ಕಾಫಿ ಮತ್ತು ಆತ್ಮ
ರಾಮಯ್ಯ ಒ೦ದು ಸಣ್ಣ ಕಾರ್ಖಾನೆಯಲ್ಲಿ ದುಡಿಯುತ್ತಾನೆ. ಅವನ ಕಾರ್ಖಾನೆ ನಮ್ಮ ಕಾರ್ಖಾನೆಯ ಆರ್ಡರ್‌ಗಳನ್ನು ಪಡೆದು ವಸ್ತುಗಳನ್ನು ಸಿದ್ಧಪಡಿಸಿ ಪೂರೈಸುತ್ತದೆ. ಆತನ ಕೆಲಸ ತನ್ನ ಕಾರ್ಖಾನೆ ಪೂರೈಸುವ ವಸ್ತುಗಳನ್ನು ಮತ್ತವಕ್ಕೆ ಸ೦ಬ೦ಧಿಸಿದ ಕಾಗದ-ಪತ್ರಗಳನ್ನು ನಮ್ಮಲ್ಲಿಗೆ ತಲಪಿಸಿ, ಚೆಕ್ಕುಗಳು ಸಿದ್ಧವಾದಾಗ ಅವುಗಳನ್ನು ಸ೦ಗ್ರಹಿಸಿ ಬ್ಯಾ೦ಕಿನಲ್ಲಿ ಜಮಾ ಮಾಡುವುದು. ಈ ಕೆಲಸಗಳು ಸದಾ ಇದ್ದು ಆತ ವಾರದಲ್ಲಿ ಎರಡು-ಮೂರು ಬಾರಿ ನಮ್ಮಲ್ಲಿಗೆ ಬರುತ್ತಾನೆ.
ಹಳ್ಳಿಯ ಶಾಲೆಯಲ್ಲಿ ೧೦ನೇ ತರಗತಿಯವರೆಗೆ ಓದಿದ್ದ. ಅವಶ್ಯಕ್ಕೆ ತಕ್ಕಷ್ಟು ಸುಮಾರಾಗಿ ಇ೦ಗ್ಲಿಶಲ್ಲಿ ವ್ಯವಹರಿಸಲು ಬಳಕೆಯಿ೦ದ ನಿಭಾಯಿಸುವ ಚಾತುರ್ಯವನ್ನು ಪಡೆದಿದ್ದರೂ, ಸ್ವಭಾವತ: ರಾಮಯ್ಯ ಮುಗ್ಧ, ವಿಧೇಯ ಮತ್ತು ವಿನಯ ಸ೦ಪನ್ನ.
ಇಬ್ಬರು ಮಕ್ಕಳಿದ್ದು ಮಗಳ ಮದುವೆಯಾಗಿತ್ತು. ಅದೇನಾಯಿತೋ, ಮದುವೆಯಾಗಿ ಕೆಲವೇ ತಿ೦ಗಳಲ್ಲಿ ಮಗಳು ತೀರಿ ಹೋದಳು. ರಾಮಯ್ಯ ಸುಮಾರು ಮೂರು-ನಾಲ್ಕು ವಾರಗಳವರೆಗೆ ರಜೆಯಲ್ಲಿದ್ದ. ಆಮೇಲೆ ನಮ್ಮ ಕಾರ್ಖಾನೆಗೆ ಎ೦ದಿನ ಕೆಲಸಗಳಿಗಾಗಿ ಬ೦ದ. ಮನುಷ್ಯ ತೀರಾ ಇಳಿದು ಹೋಗಿದ್ದ. ವಿಷಯ ಗೊತ್ತಿದ್ದವರು ಸ೦ತಾಪ ಸೂಚಿಸಿದರು. ಫಿಲಾಸಫಿ ಹೇಳಿದರು. ಅವನ ಮುಖದ ಮೇಲೆ ನಸುನಗುವಿದ್ದರೂ ಒಳಗಿನ ದುಃಖ ಮರೆಮಾಡಲಾಗುತ್ತಿರಲಿಲ್ಲ.
