ಕೈಲಾಸಂ ಕಿರು ಸಿನೆಮಾ...
ಬರಹ

ಈ ಕಿರು ಚಿತ್ರದ ಪ್ರತಿ ಪ್ರೇಮ್ ಅದ್ಭುತವಾಗಿದೆ. ಶ್ರೀಷ್ ಕುಂದರವಲ್ಲಿ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ನಿಜಕ್ಕೂ ಒಂದು ಕಲಾಕೃತಿಯೇ ಆಗಿದೆ. ಅಷ್ಟು ಚೆಂದಗೆ ಇಡೀ ಚಿತ್ರವನ್ನ ತೆಗೆಯಲಾಗಿದೆ. ದೃಶ್ಯ ಸಂಯೋಜನೆಗೆ ಪ್ಲಾನ್ ಮಾಡಿದ ಲೈಟಿಂಗ್ ಆಗಿರಲಿ. ಕ್ಯಾಮೆರಾ ಯ್ಯಾಂಗಲೇ ಆಗಿರಬಹುದು. ಎಲ್ಲವೂ ಮನಮೋಹಕ. ಕಾರಣ, ಅಷ್ಟು ಶೃದ್ಧೆಯಿಂದಲೇ ಲೋಕಲ್ ಮೋಷನ್ ಫಿಕ್ಚ್ ಟೀಮ್ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.
ಚಿತ್ರದ ಆರಂಭ ಶ್ರೀನಗರ ಕಿಟ್ಟಿ ನಿರೂಪಣೆಯಲ್ಲಿಯೇ ಸಾಗುತ್ತದೆ. ಟಿ.ಪಿ.ಕೈಲಾಸಂ ಅವರ ೧೭ ನಾಟಕಗಳ ಸಂಕ್ಷಿಪ್ತ ವಿವರಣೆನೂ ಇಲ್ಲಿ ದೊರೆಯುತ್ತದೆ. ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಕನ್ನಡದ ಬಗ್ಗೆನೂ ಇಲ್ಲಿ ಪುಟ್ಟದೊಂದು ಪರಿಚಯವೂ ಸಿಗುತ್ತದೆ...ಇದಾದ ಮೇಲೆ ಇಲ್ಲಿ ಟಿ.ಪಿ.ಕೈಲಾಸಂ ಖುದ್ ಮಾತನಾಡಲು ಶುರು ಮಾಡುತ್ತಾರೆ...
ಟಿ.ಪಿ.ಕೈಲಾಸಂ ಇಲ್ಲ ಅನ್ನೋದು ಗೊತ್ತೆಯಿದೆ. ಆದ್ರೆ, ಇಲ್ಲಿ ಆ ಪಾತ್ರಕ್ಕೆ ರೇಡಿಯೋ ಜಾಕಿ ಮತ್ತು ಅಭಿನಯ ತಂರಂಗದ ವಿದ್ಯಾರ್ಥಿ ಶ್ರೀನಿ ಜೀವ ತುಂಬಿದ್ದಾರೆ. ಟಿ.ಪಿ.ಕೈಲಾಸಂ ಥರದ ಗೆಟಪ್. ಸಿಗರೇಟ್ ಸೇದುವ ಅವರ ಸ್ಟೈಲ್. ಸರಾಬು ಕುಡಿಯೋ ಖದರ್. ಹಂಗಂಗೆ ಇಲ್ಲಿ ಕಣ್ಣುಮುಂದೆ ಕಟ್ಟುತ್ತವೆ...ಆ ಕ್ಷಣವೇ ಕೈ ಇಲ್ಲಿ ಇನ್ನು ಜೀವಂತ ಅನ್ನೋಥರವೇ ಭಾಸವಾಗುತ್ತದೆ...
ಕೈಲಾಸಂ ಅನೇಕ ಪಾತ್ರಗಳನ್ನ ರಂಗಕ್ಕೆ ತಂದಿದ್ದಾರೆ. ಅದೇ ಪಾತ್ರಗಳೇ ಈ ಚಿತ್ರದಲ್ಲಿ ಮಾತನಾಡುತ್ತವೆ. ಕೈಲಾಸಂಗೇನೆ ಹತ್ತು ಹಲವು ಪ್ರಶ್ನೆಗಳನ್ನ ಕೇಳುತ್ತವೆ. ಆದ್ರೆ, ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೇನೆ ಕೈಲಾಸಂ ಮುಗುಳು ನಗೆಯಲ್ಲಿಯೇ ಅವುಗಳನ್ನೆಲ್ಲ ತೇಲಿಸಿ ಮುಂದಿನ ಕ್ಯಾರೆಕ್ಟರ್ ಗಳ ಬಗ್ಗೆ ತಮ್ಮಲಿಯೇ ಪ್ರಶ್ನಿಸಿಕೊಂಡು ಮುನ್ನಡೆಯುತ್ತಾರೆ...
ಈ ರೀತಿ ಚಿತ್ರದಲ್ಲಿ "ಸೂಳೆ" ನಾಟಕ ಪಾತ್ರ ಬರುತ್ತದೆ. ಟೊಳ್ಳು-ಗಟ್ಟಿ ರಚನೆಯ ಕ್ಯಾರೆಕ್ಟರ್ ಗಳು ಹಾದು ಹೋಗುತ್ತವೆ. ಈ ಎಲ್ಲ ಪ್ರಮುಖ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬಿದ್ದಾರೆ. ಹಾಗಂತ ಛಾಯ ಇಲ್ಲಿ ಎಲ್ಲೂ ಒಂದೇ ಥರ ಕಾಣಿಸುವುದಿಲ್ಲ. ಒಂದೇ ಥರದ ಅಭಿನಯವೂ ಇಲ್ಲ ಬಿಡಿ. ಅಂತಹ ಕಲಾತ್ಮಕ ನಟನೆಯನ್ನ ಛಾಯಾ ಸಿಂಗ್ "ಸಿಂಪ್ಲಿ ಕೈಲೋಸಂ" ನಲ್ಲಿ ತೋರಿದ್ದಾರೆ. ಸದ್ಯಕ್ಕೆ ಈ ಚಿತ್ರ ಬೆಂಗಳೂರಲ್ಲಿ ಇತ್ತೀಚಿಗೆ ಪೂರ್ವ ಪ್ರದರ್ಶನ ಕಂಡಿದೆ. ಮೆಚ್ಚುಗೆನೂ ಪಡೆದಿದೆ...
- ರೇವನ್ ಪಿ.ಜೇವೂರ್