ಗಣಪಗೆ ಗಾನ ಕಾಣಿಕೆ
ಕವನ
ಗಣಪಗೆ ಗಾನ ಕಾಣಿಕೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಸೂಚನೆ:
ಈ ಹಾಡಿನ ವೈಶಿಷ್ಟ್ಯ ಸಂಗೀತ ಪ್ರಾಸ ಅಥವಾ ಸಪ್ತಸ್ವರ ಪ್ರಾಸ.
ಈ ಹಾಡನ್ನು ಯಾವುದಾದರೂ ಸಂಪೂರ್ಣ ರಾಗದಲ್ಲಿ ಹಾಡಬಹುದು;
ರಾಗ ಮಾಲಿಕೆಯಾಗಿ ಪರಿ ಪರಿ ರಾಗಗಳಲ್ಲಿಯೂ ಅಲಂಕರಿಸಿ ಹಾಡಬಹುದು.
ಧನಿ ಮಧುರ, ಸ್ವರ ಮನೋಹರ, ಸುರ ನಾದ, ರಾಗ ಪ್ರವಾಹ ಸರಸ
ಧನಿ ಮಧರಿ, ಸರಿ ಮನೀಧರಿ ಸರೀ ನಿ ಧಾ ರೀಗ ಪ ಪಾ ಧಾ ಸಾರಿಸಾ
ಗಣಪ ಸುಗಮ ಗುಣ ಗಾನ ಮಾಧುರೀ ಮಾನುಷ ಮುಂಡ ಮೃಗ ಮೊಗ
ಗನಿಪಾ ಸಗಮ ಗನೀ ಗನೀ ಮಾಧರೀ ಮಾನೀಸಾ ಮಧ ಮಗಾ ಮಗಾ
ಘನ ಕನ್ನಡ ನುಡಿ ನುಡಿಯೋ ಪರಿ ಪರಿ ರಸ ನಿನಾದ ಸ್ವಾದನೆ ಕಾಣಿಕೆ
ಗನಿ ಗನೀಧಾ ನಿಧನೀಧಾ ಪರಿಪರಿ ರೀಸಾ ನಿನಿಧಾ ಸಾಧಾ ನಿಗಾನಿಗಾರಿಸಾ