ಗವನಿ, ಗವಣಿ

ಗವನಿ, ಗವಣಿ

ಬರಹ

ಗವನಿ, ಗವಣಿ (ನಾ)
=ಆವರಣ; ಪ್ರಾಕಾರ
ಆ ಮುಗಿಲ ಗವನಿಯಿಂದೊಳಗೆ (ಮಲ್ಲಿನಾಥಪುರಾಣ ೨.೬೭ವ); ಗವನಿಯ ಮಱೆಗೊಂಡಿಱಿವಿಸುವವರ್ಗಳ ಕೈಮಿಕ್ಕು ಮಿಕ್ಕು ತೋಱದವೋಲುಕ್ಕೆವಮಿಲ್ಲದೆಚ್ಚು ಪರಿದೇಱುವಾಳ್ಗೆ ಸನ್ನಾಹಮೆನಿಸಿದರ್ಬಿಲ್ಲಾಳ್ಗಳ್ (ಪಾರ್ಶ್ವನಾಥಪುರಾಣ ೩.೧೪೩); ಎಲ್ಲಿ ಬಾಗಿಲು ಗವನಿ ಕಾಲುವೆ ಎಲ್ಲಿ ಅಗಳಗುಸೆಗಳು . . . ಅಲ್ಲಿಗಲ್ಲಿಗೆ ಭಟರ ಕಾವಲು ಬಲ್ಲಿತಾಗಲಿ (ಕೌಶಿರಾ ೨೮.೨)

=ಓಣಿ; ಸಣ್ಣ ಬೀದಿ; ಗಲ್ಲಿ
ಪಡುವಣ ಗವನಿಯಲ್ಲಿ ಮನೆಯೊಂದು (ಎಪಿಗ್ರಾಫಿಯಾ ಇಂಡಿಕಾ XIII, ೨೧.೪೩; 1204); ಧರಣಿಯನ ತೋಂಟ[ವೂ]ರು ಗವನಿಯಿಂ ಕೆಳಗೆ ಸೋಮನಾಥದೇವರಿಗೆ ಹೋದ ಬಟ್ಟೆಯಿಂ (ಕ ಇ II, ೩೮.೪೯; 1235)
ಡೆಂಕಣಿಯ ಗವಣಿ [ಪಾಠಾಂ. ಗವಣೆ] ಗಳ ಕೋಟೆಯ ಕೊಂಕುಗಳ ಕೊತ್ತಳದ ತೆನೆಗಳ . . . ದುರ್ಗವನೀಕ್ಷಿಸುತ (ನಿಭಾಗ ೧೦.೩೬.೩೫)

[ತೆಲುಗು: ಗವನು, ಗವಿನಿ=ಕೋಟೆಯ ಬಾಗಿಲು]

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet