ಕೃಷ್ಣ ಕಂಡನು ಕೇಳಿರೆ
ಬರಹ
ಕೃಷ್ಣ ಕಂಡನು ಕೇಳಿರೆ
ಗೋಪಿಯರೆಲ್ಲಾ |ಪ|
ಹೊಳೆವ ಕಿರೀಟವಿಲ್ಲ
ಶಂಖ ಚಕ್ರಗಳಿಲ್ಲ
ಯಾದವರ ಬಳಗವಿಲ್ಲ
ಭಾಮೆ ರುಕ್ಮಿಣಿಯರಿಲ್ಲ ||ಪ||
ಕಪಟ ನಾಟಕಿಯಲ್ಲ
ಮೋಹನ ರೂಪನಲ್ಲ
ಕೊಳಲ ಪಿಡಿದವನಲ್ಲ
ಪಾರ್ಥ ಸಾರಥಿಯಲ್ಲ ||ಪ||
ಅರಿ ಭಯಂಕರನಲ್ಲ
ವ್ಯೋಮಕಣನಿವನಲ್ಲ
ಗಂಭೀರ ವದನವ ಪೊತ್ತು
ನೀತಿ ಹೇಳುವನಲ್ಲ ||ಪ||
ಅಂಕೆಗೆ ಸಿಗದವನು
ಶಂಕೆಯ ಬಿಡಿಸುವವನು
ಮಂಕು ದಿಣ್ಣೆಯಿವನು
ಕೇಳಿರೆ ಹೇಗಿಹನು ||ಪ||
ನನ್ನೊಳಗೆ ಛಲದಿಂದ
ಕುಳಿತು ಬಲು ಒಲವಿಂದ
ನಾನು ನೀನು ಒಂದೇ ಎಂದ
ಶ್ರೀ ಗುರು ಶಂಕರನ
ಸಿರಿ ಹರಿಯೆ ತಾನೆಂದ ||ಪ||