ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳು ರಸ್ತೆ ಸಂಚಾರಿ ಸೂಚಿಗೆ ಮಾತ್ರ ಸೀಮಿತವಾಗಿಲ್ಲ!

ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳು ರಸ್ತೆ ಸಂಚಾರಿ ಸೂಚಿಗೆ ಮಾತ್ರ ಸೀಮಿತವಾಗಿಲ್ಲ!

ಬರಹ

ರಸ್ತೆಯ ಸಂಚಾರಿ ಸೂಚಿಯಲ್ಲಿ ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳ ಅರ್ಥವು ಯಾರಿಗೆ ಗೊತ್ತಿಲ್ಲ? ಈ ಬಣ್ಣಗಳ ಸೂಚಿತ ಅರ್ಥಗಳು ರಸ್ತೆ ಸಂಚಾರಕ್ಕೆಮಾತ್ರ ಸೀಮಿತವಾಗಿಲ್ಲ! `ಯುರೇಖ ಫೋರ್ಬ್ಸ್'ರವರು ಇದನ್ನು ತಮ್ಮ `ಆಕ್ವಾ ಗಾರ್ಡ್'ನಲ್ಲಿ ಬಳಸಿಕೊಂಡಿದ್ದಾರೆ. `ಆಕ್ವಾ ಗಾರ್ಡ್' ಒಂದು ನೀರಿನ ಶುದ್ಧೀಕರಣ ಯಂತ್ರ , ಅದು ಸೋಸುವ ಕೆಲಸದ ಜೊತೆಗೆ ವಿಶೇಶ ಕಿರಣಗಳನ್ನು ವಿದ್ಯುತ್‍ಶಕ್ತಿಯನ್ನು ಉಪಯೋಗಿಸಿ ಸೃಷ್ಟಿಸಿ ಸೂಕ್ಷ್ಮಜೀವಿಗಳನ್ನು ನಿಷ್ಕ್ರಿಯಗೊಳಿಸುತ್ತದಂತೆ. ಈ ಉಪಕರಣಕ್ಕೆ ವಿದ್ಯುತ್ ಹರಿಸುವ ಸ್ವಿಚ್ ಹಾಕಿದಾಗ ಉಪಕರಣದಲ್ಲಿ ಕೆಂಪು ದೀಪ ಹತ್ತಿಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ಹಳದಿ ಕಿತ್ತಲೆ ಮಿಶ್ರವರ್ಣದ ದೀಪ ಹತ್ತಿಕೊಳ್ಳುತ್ತದೆ, (ಸ್ವಲ್ಪ ಕಾಯಿರು ನೀರು ಶುದ್ಧಿಗೊಳ್ಳುತ್ತಿದೆ ಎಂದು ಸೂಚಿಸಲೆಂದು) ಕೊನೆಗೆ ಹಸಿರು ದೀಪ ಹತ್ತಕೊಳ್ಳುವುದ ಜೊತೆಗೆ ನೀರು ಹರಿಯಲು ಪ್ರಾರಂಭವಾಗುತ್ತದೆ. ಕೆಂಪು ದೀಪದಿಮ್ದ ಹಸಿರು ದೀಪ ಬಂದು ನೀರೂ ಬರಲು ೨೦ ಸೆಕೆಂಡು ಬೇಕು.
ಬಣ್ಣದ ದೀಪದ ಕ್ರಮವನ್ನು ವಿಡಿಯೋದಲ್ಲಿ ನೋಡಲು ಈ ಕೊಂಡಿ