ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ
"ಬರೆಯಹೊರಟಿಹೆವು ಸಾಮರಸ್ಯಕೆ ಭಾಷ್ಯ
ಸುದೀರ್ಘ ಹಾದಿಯಿದು ದೂರವಿದೆ ಗಮ್ಯ"
ಶಿವಮೊಗ್ಗದಲ್ಲಿ ನಡೆದ ಸಮಾವೇಶ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದರೆ ಕೆಳದಿಯಲ್ಲಿ ೨೫-೧೨-೨೦೦೭ರಂದು ನಡೆದ ಎರಡನೆಯ ಸಮಾವೇಶ ಸಹ ಅನೇಕ ಒಳ್ಳೆಯ ಕ್ಷಣಗಳಿಗೆ ಸಾಕ್ಷಿಯಾಯಿತು. ಕೆಳದಿಯಲ್ಲಿರುವ ಅರ್ಚಕ ಶ್ರೀ ಕವಿರಾಮಮೂರ್ತಿ ಮತ್ತು ಸಹೋದರರು ಆಯೋಜಕರಾಗಿದ್ದ ಈ ಸಮಾವೇಶ ಕೆಳದಿಯ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದು ಅವಿಸ್ಮರಣೀಯ ಅನುಭವವನ್ನು ಭಾಗವಹಿಸಿದ ಎಲ್ಲ ಬಂಧುಗಳಿಗೆ ನೀಡಿತು. ನಡೆದ ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿ ಮತ್ತು ಚಿತ್ರಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸಿ ಮುಂದಿಟ್ಟಿರುವೆ:
೧. ಜ್ಯೋತಿ ಬೆಳಗುವುದರೊಂದಿಗೆ ಶುಭಾರಂಭ;
೨. ಶ್ರದ್ಧಾಂಜಲಿ: ಹಿಂದಿನ ಸಾಲಿನಲ್ಲಿ ನಿಧನರಾದ ಶ್ರೀ ರಾಮಾಜೋಯಿಸ್, ನಿವೃತ್ತ ತಹಸೀಲ್ದಾರರು ಮತ್ತು ಸಾಹಿತಿ ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್ (ಶ್ರೀ ದಿ. ಸಾ.ಕ. ಲಿಂಗಣ್ಣಯ್ಯನವರ ಮಗಳು, ಖ್ಯಾತ ಸಾಹಿತಿ ದಿ. ಶ್ರೀ ಬ.ನ. ಸುಂದರರಾವ್ ರವರ ಪತ್ನಿ) ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
೩. ಪುಸ್ತಕ ಬಿಡುಗಡೆ: ಕವಿ ಮನೆತನದ ಹಿರಿಯ ಸಾಧಕ ಸಾಗರದ ಕವಿ ಲಿಂಗಣ್ಣಯ್ಯರ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ಶ್ರೀ ಕವಿ ವೆಂ. ಸುರೇಶರವರು ರಚಿಸಿದ್ದು 'ಕರ್ಮಯೋಗಿ ಕಲಾವಲ್ಲಭ ಎಸ್.ಕೆ. ಲಿಂಗಣ್ಣಯ್ಯ' ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆಯಾಗಿ, ಬಂದಿದ್ದ ಎಲ್ಲಾ ಬಂಧುಗಳಿಗೆ ಉಚಿತವಾಗಿ ಕೊಡಲಾಯಿತು.
೪. ಸ್ವರಚಿತ ಕವನಗಳನ್ನು ರಚಿಸಿ ಹಾಡಿದ ಅನೇಕ ಬಂಧುಗಳು ಸಮಾವೇಶಕ್ಕೆ ಅರ್ಥ ನೀಡಿದರು.
೫. ಶ್ರೀ ಕ.ವೆಂ. ನಾಗರಾಜರ ಸಂಪಾದಕತ್ವ ಮತ್ತು ಶ್ರೀ ಕವಿ ಸುರೇಶರ ಸಹ ಸಂಪಾದಕತ್ವದಲ್ಲಿ ಕವಿ ಕುಟುಂಬದ ಪತ್ರಿಕೆಯೊಂದನ್ನು ಹೊರತರಲು ನಿರ್ಧರಿಸಲಾಯಿತು.
ಉತ್ತಮ ಉಪಾಹಾರ, ಭೋಜನಗಳ ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ ಮಧುರ ನೆನಪುಗಳೊಂದಿಗೆ ಬಂಧುಗಳು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು.
*************
-ಕ.ವೆಂ.ನಾಗರಾಜ್.
(ವಿಸ್ತೃತ ಮಾಹಿತಿ ಮತ್ತು ಹೆಚ್ಚಿನ ಚಿತ್ರಗಳನ್ನು ಇಲ್ಲಿ ವೀಕ್ಷಿಸಬಹುದು: http://keladikavimanetana.blogspot.com/2010/12/blog-post.html)
ಹಿಂದಿನ ಲೇಖನಕ್ಕೆ ಲಿಂಕ್: ಹಳೆ ಬೇರು ಹೊಸ ಚಿಗುರು: ಕೆಳದಿ ವಂಶಸ್ಥರ ಸ್ಥೂಲ ಪರಿಚಯ: sampada.net/%E0%B2%B9%E0%B2%B3%E0%B3%86-%E0%B2%AC%E0%B3%87%E0%B2%B0%E0%B3%81-%E0%B2%B9%E0%B3%8A%E0%B2%B8%E0%B2%9A%E0%B2%BF%E0%B2%97%E0%B3%81%E0%B2%B0%E0%B3%81-%E0%B2%95%E0%B3%86%E0%B2%B3%E0%B2%A6%E0%B2%BF-%E0%B2%95%E0%B2%B5%E0%B2%BF-%E0%B2%B5%E0%B2%82%E0%B2%B6%E0%B2%B8%E0%B3%8D%E0%B2%A5%E0%B2%B0-%E0%B2%B8%E0%B3%8D%E0%B2%A5%E0%B3%82%E0%B2%B2-%E0%B2%AA%E0%B2%B0%E0%B2%BF%E0%B2%9A%E0%B2%AF
Comments
ಉ: ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ
In reply to ಉ: ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ by prashasti.p
ಉ: ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ
ಉ: ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ
In reply to ಉ: ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ by manju787
ಉ: ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