ಕೇಳ್ರಪ್ಪೋ ಕೇಳ್ರಿ, ಚಂಜಿನಾಗ ಆಡೊ ಕಾಲ್ಚೆಂಡ್ನಾಟ್ದಾಗೆ ಬ್ರೆಜಿಲ್ನೋರ್ ಅವ್ರಂತೆ !

ಕೇಳ್ರಪ್ಪೋ ಕೇಳ್ರಿ, ಚಂಜಿನಾಗ ಆಡೊ ಕಾಲ್ಚೆಂಡ್ನಾಟ್ದಾಗೆ ಬ್ರೆಜಿಲ್ನೋರ್ ಅವ್ರಂತೆ !

ಬರಹ

ಇವತ್ತಿನ ದಿನ ಆಡುವ 'ಫಿಫಾ ವಿಶ್ವಕಪ್' ಪಂದ್ಯಗಳು ಹೀಗಿವೆ.(೧೩-೦೬-೨೦೦೬)

೬-೩೦ ಸಾ. ದ.ಕೊರಿಯ ವಿರುದ್ಧ ಟೊಗೊ 'ಜಿ' ಗ್ರುಪ್
೯-೩೦ ರಾ. ಫ್ರಾನ್ಸ್ ವಿರುದ್ಧ ಸ್ವಿಟ್ಜರ್ ಲ್ಯಾಂಡ್ 'ಜಿ' ಗ್ರುಪ್
೧೨-೩೦ ಮ.ರಾ.ಬ್ರೆಸಿಲ್ ವಿರಿದ್ಧ ಕೊರೆಶಿಯ 'ಎಫ್' ಗ್ರುಪ್

ನೆನ್ನೆಯ ದಿನ ಆಡಿದ ಮೊದಲ ಆಟದಲ್ಲಿ ಆಷ್ಟ್ರೇಲಿಯಕ್ಕೆ ಜಪಾನ್ ವಿರುದ್ಧ ರೋಮಾಂಚಕಾರಿ ಜಯ ಲಭಿಸಿತು :

ಎಫ್' ಬಣದ ಮೊದಲ ಪಂದ್ಯ, ಬಲಿಷ್ಟ ಜಪಾನ್ ವಿರುದ್ಧ ೩-೧ ಗೋಲಿನಿಂದ ಆಷ್ಟ್ರೇಲಿಯ ವಿಜಯ ಸಾಧಿಸಿ ಪ್ರಬಲ ತಂಡ ವಾಗಿ ಹೊರಹೊಮ್ಮಿದೆ.ಮೊದಲ ೨೬ ನೆ ನಿಮಿಷ ದಲ್ಲಿ ಶುನ್ ಸುಕೆ ನಾಕಾಮುರ, ಪ್ರಥಮ ಗೊಲ್ ಮಾಡುವುದರ ಮೂಲಕ ಆಟದಲ್ಲಿ ಬಿಗಿ ತಂದರು. ದ್ವಿತಿಯಾರ್ಧದ ನಂತರವೂ ಜಪಾನ್ ತನ್ನ ಮೆಲುಗೈ ಸಾಧಿಸಲು ಹವಣಿಸುತ್ತಿತ್ತು. ಆದರೆ ಆಷ್ಟ್ರೇಲಿಯದ ಆಟಗಾರರು ಅತಿ ಆಕ್ರಮಣಕಾರಿ ಆಟ ಪ್ರದರ್ಶಿಸಿ, ಒಂದಾದ ಮೇಲೆ ಒಂದರಂತೆ ಗೋಲ್ ಗಳನ್ನು ಏರಿಸುತ್ತಲೆ ಹೋದರು. ೮೪, ೮೯, ೯೨ ನೆ ನಿಮಿಷಗಳಲ್ಲಿ ಗೋಲುಗಳು ಅಲೆಅಲೆ ಯಾಗಿ ಬಂದವು.ಮೊದಲ ೨ ಗೋಲ್ ಗಳನ್ನು ಕಾಹಿಲ್ ಹೊಡೆದರೆ, ಕೊನೆಯ ಗಳಿಗೆಯ ಗೊಲನ್ನು, ಜಾನ್ ಆಲೋಯಿಸಿ, ಸಿಡಿಸಿ ಇಡಿ ಸ್ಟೇಡಿಯಂ ಕರತಾಡನದಿಂದ ಮೊಳಗುವಂತೆ ಮಾಡಿದರು.

ಕಳೆದ ೩೨ ವರ್ಷಗಳಿಂದ ೨ ನೆ ಬಾರಿ ವಿಶ್ವಕಪ್ಪಿನಲ್ಲಿ ಆಡುತ್ತಿರುವ 'ಕಾಂಗರು' ಗಳು ಈ ಪಂದ್ಯದ ಮೂಲಕ ಮೊದಲಬಾರಿ ಗೋಲು ಧಾಕಲಿಸಿದ ಗೌರವಕ್ಕೆ ಪಾತ್ರವಾದರು.ಕ್ರೀಡಾಂಗಣದಲ್ಲಿ ಬಿಸಿಲಿನ ಜೊತೆಗೆ ನೆರಳೂ ಇದ್ದು, ಟಿವಿ ಯಲ್ಲಿ ನೋಡುವಾಗ ಸ್ವಲ್ಪ ಕಷ್ಟವಾಯಿತು. ಆಟಗಾರರಿಗೂ ಸೆಖೆ ಆಯಿತೆಂದು ವಿವರಗಳು ತಿಳಿಸುತ್ತವೆ.