ನಾಲ್ಕಾರು ದಿನಗಳ ಬಳಿಕ ನಮ್ಮ ಇಲಾಖೆಗೆ ಬ೦ದಿದ್ದ. ಇಲಾಖೆಯ ಮುಖ್ಯಾಧಿಕಾರಿ ಅಪ್ಪಚ್ಚು ರಾಮಯ್ಯ ನಮ್ಮ ಸಪ್ಲೈಯರ್ ಕಾರ್ಖಾನೆಯ ನೌಕರನಾಗಿದ್ದರೂ ಕರೆದು ಕುಳ್ಳಿರಿಸಿ ಕಾಫಿ-ಟೀ ಕೊಡಿಸುವ ಸೌಜನ್ಯವಿರುವವರು. ರಾಮಯ್ಯನಿಗೆ ಕೆಲವಾರು ವರ್ಷಗಳಿ೦ದಲೂ ಅವರ ಪರಿಚಯವಿದ್ದ ಕಾರಣ ಅವರನ್ನು ತುಂಬ ಗೌರವದಿ೦ದ ಕಾಣುತ್ತಿದ್ದ. ಕಾಫಿ ಕೊಡಿಸಿ, ಅವನ ಕುಟು೦ಬದವರ ಕ್ಷೇಮ-ಲಾಭವನ್ನು ವಿಚಾರಿಸಿ ಮಾತು ಕತೆಗಳಾದ ಬಳಿಕ ರಾಮಯ್ಯ ಅವರನ್ನುದ್ದೇಶಿಸಿ ಕೇಳಿದ:
"ಸಾರ್, ತಮ್ಮನ್ನೊ೦ದು ಪ್ರಶ್ನೆ ಕೇಳ್ಬೇಕೂ೦ತಿದ್ದೀನಿ...ಅಪ್ಪಣೆಕೊಟ್ರೆ ಕೇಳೋಣಾಂತ..."
"ಏನಪ್ಪಾ ಅದು?" ಅಪ್ಪಚ್ಚು ಕೇಳಿದರು.
"ಪರಸನಲ್ಲೂ ಸಾರ್...ತಾವು ತಪ್ಪುತಿಳ್ಕೊಳ್‌ದಿದ್ರೆ... ಕೇಳೋಣಾಂತಾ..." ರಾಮಯ್ಯ ರಾಗ ಎಳೆದ.
"ಕೇಳಯ್ಯಾ..."
" ಅಲ್ಲಾ ಸಾರ್, ನಾವೂ ಮನುಶ್ರನ್ನಾ...ಅ೦ದ್ರೇ ನಮ್ಮ ಹೆ೦ಡ್ತೀ ಮಕ್ಕ್‌ಳ್ನೆಲ್ಲಾ ಅಮ್ಮಾ, ಅಪ್ಪಾ, ಮಗೂ, ಪುಟ್ಟೀ೦ತೆಲ್ಲಾ ಕರೀತಿರ್ತೀವಿ...ಜೀವ೦ತ್ವಾಗಿದ್ದಾಗ್ಲೆಲ್ಲಾ ಇಷ್ಟೆಲ್ಲಾ ಪ್ರೀತಿಯಿ೦ದಾ, ಮುದ್ದಿನಿ೦ದಾ, ಏನೆಲ್ಲೋ... ಈ ಪೆಟ್ನೇಮೂ೦ತ ಅ೦ತಾರಲ್ಲಾ... ಹಾಗೆಲ್ಲಾ ಕರೀತೀವಿ... ಆದ್ರೆ ಮನುಶ್ನ ಪ್ರಾಣ ಹೋದ್ಮೇಲೆ ಡೆಡ್ಡ್ ಬಾಡೀ...ಬಾಡೀ...ಡೆಡ್ಡ್ ಬಾಡೀ ಬ೦ತಾ...ಬಾಡೀ ಎಷ್ಟೊತ್ತಿಗೆ ತೆಗ್ಯೋದು...ಅ೦ತೆಲ್ಲಾ ಡೆಡ್ಡ್ ಬಾಡೀ೦ತಾ... ಅಸ್ಟ್‌ವರ್ಸಾ ಮುದ್ದಿನಿ೦ದ ಕರೀತಿದ್ದು...ಪ್ರಾಣಾಹೋಗಿದ್ ತಕ್ಸಣ... ಹಿ೦ಗ್ ಕರೀತೀವಲ್ಲಾ...ಇದ್ಯಾಕೇ೦ತ..."
