ಕಾವ್ಯ ಸಂಗಮ
ಕಾವ್ಯ ಸಂಗಮವೆನ್ನುವುದು ಹೆಸರೇ ಹೇಳುವಂತೆ ಕವನಗಳ ಸಂಗ್ರಹ. ಕರಾವಳಿ ತೀರದ ಕವಿ/ಕವಯತ್ರಿಯವರ ೯೬ ಕವನಗಳು ಈ ಪುಸ್ತಕದಲ್ಲಿವೆ. ಇವನ್ನೆಲ್ಲ ಅತ್ಯಂತ ಆಸಕ್ತಿಯಿಂದ ಸಂಪಾದನೆ ಮಾಡಿದವರು ಸ್ವತಃ ಕವಿಯಾದ ಮೇಟಿ ಮುದಿಯಪ್ಪ ಇವರು.
ಬೆನ್ನುಡಿಯಲ್ಲಿ ಕವಿ, ವಿಮರ್ಶಕ ವಿ.ಗ.ನಾಯಕ್ ಇವರು ಬರೆಯುತ್ತಾರೆ ‘ಕವಿ ಮೇಟಿಯವರು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ರಂಗಕಲಾವಿದರಾಗಿ, ಸಂಘಟಕ, ಸಮಾಜ ಸೇವಕನಾಗಿ ಹೀಗೆ ಹತ್ತು ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಈಗಾಗಲೇ ಹಲವಾರು ಕೃತಿಗಳನ್ನು ಸಮಾಜಕ್ಕೆ ನೀಡಿ ಗುರುತಿಸಿಕೊಂಡವರು.ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ಕಾಸರಗೋಡು ಜಿಲ್ಲೆಯ ಪ್ರತಿಭಾವಂತ, ಹಿರಿಯ, ಉದಯೋನ್ಮುಖ ಕವಿಗಳನ್ನು ಒಗ್ಗೂಡಿಸಿ ಅವರ ಕವನಗಳನ್ನು ಸಂಪಾದಿಸಿ ‘ಕಾವ್ಯ ಸಂಗಮ' ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಕವಿತೆ ಆಟವಲ್ಲ. ನಿತ್ಯವನ್ನು ಸತ್ಯದ ಕಡೆಯಿಂದ ಅನುಭವಿಸಿ ಅನುಭಾವಿಸುವ ಗಳಿಗೆಗೆ ಸ್ಪೂರ್ತಿಯಾಗುವವ ಕವಿ'.
ಈ ಮುಸ್ತಕದಲ್ಲಿ ಅಂಬಾತನಯ ಮುದ್ರಾಡಿ, ಇಂದಿರಾ ಹಾಲಂಬಿ, ಉದ್ಯಾವರ ಮಾಧವ ಆಚಾರ್ಯ, ಗುಲಾಬಿ ಬಿಳಿಮಲೆ, ಚಂದ್ರಕಲಾ ನಂದಾವರ, ಚಿದಂಬರ ಬೈಕಂಪಾಡಿ, ಜಯಪ್ರಕಾಶ್ ಮಾವಿನಕುಳಿ, ಎಚ್. ದುಂಡಿರಾಜ್, ಡಾ.ನಾ.ದಾ.ಶೆಟ್ಟಿ, ಡಾ.ನಾ. ಮೊಗಸಾಲೆ ... ಹೀಗೆ ಕವಿಗಳ ಪಟ್ಟಿ ಮುಂದುವರೆಯುತ್ತೆ. ೯೬ ಕವಿಗಳ ಕವನಗಳ ಸಂಗ್ರಹ ಇವೆ.