ಕೇವಲ ಕಲೆ - ಅಭಿಮಾನಕ್ಕಾಗಿ ಜೀವನ ಸವೆಸಲು ಯಾವ ಮಹನೀಯರೂ ಉಳಿದಿಲ್ಲ!

ಕೇವಲ ಕಲೆ - ಅಭಿಮಾನಕ್ಕಾಗಿ ಜೀವನ ಸವೆಸಲು ಯಾವ ಮಹನೀಯರೂ ಉಳಿದಿಲ್ಲ!

Comments

ಬರಹ

ಕನ್ನಡ ಚಿತ್ರರಂಗದ ೭೫ನೇ ವರ್ಷದ ಸಂಭ್ರಮಾಚರಣೆಯ ಸಮಾರಂಭದಲ್ಲಿ ಸನ್ಮಾನಿತರಾದ ತಮಿಳು ಚಿತ್ರ ನಟ ರಜನೀಕಾಂತ್ "ಸಿನಿಮಾದಲ್ಲಿ ರಾಜಕೀಯ ಬೆರಸಿ ಕಲಾಕ್ಷೇತ್ರವನ್ನು ಕೊಳಕು ಮಾದುವುದು ಬೇಡ, ಕನ್ನಡಿಗರು ಮತ್ತು ತಮಿಳರು ಸಹೋದರರು, ನಾವು ಒಂದಾಗಿ ಬಾಳಬೇಕು" ಎಂದೂ ಹಾಗು ಕಮಲಹಾಸನ್ 'ಕಲೆ ಎಂಬ ಶಾಂತ, ನಿರ್ಮಲ ಕೊಳಕ್ಕೆ ರಾಜಕೀಯದ ಕಲ್ಲೆಸಯಬೇಡಿ, ಈ ಪುಷ್ಕರಣಿಯನ್ನು ರಕ್ತದ ಮಡುವನ್ನಾಗಿ ಮಾಡಬೇಡಿ, ಕಲಾವಿದರಿಗೆ ಜಾತಿ-ಭಾಷೆ-ಧರ್ಮದ ಹಂಗಿಲ್ಲ ಎನ್ನುವ ಅಣಿಮುತ್ತುಗಳನ್ನು ! ನೆರೆದಿದ್ದ ಕನ್ನಡ ಚಲನಚಿತ್ರ ಪ್ರೇಮಿಗಳಿಗೆ ತಿಳಿಸಿ ಹೋದರು.

ಈ ಮಾತುಗಳನ್ನಾಡಿದ ಈ ಇಬ್ಬರು ತಮ್ಮ ಹಿನ್ನಲೆ, ಕರ್ನಾಟಕ-ತಮಿಳುನಾಡು ಕುರಿತಾದ ವಿವಾದದ ವಿಷಯಗಳ ಕುರಿತಾಗಿನ ತಮ್ಮ ನಿಲುವುಗಳೇನಾಗಿತ್ತು ಎಂಬುದನ್ನು ಮರೆತಂತಿದೆ. ಅನೇಕ ಸಂದರ್ಭಗಳಲ್ಲಿ ತಮಿಳುನಾಡಿನ ಚಲನಚಿತ್ರ ಕಲಾವಿದರೊಡಗೂಡಿ ಕರ್ನಾಟಕದ ವಿರುದ್ಧ ತಮಿಳರ ಪರವಾಗಿ ವಕಾಲಾತ್ತು ವಹಿಸಿದ್ದರೂ ನಮ್ಮನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿ, ಅದ್ದೂರಿಯಿಂದ ಸನ್ಮಾನಿಸಿದ. ಕನ್ನಡಿಗರು ಎಂತ ಸ್ನೇಹಪರರು ಮತ್ತು ಸಹೃದಯತೆಯುಳ್ಳವರೆಂದು ಎಂದು ತಮ್ಮಲ್ಲೇ ಆತ್ಮಾವಲೋಕನ ಮಾಡಿಕೊಂಡು ಕನ್ನಡಿಗರ ಔದಾರ್ಯವನ್ನು, ಸಮಸ್ತ ತಮಿಳರಿಗೆ ಮನವರಿಕೆ ಮಾಡಿಕೊಡುವ ಮಾತುಗಳನ್ನಾಡಿದ್ದಿದ್ದರೆ ಅವರ ಶೋಭೆಗೆ ಒಪ್ಪುವಂತದ್ದಾಗುತ್ತಿತ್ತು. ಇನ್ನು ತಮಿಳುನಾಡಿನಲ್ಲಿ ಜೀವನೋಪಾಯಕ್ಕಾಗಿ ನೆಲೆಸಿರುವುದರಿಂದ ನಾನು ತಮಿಳಿಗ ಎಂದು ಎದೆ ತಟ್ಟಿ ಹೇಳಿಕೊಳ್ಳುವಂತೆ ಇಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ-ನೆಲೆಸಿರುವ ತಮಿಳರೇ ನನ್ನ ಉದಾಹರಣೆಯನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ ಕನ್ನಡಿಗರೊಡನೆ ಕೈ ಜೋಡಿಸಿ ಮುಖ್ಯ ವಾಹಿನಿಯಲ್ಲಿ ಬೆರೆಯಿರಿ ಎಂಬ ಸಂದೇಶ ರಜನಿಕಾಂತ್ ಸಾರಿದ್ದರೆ ಅವರ ಮಾತುಗಳಿಗೆ ತೂಕವಿರುತ್ತಿತ್ತು. ಕನ್ನಡ ಚಿತ್ರರಂಗದ ಮೇಲಿನ ಅಭಿಮಾನ - ಕಲೆಯ ಋಣದಲ್ಲಿರುವ ನಾವು ನಮ್ಮಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಯಾರಾದ್ರೂ ಪ್ರಯತ್ನಪಟ್ಟಲ್ಲಿ ಸಹಕರಿಸುತ್ತೇವೆ ಎಂಬ ಮಾತುಗಳನ್ನಾಡಿದ್ದಿದ್ದರೆ ಇವರು ನಮ್ಮಲ್ಲಿ ಬಂದು ಸತ್ಕರಿಸಿಕೊಂಡು ಹೋದದ್ದಕ್ಕೆ ಸಾರ್ಥಕತೆಯಿರುತ್ತಿತ್ತು.

