) .

ಕಾಕತಾಳೀಯ ಪಂದ್ಯ - ಭಾರತ ಹಾಗು ದಕ್ಷಿಣ ಆಫ್ರಿಕಾ (2006 ಹಾಗು 2010) .

ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕುತೂಹಲ ಘಟ್ಟ ತಲುಪಿ ಕೊನೆಗೂ ವಿಜಯಲಕ್ಷ್ಮಿ ಭಾರತಾಂಬೆಗೆ ಒಲಿದು ಜಯ ದೊರಕಿಸಿಕೊಟ್ಟಳು. ಈ ಪಂದ್ಯವು ಒಂದು ಸ್ಮರಣೀಯ ಹಾಗು ರೋಮಾಂಚನೀಯವು ಹೌದು, ಲಕ್ಷ್ಮಣ್ ಹಾಗು ಜಾಹೀರ್ ಖಾನ್ ರ ದ್ವಿತೀಯ ಇನ್ನಿಂಗ್ಸ್ ನ ಜೊತೆಯಾಟವು ನಿಜಕ್ಕು ಶ್ಲಾಘನೀಯ. ವಾಚಕರೆ, ನೋಡಿ ಕಾಕತಾಳೀಯ ಎಷ್ಟರ  ಮಟ್ಟಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದರೆ ಇವರಿಬ್ಬರ ಜೊತೆಯಾಟವೆ ಒಂದು ದೊಡ್ಡ ಉದಾಹರಣೆ. ಇವರೀರ್ವರ ಜೊತೆಯಾಟವು ಕೂಡ  2006 ರಲ್ಲಿ  ಭಾರತಕ್ಕೆ ಜಯವನ್ನು ಒದಗಿಸಲು ಇವರ ಜೊತೆಯಾಟದ ಪಾಲು ತಂಡಕ್ಕೆ ಎಷ್ಟು ಉಪಕಾರವಾಯಿತು  ಎಂಬುದು ಆಶ್ಚರ್ಯದ ಸಂಗತಿ.
 
2006 ಡಿಸೆಂಬರ್ ತಿಂಗಳಿನಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ನೇತೃತ್ವದಲ್ಲಿ  ಭಾರತ ದಕ್ಷಿಣ ಪ್ರವಾಸಕ್ಕೆ ಅನುವುಮಾಡಿಕೊಂಡಿತು. ಮೊದಲನೇ ಟೆಸ್ಟ್ ಪಂದ್ಯವು ಜೋಹನ್ನೆಸ್ಬುರ್ಗ್ ಕ್ರೀಡಾಂಗಣದಲ್ಲಿ, ರೋಮಾಂಚನ  ಹಾಗು ಕುತೂಹಲಭರಿತ ಪಂದ್ಯ. ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಮೊತ್ತ ಸೇರಿಸಿ ದಕ್ಷಿಣ ಆಫ್ರಿಕಾ ತಂಡವು ಕಡು ಅಲ್ಪ ಮೊತ್ತಕ್ಕೆ ತನ್ನೆಲ್ಲ ವಿಕೇಟ್ ಗಳನ್ನು ಕಳೆದುಕೊಂಡು, ಭಾರತಕ್ಕೆ ದ್ವಿತೀಯ ಇನ್ನಿಂಗ್ಸ್ ಆಡಲು ಅನುವುಮಾಡಿಕೊಟ್ಟಿತು.
 
ಭಾರತವು ದ್ವಿತೀಯ ಇನ್ನಿಂಗ್ಸ್ ನಲ್ಲಿ 148 ರನ್ನನ್ನು ಗಳಿಸುವಷ್ಟರಲ್ಲಿ ಏಳನೇ ವಿಕೇಟ್ ಕುಂಬ್ಳೆ ಯವರ ಮುಖಾಂತರ ಕಳೆದುಕೊಂಡು ತಂಡವು ಸಂಕಷ್ಟದ ಸ್ಥಿತಿಗೆ  ತಲುಪಿತು  (148 / 7 ), ಲಕ್ಷ್ಮಣ್ ಮುಂದಿನ ನಡೆಯ ಬಗ್ಗೆ ಯೋಚಿಸುತ್ತ ನಿಂತರು,  ನಂತರ ಬಂದ ಜಾಹೀರ್ ಖಾನ್ ಲಕ್ಷ್ಮಣ್ ಜೊತೆ ಒಡಗೂಡಿ  ತಮ್ಮಿಬ್ಬರ ಜೊತೆಯಾಟದಿಂದ ಭಾರತಕ್ಕೆ ಎಂಟನೆ ವಿಕೇಟಿಗೆ 70 ರನ್ ಉತ್ತಮವಾಗಿ ಸೇರಿಸಿ ಲಕ್ಷ್ಮಣ್ 218 ಕ್ಕೆ ನಿರ್ಗಮಿಸಿದರು (218  / 8 ) .  ಉತ್ತಮ ಹೋರಾಟ ಪ್ರದರ್ಶಿಸಿದ ನಮ್ಮ ಭಾರತ ತಂಡವು 123 ರನ್ನುಗಳಿಂದ ಜಯಭೇರಿ ಬಾರಿಸಿತು.


 



 ಇಲ್ಲಿರುವುದೇ ಕಾಕತಾಳೀಯ, ಈ ದಿನ ಮುಗಿದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಲ್ಲಿ 148 ರನ್ನನ್ನು ಗಳಿಸುವಷ್ಟರಲ್ಲಿ ಏಳನೇ ವಿಕೇಟ್ ಹರ್ಭಜನ್ ಸಿಂಗ್ ರ ಮುಖಾಂತರ ಕಳೆದುಕೊಂಡು ಭಾರತ ತಂಡವು  ಸಂಕಷ್ಟದ ಸ್ಥಿತಿಗೆ ತಲುಪಿತು (148 / 7 ), ಲಕ್ಷ್ಮಣ್ ಚಿಂತಾಕ್ರಾಂತರಾಗದೆ ನಂತರ ಬಂದ ಜಾಹೀರ್ ಖಾನ್ ಗೆ  ಧೈರ್ಯ ತುಂಬಿ, ಖಾನ್ ಲಕ್ಷ್ಮಣ್ ಜೊತೆ ಒಡಗೂಡಿ  ಭಾರತಕ್ಕೆ ಎಂಟನೇ ವಿಕೇಟಿಗೆ 70 ರನ್ ಉತ್ತಮವಾಗಿ ಸೇರಿಸಿದರು. ಜಾಹೀರ್ ಖಾನ್ ಉಪಯುಕ್ತ 27 ರನ್ನುಗಳನ್ನು ಸೇರಿಸಿ 218 ಕ್ಕೆ ನಿರ್ಗಮಿಸಿದರು (218 / 8 ). ಮತ್ತೊಮ್ಮೆ ಇವರ ಜೊತೆಯಾಟದಿಂದ ಭಾರತ ತಂಡವು ಇಂದು ರೋಮಾಂಚನಕಾರಿಯಾಗಿ ಜಯಭೇರಿಗಳಿಸಿತು.
 
ಮತ್ತೊಂದು ತಾಳೆಯ ಸಂಗತಿ ಎಂದರೆ ಈ ಪಂದ್ಯವು ಕೂಡ ಡಿಸೆಂಬರ್ ನಲ್ಲಿ ನಡೆದದ್ದು ವಿಸ್ಮಯಕಾರಿಯು ಹೌದು.


 


(ಚಿತ್ರ ಕೃಪೆ : Otago Daily Times)


 


ಸಂದೀಪ್ ಶರ್ಮ