ಕೈಲಾಸ‌ ಮಾನಸ‌ ಸರೋವರ‌ ಯಾತ್ರೆಯ‌ ಬಗೆಗೆ ವಿವರ‌ ಬೇಕು

ಕೈಲಾಸ‌ ಮಾನಸ‌ ಸರೋವರ‌ ಯಾತ್ರೆಯ‌ ಬಗೆಗೆ ವಿವರ‌ ಬೇಕು

ಮಾನ್ಯರೇ,

ಸ‌oಪದದ‌ ಸದಸ್ಯತ್ವ‌ ದೊರಕಿದುದು ಸ‌oತೋಷದ‌ ಸ‌oಗತಿ. ಧನ್ಯವಾದಗಳು.

ಕೈಲಾಸ‌ ಮಾನಸ‌ ಸರೋವರ‌ ಯಾತ್ರೆ ಕೈಗೊಳ್ಳುವವರು ಓದಲೇಬೇಕಾದ‌ ಪುಸ್ತಕ‌ ಎoಬ‌ ಹಣೆ ಪಟ್ಟಿಯೊoದಿಗೆ ಜಯಲಕ್ಷ್ಮಿ ಪಾಟೀಲರ‌ ಪ್ರತಿಕ್ರಿಯೆ ಓದಿದೆ. ಪುಸ್ತಕದ‌ ಹೆಸರು ಮರೆತಿದೆ. ದಯವಿಟ್ಟು ಪುಸ್ತಕದ‌ ಹೆಸರು ತಿಳಿಸುವಿರಾ?

ಶೋಭಾ

Comments

Submitted by sasi.hebbar Wed, 01/02/2013 - 14:35

ಶೋಭಾ ಉಡುಪ ಅವರೆ, ಮಾನಸ ಸರೋವರ ಯಾತ್ರೆಯ ಕುರಿತು ಹಲವಾರು ಪುಸ್ತಕಗಳು ಬಂದಿವೆ. ಕೈಲಾಸ ಮಾನಸ ಯಾತ್ರೆ ಎಂಬುದೇ ಹೆಚ್ಚಿನ ಪುಸ್ತಕಗಳ ಹೆಸರುಗಳು. ನನ್ನ ಬಳಿ ಒಂದು ಇದೆ - ಅದರಲ್ಲಿ ಎಲ್ಲಾ ಪ್ರದೇಶಗಳ ವಿವರಗಳೂ ಇವೆ - ವಿ.ಎಸ್.ಕಳಸೇಶ್ವರ ಎಂಬುವವರು ಬರೆದದ್ದು. ಯಾವುದಾದರೂ ಚಿತ್ರ ಸಹಿತ ಇರುವ ಪುಸ್ತಕವನ್ನು ಓದಿ, ನೀವು ಯಾತ್ರೆ ಮಾಡಬಹುದು! - ಅಂದ ಹಾಗೆ, ಕೈಲಾಸ - ಮಾನಸ ನೋಡುವ ನಿಮ್ಮ ಆಸೆ ಕಂಡು ನನಗೂ ಅಲ್ಲಿಗೆ ಹೋಗಬೇಕೆನಿಸಿ, ಅಸೂಯೆ ಆಯಿತು. ..... -- - ನಿಮ್ಮ "ಹಾಲಾಡಿ ಅಜ್ಜಯ್ಯನವರ" ಹೆಸರನ್ನು ತಿಳಿದುಕೊಳ್ಳಲು ಪ್ರಯತ್ನಿಸಿ - ಅವರು ಯಾವ ಮನೆಯವರು ಎಂದು ತಿಳಿದುಕೊಳ್ಳುವ ಕುತೂಹಲ ನನಗೆ ಈಗ ಉಂಟಾಗಿದೆ. ಹಿಂದಿನವರ ಹೆಸರನ್ನು ಹುಡುಕುವುದೇ ಒಂದು ಸವಾಲು ಮತ್ತು ಆ ಪ್ರಯತ್ನ ಕುತೂಹಲಕಾರಿಯಾಗಿರುತ್ತದೆ. - ನಮ್ಮ ಕಡೆಯ, ಅಂದರೆ, ಕುಂದಾಪುರ ತಾಲೂಕಿನ ತಿನಿಸುಗಳ ಕುರಿತು ನೀವು ಸಂಪದದಲ್ಲಿ ಬರೆಯುವಿರಾ? ಉದಾ; ಕೆಸುವಿನ ಸೊಪ್ಪಿನ ಚಟ್ನಿ, ಉಂಡಲಕಾಯಿ, ಓಡು ದೋಸೆ, ಇ.ಇ. -ಶಶಿಧರ ಹಾಲಾಡಿ.
Submitted by Shobha Kaduvalli Thu, 01/03/2013 - 20:48

In reply to by sasi.hebbar

ಶಶಿಧರ ಹೆಬ್ಬಾರರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತಾ ಯಾತ್ರೆಯ ವಿವರ ಇರುವ ಪುಸ್ತಕ ಕೊಳ್ಳುವೆ. ನೀವೇನೂ ಅಸೂಯೆ ಪಡುವ ಅವಶ್ಯಕತೆ ಇಲ್ಲ... ನನ್ನದು ಇದು ಮೊದಲ ಹೆಜ್ಜೆ. ಆಮೆ ಗತಿಯ ನಡೆ ನನ್ನದು. (ಮಧ್ಯಮ ವರ್ಗದ ಕನಸು) ಅಂದಹಾಗೆ ನನ್ನ ಹಾಲಾಡಿ ಅಜ್ಜಯ್ಯನವರ ಹೆಸರನ್ನು ತಿಳಿದುಕೊಳ್ಳುವ ಕುತೂಹಲ ನನ್ನಲ್ಲೂ ಈಗ ಮೂಡಿದ್ದು, ಪ್ರಯತ್ನ ಪಡುತ್ತಿದ್ದೇನೆ. ಹೌದು, ಹಿಂದಿನವರ ಹೆಸರನ್ನು ಹುಡುಕುವುದು ಒಂದು ಸವಾಲೇ ಸರಿ. ಅಂದ ಹಾಗೆ ನಮ್ಮ ಕಡೆಯ ತಿನಿಸುಗಗಳಲ್ಲಿ ಕೆಲವು ಮಾತ್ರ ನನಗೆ ತಿಳಿದಿದೆ. ಕೆಸುವಿನ ಸೊಪ್ಪಿನ ಚಟ್ನಿ ಮತ್ತು ಉಂಡಲ ಕಾಯಿ ತಿಂದು ಗೊತ್ತು ... ಮಾಡಿ ಗೊತ್ತಿಲ್ಲ..!! ಓಡು ದೋಸೆ...ಇದು ಯಾವ ದೋಸೆ? ನನಗೆ ಗೊತ್ತಿಲ್ಲ.
Submitted by Shobha Kaduvalli Sun, 01/06/2013 - 12:08

In reply to by Shobha Kaduvalli

ಶಶಿಧರ‌ ಹೆಬ್ಬಾರರೇ, ಅoತೂ ನಮ್ಮ ಹಾಲಾಡಿ ಅಜ್ಜಯ್ಯನವರ‌ ಹೆಸರು ತಿಳಿದುಕೊoಡೆ.... ಅವರ‌ ಹೆಸರು "ನಾಗಪ್ಪಯ್ಯ‌ ಉಪಾಧ್ಯ‌" ಉಪಾಯ್ದ್ರ್ ಮನೆ... ಇದು ನನ್ನ‌ ದೊಡ್ಡಮ್ಮನ‌ ಹತ್ತಿರ‌ ಕೇಳಿ ತಿಳಿದುಕೊoಡದ್ದು... ಪ್ರತಿಕ್ರಿಯುಸುತ್ತೀರಲ್ಲ‌..?