ಆದರೆ ಇವರುಗಳು ತಿಳಿಸಿ ಹೋದಂತೆ ಇಂದು ಕೇವಲ ಕಲೆ - ಅಭಿಮಾನಕ್ಕಾಗಿ ಜೀವನ ಸವೆಸಲು ಪ್ರಪಂಚದ ಯಾವುದೇ ಚಿತ್ರರಂಗದಲ್ಲಿ ಯಾವ ಮಹನೀಯರೂ ಉಳಿದಿಲ್ಲ! ಚಿತ್ರರಂಗ ಇಂದು ಬಹು ಭೇಡಿಕೆಯ-ಅಕರ್ಷಣಿಯ ಉದ್ದಿಮೆಯಾಗಿದೆ! ಎಲ್ಲ ಸ್ತರದ ಜನಗಳು-ವ್ಯಾಪಾರಿಗಳು ಇಂದು ಚಿತ್ರರಂಗದಲ್ಲಿ ಹಣ ತೊಡಗಿಸಿದ್ದಾರೆ. ಬೇರೆ ಹಲವಾರು ಉದ್ದಿಮೆ-ಕಾರ್ಯಕ್ಷೇತ್ರಗಳಲ್ಲಿ ಯಶಸ್ವಿಯಾದವರು ಇಂದು ಸಿನಿಮಾ ರಂಗಕ್ಕೆ ಧುಮುಕಿದ್ದಾರೆ! ಸಕ್ರಿಯವಾಗಿ ಕ್ರಿಯಾಶೀಲರಾಗಿ ಮಾರುಕಟ್ಟೆ ಕಂಡುಕೊಂಡಿದ್ದಾರೆ! "ಯಾವ ಭಾಷೆಯ ಕಲಾವಿದನಾಗಿರಲಿ ಅವರೆಲ್ಲ ಒಂದೇ, ಕಲೆಗೆ ಭಾಷೆಯಿಲ್ಲ" ಎಂಬ ರಜನಿ-ಕಮಲ್ ಮಾತುಗಳು ಕೇವಲ ತಮ್ಮ ಅಭಿಮಾನಿ ವೃಂದವನ್ನು ಹೆಚ್ಚಿಸಿಕೊಂಡು, ಅವರಿಂದ ಶಿಳ್ಳೆ ಗಿಟ್ಟಿಸಿಕೊಂಡು ತಮ್ಮ ಚಿತ್ರಗಳಿಗೆ ಇಲ್ಲಿ ಮಾರುಕಟ್ಟೆ ಹೆಚ್ಚಿಸಿಕೊಳ್ಳುವ ಗಿಮಿಕ್ ಗಳಲ್ಲೊಂದು ಎಂದು ಯಾರು ಬೇಕಾದರೂ ಸುಲಭವಾಗಿ ಗ್ರಹಿಸಬಹುದಾಗಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet