ಗಝಲ್ ಲೋಕ

ಗಝಲ್ ಲೋಕ

ಕವನ

ಹಣತೆ ಉರಿಯದೆ ಬೆಳಕು ಉಳಿವುದೆ ಹೇಳು

ಕನಸು ಕಾಣದೆ ಬದುಕು ನಲಿವುದೆ ಹೇಳು

 

ಹರೆಯ ಹೊಸಿಲ ನಡೆಯ ಒಳಗೆ ಅರಳದೇ

ಮನದ ಮಂಜರ ಕಾಣಲು ಅಳಿವುದೆ ಹೇಳು

 

ಜೀವನ ಮಧುರ ಬದುಕ  ಅನುಭವಿಸು ಇನ್ನಾದರೂ

ಮನಸು ಸುತ್ತುವ ಪರಿಯು ತಿಳಿವುದೆ ಹೇಳು

 

ದುಗುಡ ದುಮ್ಮಾನ ಇರಲು ಸುಖಕೆಲ್ಲಿದೆ ಜಾಗ

ಗಾಳಿಪಟದ ಬಣ್ಣವ ಚಂದ್ರ ಸೆಳೆವುದೆ ಹೇಳು

 

ತೆರೆಯಲು ಕದವ  ಓಡೋಡಿ ಬರುವನು ಈಶಾ

ಬಡತನದ ಬವಣೆ ಪ್ರೇಮವ ತುಳಿವುದೆ ಹೇಳು

 

-ಹಾ ಮ ಸತೀಶ, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್