ಕಾಯನ್ನ (ಬೆಲ್ಲದನ್ನ)

ಕಾಯನ್ನ (ಬೆಲ್ಲದನ್ನ)

ಬೇಕಿರುವ ಸಾಮಗ್ರಿ

ಒಂದು ಲೋಟ ಬೆಲ್ಲ
ಒಂದು ಲೋಟ ಬಿಸಿ ಅನ್ನ ಮೆತ್ತಗೆ ಮಾಡಿದ್ದು
ಒಂದು ಲೋಟ ತೆಂಗಿನ ಕಾಯಿ
ತುಪ್ಪ - ೧/೨ ಲೋಟ
ಏಲಕ್ಕಿ ಪುಡಿ
ಪಚ್ಕರ್ಪೂರ
ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿದದ್ದು

ತಯಾರಿಸುವ ವಿಧಾನ

ವಿಧಾನ :

ಬೆಲ್ಲಕ್ಕೆ ಸ್ವಲ್ಪ ನೀರು ಬೆರೆಸಿ ಬಾಣಲೆಯಲ್ಲಿ .. ಒಲೆಯ ಮೇಲಿಡಬೇಕು ಮಂದ ಉರಿಯಲ್ಲಿ ... ಅದು ಪಾಕವಾಗಿ ನೊರೆ ನೊರೆಯಾಗಿ ಉಕ್ಕಲು ಶುರು ಮಾಡಿದಾಗ .. ಬೆಂದ ಅನ್ನ , ತುಪ್ಪ, ಕಾಯಿ ತುರಿ ಹಾಕಿ ಚೆನ್ನಾಗಿ ಗೊಟಾಯಿಸಬೆಕು. ಎಲ್ಲವೂ ಚೆನ್ನಾಗಿ ಒಂದು ಮಿಶ್ರಣವಾಗಿದ ಮೇಲೆ ... ಏಲಕ್ಕಿ ಪುಡಿ, ಚಿಟಿಕೆ ಪಚ್ಕರ್ಪೂರ , ಗೋಡಂಬಿ ಮತ್ತು ದ್ರಾಕ್ಷಿ ತುಪ್ಪದಲ್ಲಿ ಹುರಿದು ಹಾಕಿದಲ್ಲಿ.. ಕಾಯನ್ನ ಸಿದ್ದ.

ಈ ತಿಂಡಿಯನ್ನು ಮಾಡಿದ ದಿನ ಅದರ ಸುವಾಸನೆಯಿಂದ ಮನೆಯೆಲ್ಲಾ ಒಂದು ರೀತಿಯ ಮದುವೆ ಮುಂಜಿ ವಾತಾವರಣ.. ಮಾಡಿದ ಮನಸ್ಸಿಗೂ ಸಂತೋಷ!!! ತಿಂದವರಿಗೂ ತೃಪ್ತಿ

ಮಾಡಿ ನೋಡಿ ಹೇಗಿತ್ತು ಎಂದು ನಿಮ್ಮ ಅನಿಸಿಕೆಯನ್ನು ಇಲ್ಲಿ ಬರೆಯಿರಿ