ಕಾಡದಿರಲೆಂದಿಗೂ ಭೂತ ಭವಿಷ್ಯದ ಚಿಂತೆ!
ಬರಹ
ಸಖೀ,
ನೋಡು ಮರೆಯಾದ ಆ ಸೂರ್ಯ ಪಡುವಣದ ಕಡಲಲ್ಲಿ
ಸೆರೆಯಾದೆ ಇಲ್ಲಿ ನಾನು ನಿನ್ನ ಈ ಬಾಹು ಬಂಧನದಲ್ಲಿ
ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ
ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ
ಕೊಂಡೊಯ್ಯಲಿ ನಮ್ಮನ್ನುತ್ತುಂಗಕ್ಕೆ ಸುಖದ ಮತ್ತು ಏರಿ
ನೋಡಿಕೊಂಡಿರು ಬೀಳದಂತೆ ನಾನಿನ್ನ ತೆಕ್ಕೆಯಿಂದ ಜಾರಿ
ಹುಣ್ಣಿಮೆಯ ಚಂದಿರನು ನಗುವಂತೆ ಆ ಬಾನಂಗಳದಲ್ಲಿ
ತುಂಬಿ ತುಳುಕುತ್ತಿರಲಿ ನಲಿವು ನಮ್ಮೀ ಮನದಂಗಣದಲ್ಲಿ
ಮೂಡಣದಿ ನಾಳೆ ಮತ್ತೆ ಮೇಲೇರಿ ಬಂದಾಗ ಆ ನೇಸರ
ಕಾಯಕದ ಮೇಲೆ ಹೊರಟರೆ ನಾ ಪಡಬೇಡ ನೀ ಬೇಸರ
ನಮ್ಮ ಜೀವನ ಚಕ್ರ ಎಂದಿಗೂ ಸಾಗುತ್ತಿರಲಿ ಇಂತೆಯೇ
ಕಾಡದಿರಲಿ ನಮ್ಮನ್ನೆಂದಿಗೂ ಭೂತ ಭವಿಷ್ಯದ ಚಿಂತೆಯೇ
****************************