ಕುಂಡಿಗೆ ತಂಬುಳಿ
ಬೇಕಿರುವ ಸಾಮಗ್ರಿ
ಕುಂಡಿಗೆ (ಬಾಳೆ ಹೂವು) ೧, ಕಾಯಿತುರಿ ೧ ಕಪ್, ಕೆಂಪು ಮೆಣಸು ೨, ಮಜ್ಜಿಗೆ ೧ ಕಪ್, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಕುಂಡಿಗೆಯ ಹೊರಗಿನ ನಾಲ್ಕು ಸಿಪ್ಪೆಗಳನ್ನು ತೆಗೆಯಿರಿ. ಒಳಗಿರುವ ಬಿಳಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಕೆಂಪು ಮೆಣಸು ಮತ್ತು ಉಪ್ಪು ಹಾಕಿ ಬೇಯಿಸಿ. ಬೆಂದ ಹೋಳುಗಳನ್ನು ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ ಮಜ್ಜಿಗೆ ಬೆರೆಸಿ ಅನ್ನದ ಜೊತೆ ಬಡಿಸಿ.
- ಸಹನಾ ಕಾಂತಬೈಲು, ಮಡಿಕೇರಿ