ಕೊೞಲ್, ಕೊಳಲ್, ಕೊಳಲು

ಕೊೞಲ್, ಕೊಳಲ್, ಕೊಳಲು

Comments

ಬರಹ

ಕೊೞಲ್, ಕೊಳಲ್, ಕೊಳಲು (ನಾ)

ಬಿದಿರ ಕೊಳವೆಯಿಂದ ಮಾಡಿದ ಊದುವ ವಾದ್ಯ; ವೇಣು

ಎಕ್ಕ ಮದ್ದಳೆಯ ಕೊೞಲ ಝಂಕಾರದ ಪಱೆಗಳ್ ಮುಂದೆ ಬಾಜಿಸುತ್ತಂ (ವಡ್ಡಾರಾಧನೆ ೮೦-೧೨); ದಂಟನೂದುವಂಗೆ ಕೊೞಲ್ ದೊರೆಕೊಂಡುದೆಂಬಂತೆ (ಧರ್ಮಾಮೃತ ೧೦-೨೮೦); ಮುರಹರನ ಕೊೞಲ ಸನ್ನೆಯ ವರರವಕನುಸರವಿದೆಂಬಿನಂ (ಜಗವಿ ೪-೧೧೫); ಕರಡೆಯ ಮದ್ದಳೆಯ ಕೊೞಲ ಪಳವದ . . . ಕಿನ್ನರದ ಸರಮೆ ಸರಮಾ ಪೊೞಲೊಳ್ (ಸೂಕ್ತಿಸುಧಾರ್ಣವ ೪-೧೦೪)

ತ್ರಿಭಂಗಿಯಿಂದಂ ನಿಂದು ಒಪ್ಪುತಿರ್ಪೊಂದು ಪೊಸ ಕೊಳಲಂ ಕೊಳುತ್ತಂದು . . . ಅಧರದೊಳ್ತಂದಿರಿಸಿದಂ ಕೊಳಲನೊಪ್ಪದಿಂ (ಆನಾರ ೧೮೧-೧೪)

ಸವೆಯದೂದುವ ಕೊಳಲು ಮೈಯ ತವರದ ತೊಡಿಗೆ ಎಸೆವುತಿರೆ (ಬಸರ ೯-೧೦೨); ಕೊಳಲನೂದುತ್ತಾ ಬಂದ ನಮ್ಮ ಗೋಪಿಯ ಕಂದ ಕೊಳಲನೂದುವುದು ಬಲು ಚೆಂದ (ಪುರಂದರದಾಸ ೧-೧೩೩-೧); ಕೊಳಲಿಗೆ ಪಶು ಮಿಗ ಘಂಟೆಗೆ ಹಸುಳೆ ಜೋಗುಳೆಗೆ ಸರ್ಪ ಸುನಾಗಸರಕೆ (ಭರಚ ೧-೮೮); ಕೊಂಬು ಕೊಳಲು ನಾಗಸರ ಭೇರಿ ತಂಬಟಬೊಂಬುಳಿಬುರುಗು ಡಿಂಡಿಮದ (ಕಂನವಿ ೮-೧೯); ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲಗೌಡನು (ಗೋವಿನಹಾಡು ೩೧)

[ತಮಿಳು, ಮಲಯಾಳ, ತುಳು: ಕುೞಲ್; ತೆಲುಗು: ಕ್ರೋವಿ]

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet