ಕೊಂದುಬಿಡು ತಾಯಿ
ಪದೇ ಪದೇ ಅದೇ ಬೇಗುದಿಗೆ
ಸಿಕ್ಕು ನರಳುತ್ತಿದೆ ಮನ,
ನೆತ್ತರು ಹರಿಸಿ ದೇಶ ಕಟ್ಟಿ
ವೀರರೆಲ್ಲ ಸತ್ತ ಮೇಲೆ
ನನ್ನಂತವರು ಇಲ್ಲಿ ಹುಟ್ಟಲು
ಅದೆಷ್ಟು ಅರ್ಹರು?
ದಿಟ್ಟ ದೀರರು,
ಮೀಸೆ ತಿರುವಿ; ಸಡ್ಡು ಹೊಡೆದು
ದೂರ್ತರನು ಹೊಡೆದು ಉರುಳಿಸಿ
ಸ್ವರ್ಗ ಸೇರಿದ ಮೇಲೆ
ನನ್ನಂತಹ ಕೈಲಾಗದವರಿಗೆ
ಜನ್ಮವೇಕಿತ್ತಳು ತಾಯಿ?
ಪ್ರಶ್ನೆಗಳು ಒಳಗೊಳಗೆ ಕಾಡಿ
ಮೈಮೇಲಿನ ಬೊಬ್ಬೆಗಳಂತೆ
ನೋವಿಡುತ್ತಿವೆ,
ಉಸಿರಾಟ ಮರೆತರು ಮರೆತಿದ್ದಾನು
ಆ ನವ ಯುವಕ ಭಗತ್
ದೇಶವನ್ನು ಮರೆಯಲಿಲ್ಲ,
ಕಡ್ಗವಾಗಿ ಗುಡುಗಿ,
ಪ್ರಾಣವನ್ನು ಚೆಲ್ಲಿ,
ಓಡಿಸಿದ ಪರಕೀಯರನು,,,,
ಇನ್ನೊಬ್ಬ ಫಕೀರ,
ಬಟ್ಟೆ ತೊಡದೆ, ಬರಿ ಮೈಯ
ಹೋರಾಟದಲಿ, ಮೌನ ಶಾಂತಿಯ
ದೀವಿಗೆ ಹಿಡಿದು, ಗುಂಡಿಗೆ ಮೈ ಒಡ್ಡಿ
ಮಾತೆಯ ದ್ವಜ ಪತಾಕೆ ಹಿಡಿದು
ಕಿತ್ತು ಹಾಕಿದ ಪರಕೀಯತೆಯನು,,,,
ನಾನೇನು ಮಾಡಿದೆ?
ಇದೇ ತಾಯಿಯ ಹೊಟ್ಟೆಯಲಿ ಹುಟ್ಟಿ
ಇಲ್ಲೇ ರಸ್ತೆ ಬದಿಯಲ್ಲಿ ಆಡಿ, ಬೆಳೆದು
ಇದೇ ಮಣ್ಣಿನ ಅನ್ನವ ತಿಂದು
ಓದಿದ್ದೆನೆಂದು ಬೀಗಿ,,,,,,,,,
ಅವರೆಲ್ಲ ಅಂದು ಓಡಿಸಿದ
ಪರಕೀಯರ ಮನೆಯ ಹೊಸ್ತಿಲ
ಬದಿಯಲ್ಲಿ, ಅವರು ಹಾಕುವ
ನಾಲ್ಕಣೆ ಕಾಸಿಗೆ,
ಸ್ವಚ್ಚ ಬಟ್ಟೆಯಲಿ, ಕಪ್ಪು ಶೂ ನಲಿ,
ಅವರ ಸೇವೆ ಮಾಡುತ್ತಿರುವೆನಲ್ಲ,,,,
ಯಾಕೆ ಹೆತ್ತಳು, ನನ್ನಂತಹ ಮಗನನು
ಈ ತಾಯಿ?
ಜಾಗತೀಕರಣದ ಜಾತ್ರೆಯಲಿ
ಸುತ್ತುವ ನಾನೊಂದು, ನಾಯಲ್ಲದೇ ಇನ್ನೇನು?
ನನ್ನವ್ವ ಉಟ್ಟ, ಸೀರೆಯನೇ ಹರಿದು,
ಇನ್ನೊಬ್ಬನಿಗೆ ಕೊಟ್ಟು,
ಅದೇನೊ ಸಾದಿಸಿದೆವು ಎಂದು
ಎದೆ ತಟ್ಟಿ ಹೇಳುವ, ನನ್ನಂತ ಮಕ್ಕಳ
ಯಾಕೆ ಹೆತ್ತಳು ತಾಯಿ?
ಕೊಂದುಬಿಡು ತಾಯಿ,,,,,
ನಿನ್ನ ಬದುಕ ಕೊಂದ, ಪಾಪಾತ್ಮ ಮಗನನ್ನು,,
ಮತ್ತೆಂದು ಹುಟ್ಟದ ಹಾಗೆ,,,,
-- ಜೀ ಕೇ ನ