ಚೆಂಜೆ ನಾಗ ಬ್ರೆಜಿಲ್ ನೋರ್ ಬತ್ತಾರಂತೆ !

ಹೌದು. ಇಂದಿನ ಮಧ್ಯ ರಾತ್ರಿ ನಡೆಯುವ ವಿಶ್ವಕಪ್ ಕಾಲ್ಚೆಂಡಿನಾಟವನ್ನು ಜಗತ್ತಿನ ಯಾವ ಸಾಕರ್ ಪ್ರೇಮಿ ತಾನೇ ಕಳೆದುಕೊಳ್ಳಲು ಇಚ್ಛಿಸಿಯಾನು ? ಬಣದ ಮೊದಲ ಆಟವನ್ನು ೫ ಬಾರಿ ವಿಜೇತರಾದ ವಿಶ್ವಕಪ್ ಛಾಂಪಿಯನ್ ಬ್ರೆಸಿಲ್, ಕುರೇಷಿಯಾ ವಿರುದ್ಧ ಆಡಲಿದೆ. ಸಾಕರ್ ನ 'ಬಿಗ್ ಬಿ' ಎಂದೇ
ಹೆಸರಾದ ಬ್ರೆಸಿಲ್ ದೇಷದ ತಂಡದಲ್ಲಿ ಅತಿರಥಿ, ಮಹಾರಥಿಗಳ ಮಹಾಪೂರವೆ ಇದೆ.ರೋನಾಲ್ಡಿನೋ,
ರೋನಾಲ್ಡೋ, ಆಡ್ರಿಯಾನೋ, ಕಾಕ, ರೋಬರ್ಟೋ ಕಾರ್ಲೋಸ್, ಕಾಫು, ದೀದ, ಲ್ಯುಸಿಯೊ, ಎಮರ್ ಸನ್, ಇತ್ಯಾದಿ.

ಆಟ ಶುರುವಾಗುತ್ತಿದ್ದಂತೆಯೆ ೧೮೫ ಮಿಲಿಯನ್ ಜನಸಂಖ್ಯೆಯ ಬ್ರೆಸಿಲ್ ದೇಶದ ಎಲ್ಲಾ ವಾಣಿಜ್ಯ ವಹಿವಾಟುಗಳು ಕೆಲವಾರು ಘಂಟೆಗಳಕಾಲ ತಟಸ್ತ ಗೊಳ್ಳುತ್ತವೆ.ಪೋಲೀಸ್, ಸಾರ್ವಜನಿಕ ಸಂಸ್ಥೆಗಳು, ಆಸ್ಪತ್ರೆಗಳನ್ನು ಬಿಟ್ಟು ಎಲ್ಲಾ ಸರ್ಕಾರಿ ಕಾರ್ಯಾಗಾರಗಳು ಅರ್ಧ ದಿನ ಕೆಲಸ ಮಾಡಿದರೆ, ಕೆಲವು ಬಹಳಬೇಗ ಮುಚ್ಚಲ್ಪಡುತ್ತವೆ.ಎಲ್ಲರಿಗು ತವಕ, ಆತಂಕ, ಕಾತುರ,ಉತ್ಸಾಹ; ಆ ಮಿಶ್ರಭಾವನೆಗಳನ್ನು ವರ್ಣಿಸಲು ಸಾಧ್ಯವಿಲ್ಲ.ಅತ್ಯಂತ ದೇಶಪ್ರೇಮಿಗಳಾದ ಅವರು ತಮ್ಮ ದೇಶದ ಆಟಗಾರರಿಗೆ ಜೀವ ಕೊಡಲೂ ಸಿದ್ಧ !

ಖಂಡಿತವಾಗಿ, ಈ ಮ್ಯಾಚಿನ ಪ್ರಾರಂಭದೊಂದಿಗೆ "ಕಾಲ್ಚೆಂಡಿನಾಟ"ದ ಸವಿಯನ್ನು ಮನೆಮಂದಿಯೊಂದಿಗೆ ಹಂಚಿಕೊಳ್ಳಿ !

ಇನ್ನು ಮೇಲೆ ಕಾಲ್ಚೆಂಡಿನಾಟದಲ್ಲಿ ಒಂದು ಹೊಸತನ,ಸಂಭ್ರಮವನ್ನು ನೀವು ಕಾಣುವಿರಿ !
ಅಂತಿಮದಿನದ ಪಂದ್ಯ, ಒಂದು ಮರಯಲಾರದ, ಅವಿಸ್ಮರಣೀಯ ಅನುಭವ ಎಂದು ಬೇರೆ ಹೇಳಬೇಕಾಗಿಲ್ಲ !! ದಯಮಾಡಿ ಕಾದು ನೋಡಿ.