ಗೂಗಲ್ ಕ್ರೋಮ್ : ಮೊದಲ ನೋಟ

ಗೂಗಲ್ ಕ್ರೋಮ್ : ಮೊದಲ ನೋಟ

ಬರಹ

Asterix ಕಾಮಿಕ್ಸ್ ಓದುವಾಗ ಬಹಳ ಸರಿ ಕೇಳಿ ಬರುವ ಒಂದು ಜೋಕು: ಕಥೆಯಲ್ಲಿ phoenician ವ್ಯಾಪಾರಿಯೊಬ್ಬನಿಗಿರುವ ಆಳುಗಳದ್ದು. ಅವರುಗಳು ಕಥೆಯಲ್ಲಿ ಈ ವ್ಯಾಪಾರಿಯ ಪಾರ್ಟ್ನರುಗಳಂತೆ, ಸರಿಯಾಗಿ ಓದಿಕೊಳ್ಳದೆ ಸಹಿ ಹಾಕಿ ಇವನಡಿ ಆಳುಗಳಂತೆ ದುಡಿಯುತ್ತಿರುತ್ತಾರೆ.

ಗೂಗಲ್ ನ ಯಾವುದೇ ಹೊಸ ಪ್ರಾಡಕ್ಟು ಟ್ರೈ ಮಾಡಲು ಹೊರಟ ನಾವುಗಳು ಇದೇ ವ್ಯಾಪಾರಿಯ ಪಾರ್ಟ್ನರುಗಳ ಥರಾ. ಪೇಜುಗಟ್ಟಲೆ ಟರ್ಮ್ಸ್ ಅಂಡ್ ಕಂಡೀಶನ್ಸ್ ಯಾರು ತಾನೆ ಓದಿಕೊಳ್ಳುತ್ತಾರೆ? ಜೊತೆಗೆ ಅದು ಯಾವಾಗ ಬೇಕಾದರೂ ಬದಲಾಗಬಹುದು ಎಂದು ಬೇರೆ ಅದರಲ್ಲೊಂದು clause ಇರುತ್ತದೆ!
ಇರಲಿ, ಹೀಗೆ ಟರ್ಮ್ಸಿಗೆ ಒಪ್ಪಿಕೊಂಡರೆ ಮಾತ್ರ ಮುಂದೆ ಹೋಗುವಂತೆ ಸುಮಾರು ಆನ್ಲೈನ್ ಸೇವೆಗಳು ನೋಡಿಕೊಳ್ಳುತ್ತವೆ. ಇದು ಅವುಗಳಿಗೆ ತೆಗೆದುಕೊಳ್ಳಲೇಬೇಕಾದ measuresಉ. ಆದರೆ "ಕಿಸೀಕೆ ಸಘೇ ನಹಿ ಹೋತೆ" ಎಂಬಂತಿರುವ ಮಲ್ಟಿನ್ಯಾಶನಲ್ಲುಗಳಲ್ಲಿ ನಂಬಿಕೆಯಿಡೋದು ಕಷ್ಟವೇ. ಇವೆಲ್ಲ ಮನಸ್ಸಿಗೆ ಬಂತು, ಬರೆದೆ. ಈಗ ಬದಿಗಿಡೋಣ. ಏಕೆಂದರೆ ಸ್ವಲ್ಪವೇ ಹೊತ್ತಿನ ಮುಂಚೆ ಸ್ವತಃ ಗೂಗಲ್ ರೆಡಿ  ಮಾಡಿರುವ ಬ್ರೌಸರ್ - ಗೂಗಲ್ ಕ್ರೋಮ್ (Google Chrome) ಬಿಡುಗಡೆಯಾಗಿದೆ. ಇದರ ಮೊದಲ ಇಣುಕುನೋಟ ಇಗೋ ನಿಮ್ಮ ಮುಂದೆ.

ಗೂಗಲ್ ನಿಂದ ಹೊರಬಂದ ಪ್ರಾಡಕ್ಟುಗಳಲ್ಲಿ ಎಂದಿನಂತೆ ಇದೂ ಬೀಟ!

ಡೌನ್ಲೋಡ್ ಕೂಡಲೆ ಆಗುವಷ್ಟು ಸಣ್ಣ ಫೈಲು - ತದನಂತರ ಮತ್ತೊಮ್ಮೆ ಇಂಟರ್ನೆಟ್ಟಿಗೆ ಕನೆಕ್ಟ್ ಆಗಿ ಮತ್ತಷ್ಟು ಡೌನ್ಲೋಡ್ ಮಾಡುತ್ತದೆ. ಆದರೆ ಇದು ಕೂಡ ಅತಿ ಶೀಘ್ರ.
ಬಹಳ Light weighted. (ಪುಟಗಳು ಬೇಗನೆ ತೆರೆದುಕೊಂಡಂತೆ ಭಾಸವಾಗುವಷ್ಟು).

ಮೆನುಗಳು ತಕ್ಷಣಕ್ಕೆ ಕಣ್ಣಿಗೆ ಬೀಳವು. ಐಕಾನಿನ ಕೆಳಗೆ ಹುದುಗಿಕೊಂಡಿವೆ (ಒಪೇರಾದಲ್ಲೂ ಹೀಗೇ ಅಲ್ಲವೆ?)

ಉಳಿದಂತೆ ಫೈರ್ ಫಾಕ್ಸ್ ಬಳಸಿದ ಅನುಭವವೇ. ಹೆಚ್ಚೆಂದರೆ ತುಂಬ ಟ್ಯಾಬುಗಳು ತೆರೆದಾಗ ಫೈರ್ ಫಾಕ್ಸಿನಷ್ಟು ಮೆಮೋರಿ ತಿನ್ನುತ್ತಿರುವ ಹಾಗೆ ಕಾಣಲಿಲ್ಲ. ಆದರೂ ಹೊಸತಾಗಿ ತೆರೆದ ಪುಟಗಳು ಲೋಡ್ ಆಗುವ ಸಮಯ ನಿಧಾನವಾಗುತ್ತ ಹೋಯಿತು.

ಅಡ್ರೆಸ್ ಬಾರಿನಲ್ಲಿ ಕನ್ನಡ ಸರಿಯಾಗಿ ಬರುತ್ತಿರುವಂತಿಲ್ಲ. ಬದಲಿಗೆ ಡಬ್ಬಗಳು ಬರುತ್ತಿವೆ. ಹೀಗಾಗಿ ಕನ್ನಡದಲ್ಲಿ ಸರ್ಚ್ ಮಾಡುವುದು ಸದ್ಯಕ್ಕೆ ಮರೀಚಿಕೆ!

ಎಲ್ಲ ಬ್ರೌಸರುಗಳಂತೆ ಇದರಲ್ಲೂ ಪಾಪ್-ಅಪ್ ಬ್ಲಾಕರ್ ಉಂಟು.

ಆದರೆ ಸದ್ಯಕ್ಕೆ ಜಾಹಿರಾತು ತಡೆಯುವ ಸಾಧನ ಏನೂ ಇದ್ದ ಹಾಗೆ ಇಲ್ಲ.

ನೀವು ಹೆಚ್ಚು ಭೇಟಿ ಕೊಟ್ಟ ಅಥವ ಕೊಡುತ್ತಿರುವ ಸೈಟುಗಳನ್ನು  thumbnails ಇಟ್ಟುಕೊಂಡು ಅಂದರೆ ಆಯಾ ಪುಟದ ಚಿಕ್ಕ ಚಿತ್ರ ಸೆರೆಹಿಡಿದು ಹೊಸ ಖಾಲಿ ಟ್ಯಾಬ್ ತೆರೆದಾಗ ತೋರಿಸುತ್ತದೆ. ಇದು ಉತ್ತಮ ಐಡಿಯ. ಆದರೆ ಭಾರವಾದ ಸವಲತ್ತಾಗುವ ಸಂಭವ ಹೆಚ್ಚು.

ಸ್ಟೇಟಸ್ ಬಾರ್ ಸ್ವಲ್ಪವೇ ಉದ್ದ ಕೊಟ್ಟಿರುವುದು ಒಳ್ಳೆಯ ಐಡಿಯ. ಉಳಿದ ಜಾಗ ನೋಡುತ್ತಿರುವ ಪುಟಕ್ಕೆ ಮೀಸಲಿಡಬಹುದು. ಹೆಚ್ಚಾಗಿ ಸ್ಟೇಟಸ್ ಬಾರಿನಲ್ಲಿ ಆ ಪ್ಲಗ್ಗಿನ್ನು ಈ ಪ್ಲಗ್ಗಿನ್ನು ಅಂತಲೇ ಉಪಯೋಗವಿಲ್ಲದ ಹಾಗೆ ಇಟ್ಟುಕೊಂಡಿರುತ್ತೇವಲ್ವೆ? (Firefox ಬಳಕೆದಾರರಿಗೆ ಇದು ಹೆಚ್ಚು ಸುಲಭವಾಗಿ ಅರ್ಥವಾಗುವುದು)

ಒಟ್ಟಾರೆ ಮೊದಲ ನೋಟಕ್ಕೆ ನನಗನಿಸಿದ್ದು "ಇನ್ನೂ ಕಾದು ನೋಡೋಣ" ಎಂಬುದು. ನನ್ನಂಥವರಿಗೆ ಈ ಬ್ರೌಸರ್ ನಿತ್ಯ  ಬಳಸುವುದರಿಂದ ದೂರವಿಡುವ ಸಮಸ್ಯೆಗಳು ಎರಡು:
೧) ಕನ್ನಡ ಅಡ್ರೆಸ್ ಬಾರ್ ನಲ್ಲಿ ಇನ್ನೂ ಸರಿಯಾಗಿ ಬರುತ್ತಿರುವಂತಿಲ್ಲ.
೨) ಗ್ನು/ಲಿನಕ್ಸ್ ಗೆ ಇನ್ನೂ ಈ ಬ್ರೌಸರ್ ಲಭ್ಯವಿಲ್ಲದಿರುವುದು.

ಈ ಬ್ರೌಸರ್ ಕುರಿತು ಮತ್ತಷ್ಟು ವಿವರ, observations ಮತ್ತೊಮ್ಮೆ... ಸಮಯವಾದರೆ!