ಗೂದೆ ಹಣ್ಣು ಮತ್ತು ನೆರಳಚ್ಚು
ಗೂದೆ ಹಣ್ಣು ಮತ್ತು ನೆರಳಚ್ಚು...ಇವೆರಡೂ ಪದಗಳಿಗೆ ಇರುವ ಸಂಬಂಧವೇನು ಎಂದು ತಲೆ ಕೆರೆದು ಕೊಳ್ಳಬೇಡಿ. ಪ್ರೊ. ಜಿ. ವೆಂಕಟಸುಬ್ಬಯ್ಯ ನವರ ಸಾಮಾಜಿಕ ನಿಘಂಟು “ಇಗೋ ಕನ್ನಡ” ತಿರುವಿ ಹಾಕುತ್ತಿದ್ದಾಗ ಇವೆರಡು ಪದಗಳು ಸಿಕ್ಕಿದವು. ನಗಲು ಮತ್ತು ಅರಿತು ಕೊಳ್ಳಲು ಸಹಾಯ ಮಾಡಿದ ಈ ಎರಡು ಪದಗಳ ಬಗ್ಗೆ ನಿಮಗೂ ಬರೆದು ತಿಳಿಸೋಣ ಎಂದು ಬರೆಯುತ್ತಿದ್ದೇನೆ.
ಹೇ, ಹೋಗಿ ಇದರ “ಜೆರಾಕ್ಸ್” ಕಾಪಿ ತಗೊಂಡ್ಬಾರೋ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಜೆರಾಕ್ಸ್ ಎಂದರೆ ನೆರಳಚ್ಚು ಎಂದು ನಿಘಂಟಿನಲ್ಲಿ ಅರ್ಥ ನೀಡಲಾಗಿದೆ. ಜೆರಾಕ್ಸ್ ಪದಕ್ಕೆ ಪರ್ಯಾಯವಾಗಿ ನೆರಳಚ್ಚು ಎನ್ನೋದು ನನಗಂತೂ ಸರಿ ತೋರಲಿಲ್ಲ. ನೆರಳು + ಅಚ್ಚು = ನೆರಳಚ್ಚು ತಾನೇ? ನೆರಳಿಗೆ ಆಕಾರ ಮತ್ತು ರೂಪ ಸ್ಪಷ್ಟವಾಗಿ ಇರುವುದಿಲ್ಲ. ಆದರೆ ಜೆರಾಕ್ಸ್ ಕಾಪಿಗೆ ಇದೆರಡೂ ಇದೆ. ಅಸಲಿ ಪ್ರತಿ (copy) ಯ ರೀತಿಯಲ್ಲೇ ಇರುತ್ತದೆ ಜೆರಾಕ್ಸ್ ಕಾಪಿ. ಹಾಗಾಗಿ ಅದು ನೆರಳಚ್ಚು ಆಗಬಾರದು. ಅದು ನನ್ನ ಮಟ್ಟಿಗೆ ಪಡಿಯಚ್ಚು ಆಗಬೇಕು. ನೋಡ್ರೀ...ನಿಮ್ಮ ಮಗ ನಿಮ್ಮ ಪಡಿಯಚ್ಚು, ಆಲ್ವಾ? ಎಂದು ಯಾರಾದರೂ ಅಂದಾಗ ತಂದೆ ಎದೆ ಉಬ್ಬಿಸುತ್ತಾನೆ, authenticity ಪ್ರೂವ್ ಆದ ಸಂಭ್ರಮದಲ್ಲಿ. ಇಲ್ಲಿ ಪಡಿಯಚ್ಚು ಎಂದರೆ ಥೇಟ್ ತಂದೆ ರೀತಿ ಎಂದು. ಹಾಗಾಗಿ ಜೆರಾಕ್ಸ್ ಕಾಪಿ ಗೆ ಪಡಿಯಚ್ಚು ಎಂದರೆ ತಪ್ಪಾಗಬಹುದೋ?
ಜೆರಾಕ್ಸ್ ಒಂದು ಕಂಪೆನಿ. ಅಮೇರಿಕಾ ಮೂಲದ್ದು. ಯಾವುದಾದರೂ ಒಂದು ಕಂಪೆನಿ ಪ್ರಪ್ರಥಮ ಬಾರಿಗೆ ಒಂದು ಉತ್ಪನ್ನ ತಂದಾಗಲೋ, ಅಥವಾ ಉತ್ಪನ್ನವೊಂದು ತುಂಬಾ ಜನಪ್ರಿಯ ಆದಾಗಲೋ ಉತ್ಪಾದಕ ರ ಹೆಸರು ಅದಕ್ಕೆ ತಗುಲಿ ಕೊಳ್ಳುತ್ತದೆ. ಯಾವುದೇ ಕಬ್ಬಿಣದ ಬೀರುವಿಗೆ ಗೋದ್ರೆಜ್ ಬೀರು ಎನ್ನುತ್ತಾರೆ. ಅದು ಗೋದ್ರೆಜ್ ನಿರ್ಮಿತವಲ್ಲದಿದ್ದರೂ. ಇದೇ ಗತಿ ಜೆರಾಕ್ಸ್ ಗೂ ಬಂದಿದ್ದು.
