ಗುರುವಿಗೆ to Jayanth Kaikini Sir....

ಗುರುವಿಗೆ to Jayanth Kaikini Sir....

ಬರಹ

ನಿಮಗಾಗಿ ನನ್ನ ಹುಡುಕಾಟ,
ನನ್ನ ಕನಸುಗಳಿಗೆ ರೆಕ್ಕೆ ನೀಡಲು,
ನಿಮಗಾಗೆ ನನ್ನ ಉಸಿರಾಟ,
ನನ್ನ ಮೌನವು ಬಾಯಿಬಿಡಲು.

ಪ್ರಶಾಂತತೆಯಲ್ಲಿ ಉದ್ದಕ್ಕೂ ಹರಿಯುತ್ತಿದೆ,
ನನ್ನೊಳಗಿನ ಪ್ರೀತಿ;
ನಿಮ್ಮ ಹೃದಯ ಸ್ಪರ್ಶಿ ಕವಿತೆಗಳಿಂದ.
ಇಲ್ಲಿನ ಸ್ಲಂ ಗೂಡು ಮನೆಗಳಲ್ಲಿ,
ಮರೆಯಲಾಗದ ಸಂಗತಿಗಳು,
ಒಳಗೊಳಗೆ ಉಸಿರಾಡುತ್ತಿದೆ,
ನಿಮ್ಮ ಅನಿಸುತ್ತಿದೆ ಸಾಹಿತ್ಯದಿಂದ.

ಈ ಹುಚ್ಚರ ಸಂತೆಯ ಮಧ್ಯೆ;
ಉಜ್ವಲಿಸುತ್ತಿರಲು ನಿಮ್ಮ ನಗು,
ಎದೆ ಝಲ್ ಎನಿಸುತ್ತಿದೆ,
ಸುಮ್ಮನಿರಲು,
ನನಗೂ, ಹಾಗೆ ಸುಮ್ಮನೆ,
ಒಂದು ಕವಿತೆ ಬರೆದುಬಿಡಿ.

ನಿಮಗಾಗಿ ನನ್ನ ಹುಡುಕಾಟ,
ನಿಮಗಾಗೆ ನನ್ನ ಉಸಿರಾಟ,
ತೂರಿಕೊಂಡು ಒಮ್ಮೆ,
ನನ್ನೊಳಗೆ ಇಣುಕಿ ನೋಡ ಬನ್ನಿ;
ಇರಿದಂತೆ ಅಡಗಿದೆ,
ನಿಮ್ಮಮೇಲಿನ ನನ್ನ ಪ್ರೇಮ.
ನಿಮ್ಮಮೇಲಿನ ನನ್ನ ಪ್ರೇಮ.

ಸುಬ್ಬಿ :-)