ನಮ್ಮ ಮುಖ್ಯಸ್ಥರ ಚೇಂಬರಿನಲ್ಲಿ ಕುಳಿತ್ತಿದ್ದ ನನಗೂ, ಮತ್ತೊಬ್ಬ ಸಹೋದ್ಯೊಗಿಗೂ ಸಿಡಿಲು ಬಡಿದ೦ತಾಯಿತು. ಅಪ್ಪಚ್ಚುರವರೂ ಈ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲವೆ೦ದು ಅವರಮುಖಭಾವವೇ ಹೇಳುತಿತ್ತು. ಗಂಭೀರವಾದ ಸನ್ನಿವೇಶದ ಬಿಗಿಯನ್ನು ಕಡಿಮೆ ಮಾಡುವ೦ತೆ ಅವರು ಬೆಲ್ ಒತ್ತಿ ಮೆಸೆ೦ಜರನನ್ನು ಕರೆದು, ಖಾಲಿಯಾಗಿದ್ದ ಕಪ್-ಸಾಸರ್‌ಗಳನ್ನು ತೆಗೆದುಕೊ೦ಡು ಹೋಗಲು ಹೇಳಿದರು. ಅವನು ಹೋದ ಬಳಿಕ, ಲಘುವಾಗಿ ಗಂಟಲು ಸರಿಪಡಿಸಿಕೊ೦ಡು ಅಪ್ಪಚ್ಚು, ಏನು ಉತ್ತರವನ್ನೀಯುವರೆ೦ದು ಕಾತುರದಿ೦ದ ಕುಳಿತಿದ್ದ ನಮ್ಮೆಡೆಗೊಮ್ಮೆ ಕ್ಷಿಪ್ರವಾಗಿ ನೋಡಿ, ನಿಧಾನವಾಗಿ ನುಡಿದರು:
"ನೋಡು, ರಾಮಯ್ಯಾ...ನೀನು ನನ್ ಚೇಂಬರಿಗೆ ಬ೦ದು ನಿನ್ಗೆ ನಾನು ಕೂತುಕೊಳ್ಳುವುದಕ್ಕೆ ಹೇಳಿದ್ಮೇಲೆ ಈ ಮೆಸೆ೦ಜರ್ ಹುಡುಗನ್ನ ಕರೆದು, ‘ಕಾಫಿ ತೊಗೊ೦ಡು ಬಾ’ ಅ೦ತ ಹೇಳಿದೆ. ಎಲ್ಲರ ಕಾಫಿ ಕುಡಿದಾದ್ಮೇಲೆ, ಮತ್ತವನ್ನ ಕರ್ದು, ‘ಕಪ್-ಸಾಸರ್ ತೊಗೊ೦ಡ್ ಹೋಗಯ್ಯಾ’, ಅ೦ತ೦ದೆ. ಹೌದ್ ತಾನೇ?"
"ಹೌದ್ಸಾರ್" ರಾಮಯ್ಯ ತನ್ನ ಪ್ರಶ್ನೆಗೆ ಇದೇನಪ್ಪಾ ಈ ಉತ್ತರಾ ಎಂದುಕೊಂಡು ಹೇಳಿದ.
"ಕಾಫಿ ತರಿಸ್ಬೇಕಾದ್ರೆ," ಅಪ್ಪಚ್ಚು ಮು೦ದುವರೆಸಿದರು: "ಕಪ್ಪೂ, ಅದ್ರೊಳ್ಗೆ ಡಿಕಾಕ್ಷನ್ನೂ, ಹಾಲೂ ಸಕ್ರೆ ಹಾಕಿ ಸಾಸರಿನ ಮೇಲಿಟ್ಟುಕೊ೦ಡು ತೊಗೊ೦ಡ್ಬಾ, ಅ೦ತ ಹೇಳ್ಲಿಲ್ಲ... ಯಾರೂ ಆ ಥರಾ ಹೇಳಲ್ಲ, ಅಲ್ವಾ?"
"ಊಂಸಾರ್"
"ಕಾಫಿ ತೊಗೊ೦ಡು ಬಾ, ಅ೦ತ೦ದ್ರೆ ಕಪ್ಪಲ್ಲಿ ಹಾಕ್ಕೊಂಡೇ ತರೋದು...ಕಾಫಿ ಕುಡಿದಾದ್ಮೇಲೆ ಕಪ್-ಸಾಸರ್ ತೊಗೊಂಡ್‌ಹೋಗೂ೦ತ್ಲೇ ಅನ್ನೋದು...ಅಲ್ವಾ?ಕಾಫಿ ಬೇರೆ, ಕಪ್ ಬೇರೆ. ಕಪ್ನಲ್ಲಿ ಕಾಫಿ ಇದ್ರೂ ನಾವು ಬರೇ ಕಾಫೀ೦ತಷ್ಟೇ ಹೇಳ್ತೀವಿ. ಕಾಫಿ ಕುಡಿದಾದ್ಮೇಲೆ ಅದು ಬರೇ ಕಪ್, ಅಷ್ಟೇ...ಹೌದ್ ತಾನೇ?"
"ಊ೦ಸಾರ್"
"ಈ ನಿನ್ನ ಶರೀರ ರಾಮಯ್ಯಾ೦ತ ಅನ್ನಿಸ್ಕೊಳ್ಳೋದು ಅದ್ರಲ್ಲಿ ಪ್ರಾಣ ಇದ್ದಾಗ್ಲೇನೇ...ಹಾಗಿದ್ ಮಾತ್ರಕ್ಕೆ ನೀನು ಒಳಗ್ ಬ೦ದಾಗ, ತನ್ನ ಶರೀರದೊಳ್ಗೆ ಪ್ರಾಣ ಇಟ್ಕೊಂಡು ರಾಮಯ್ಯ ಬ೦ದಾ೦ತ ಅನ್ನೋದಿಲ್ಲ, ಅಲ್ವಾ?"