ಟೊಮೆಟೋ ಹಣ್ಣಿಗೆ ಕನ್ನಡದಲ್ಲಿ ಪರ್ಯಾಯ ಪದವಿದೆಯೇ? ಇಲ್ಲದೆ ಏನು, ಅದೇ “ಗೂದೆ ಹಣ್ಣು” ಎಂದು ಹೇಳುತ್ತದೆ ಈ ಸಾಮಾಜಿಕ ನಿಘಂಟು. ಗೂದೆ? “ಆರ್ ಯೂ ಶುಅರ್” ಎಂದು ಬಾಯಗಲಿಸಬೇಡಿ. ಹೌದು ಗೂದೆ ಹಣ್ಣಿಗೆ ಆಂಗ್ಲ ಭಾಷೆಯಲ್ಲಿ ಟೊಮೇಟೋ ಎನ್ನುತ್ತಾರೆ. ಬಹುಶಃ “ಗೂದೆ” (ಓಯ್, ಗೂದೆ ಎಲ್ಲೋಗಿದ್ದೆ?) ಎನ್ನುವ ಪದ ಕಸಿವಿಸಿಗೆ ಎಡೆ ಮಾಡಿ ಕೊಡೋದ್ರಿಂದಲೂ, ಮತ್ತು ಅದರ ಮೂಲ ಪದ ಸಂಸ್ಕೃತದ “ಗುದ” ದ ಮೂಲಕ ಬಂದಿದ್ದರೊಂದಲೋ ಏನೋ, ಅದರ ಸಹವಾಸವೇ ಬೇಡ, ಪರಂಗಿ ಭಾಷೆಯೇ ಚೆಂದ ಎಂದು ಟೊಮೇಟೋ ಬಳಕೆಯನ್ನು ಆರಂಭಿಸಿರಬಹುದು ನಮ್ಮ ಹಿರಿಯರು, ಅಲ್ಲವೇ?
ಆಂಗ್ಲದ ಎಲ್ಲಾ ಪದಗಳಿಗೆ ಪರ್ಯಾಯ ಕನ್ನಡ ಪದ ಉಪಯೋಗಿಸೋದು ಕನ್ನಡಮ್ಮನ ಸೇವೆ ಎಂದು ಕೆಲವರು ತಿಳಿದರೆ ಇನ್ನೂ ಕೆಲವರು ‘fad’ ಗೆ ಕಟ್ಟು ಬಿದ್ದು “ಅಭಿಯಂತರರು” ಎಂದು ಹೇಳಲಾಗದೆ ಹೆಣಗಾಡುತ್ತಾರೆ. ಮೊಬೈಲ್ ಉಪಕರಣಕ್ಕೆ “ನಡೆಯುಲಿ” ಎಂದೂ ಹೇಳುತ್ತಾರೆ.
ಕೊನೆಯದಾಗಿ ಪ್ರೊ. ಜಿ. ವೆಂ ಅವರು ಆಂಗ್ಲ ಭಾಷೆಯ fundamentalist ಪದಕ್ಕೆ ಕನ್ನಡದಲ್ಲಿ “ಮತಾಂಧ” ಎಂದು ಹೇಳಿದ್ದಾರೆ. ಇದು ತಪ್ಪು ಎಂದು ನನ್ನ ಅಭಿಪ್ರಾಯ. ನೀವೇನಂತೀರಾ?
ಹಾಗೆಯೇ, ಪದ ಮತ್ತು ಶಬ್ದದ ವ್ಯತ್ಯಾಸವೇನು? ನನಗೆ ಗೊತ್ತಿಲ್ಲ. ಇಗೋ ಕನ್ನಡಲ್ಲೂ ಇದು ಸಿಕಿಲ್ಲ.
“ಇಗೋ ಕನ್ನಡ” ಪುಸ್ತಕದ ಬಗ್ಗೆ ಒಂದು ಮಾತು. ಇಗೋ ಕನ್ನಡ ಒಂದು ಸೊಗಸಾದ ಪುಸ್ತಕ. ಭಾಷೆಗಳ ಬೆಳವಣಿಗೆ ಬಗ್ಗೆ ಬಹಳ passionate ಆಗಿ ಬರೆದಿದ್ದಾರೆ ಪ್ರೊ. ಜಿ.ವೆಂ ಅವರು. ಕೊಳ್ಳಲೇ ಬೇಕಾದ ಪುಸ್ತಕ, ನವಕರ್ನಾಟಕ ದವರು ಸುಂದರವಾಗಿ ಪ್ರಕಾಶಿಸಿದ್ದಾರೆ. ಕೇವಲ ೨೭೫ ರೂಪಾಯಿ. fad ಗೆ ಕಟ್ಟು ಬಿದ್ದು ನಕಲಿ ಪೋಲೋ ಟೀ ಷರ್ಟ್ ಖರೀದಿಸಿ ಸೋಲುವ ಬೆಲೆ.
Comments
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by nagarathnavina…
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by nagarathnavina…
ಉ: ಗೂದೆ ಹಣ್ಣು ಮತ್ತು ನೆರಳಚ್ಚು
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by ಆರ್ ಕೆ ದಿವಾಕರ
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by abdul
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by savithru
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by kannadakanda
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by savithru
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by abdul
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by ಆರ್ ಕೆ ದಿವಾಕರ
ಉ: ಗೂದೆ ಹಣ್ಣು ಮತ್ತು ನೆರಳಚ್ಚು
ಉ: ಗೂದೆ ಹಣ್ಣು ಮತ್ತು ನೆರಳಚ್ಚು
ಉ: ಗೂದೆ ಹಣ್ಣು ಮತ್ತು ನೆರಳಚ್ಚು
In reply to ಉ: ಗೂದೆ ಹಣ್ಣು ಮತ್ತು ನೆರಳಚ್ಚು by gopaljsr
ಉ: ಗೂದೆ ಹಣ್ಣು ಮತ್ತು ನೆರಳಚ್ಚು
ಉ: ಗೂದೆ ಹಣ್ಣು ಮತ್ತು ನೆರಳಚ್ಚು
ಉ: ಗೂದೆ ಹಣ್ಣು ಮತ್ತು ನೆರಳಚ್ಚು