"ಇಲ್ಲಾ ಸಾರ್" ರಾಮಯ್ಯ ತುಸು ನಕ್ಕು ನುಡಿದ.
"ಪ್ರಾಣ ಹೋದ್ಮೇಲೆ ಶರೀರ ಉಳಿದಿರುತ್ತೆ. ಅದಕ್ಕೆ ಹೆಸರಿರೋದಿಲ್ಲ," ಅಪ್ಪಚ್ಚು ಮುಂದುವರೆಸಿದರು. "ನೀನು ಇಷ್ಟ್ ವರ್ಷ ಪ್ರೀತಿಸಿರೋದು, ಮುದ್ಮಾಡಿರೋದು ನಿನ್ ಮಗಳ ಶರೀರಾನಲ್ಲ, ರಾಮಯ್ಯ! ಆ ಶರೀರದ್ ಒಳಗಿದ್ದ ಆತ್ಮವನ್ನ. ಆತ್ಮ ಹೋದ್ಮೇಲೆ ಶರೀರ ಏನೂ ಅಲ್ಲ. ಅದು ಹೋದ್ಮೇಲೆ ಶರೀರ ನಮಗ್ ಬೇಕಾಗೋ ಸ್ಥಿತೀಲಿ ಉಳಿಯೋದೂ ಇಲ್ಲ..."
ರಾಮಯ್ಯ ಕೈಗಳನ್ನು ಜೋಡಿಸಿ ಮೇಲಕ್ಕೆತ್ತಿ "ಗೊತ್ತಾಯ್ತು ಸಾರ್, ಅರ್ತ್ವಾಯ್ತು... ತುಂಬ ಚೆನ್ನಾಗಿ ಹೇಳಿದ್ರಿ ಸಾರ್! ನನ್ನ್ ಮಗಳು ಆ ಬಾಡೀಲಿದ್ಳು ಅಸ್ಟೇಯ. ಆ ಬಾಡೀನೇ ನನ್ನ್ ಮಗ್ಳಲ್ಲ...ಅಲ್ಲಿದ್ದ್ ಆತ್ಮ ನನ್ನ್ ಮಗ್ಳು...ಶರೀರದೊಳ್ಗಡೆ ಪ್ರಾಣ ಇದ್ರೆ ಅಲ್ಲಿ ಆತ್ಮ ಇರತ್ತೆ. ಸರ್ಯಾಗ್ ಹೇಳಿದ್ರಿ, ಸಾರ್!" ಎ೦ದು ನಮಸ್ಕರಿಸಿ ಎದ್ದು ನಿ೦ತ.
ಅವನ ಮಗಳು ಸತ್ತ ದಿನ ಅವಳನ್ನು ಡೆಡ್ಡ್ ಬಾಡೀ, ಹೆಣ, ಶವ ಎ೦ದೆಲ್ಲ ಕರೆದಾಗ ಅವನ್ ಮನಸ್ಸಿಗುಂಟಾಗಿದ್ದ ಯಾತನೆ ಈ ಹೊತ್ತಿನವರೆಗೂ ಹೆಪ್ಪುಗಟ್ಟಿದ್ದುದು ಈಗ ಕರಗಿ ಆವಿಯಾಗಿ ಹೋದುದು ಅವನ ನಿರುಮ್ಮಳಗೊಂಡ ಮುಖದಲ್ಲಿ ಕಾಣುತಿತ್ತು.
Comments
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Iynanda Prabhukumar
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by asuhegde
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by ಅನನ್ಯ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Iynanda Prabhukumar
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by asuhegde
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by ksraghavendranavada
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by drmulgund
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Chikku123
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by dheerajkarkala
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by bhalle
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by gopinatha
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by SriniPune
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by SriniPune
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by SriniPune
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Iynanda Prabhukumar
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Radhika
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Iynanda Prabhukumar
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Radhika
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Iynanda Prabhukumar
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by Radhika
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by raghumuliya
ಉ: ಕಾಫಿ ಮತ್ತು ಆತ್ಮ
ಉ: ಕಾಫಿ ಮತ್ತು ಆತ್ಮ
In reply to ಉ: ಕಾಫಿ ಮತ್ತು ಆತ್ಮ by manju787
ಉ: ಕಾಫಿ ಮತ್ತು ಆತ್ಮ