ಗ್ರಹಗಳ ವಕ್ರಗತಿ

ಗ್ರಹಗಳ ವಕ್ರಗತಿ

ಬರಹ

ಸೂರ್ಯ ಚಂದ್ರರನ್ನು ಬಿಟ್ಟು ಉೞಿದ ಗ್ರಹಗಳಿಗೆ ಮಾರ್ಗ(ನೇರ) ಮತ್ತು ವಕ್ರ (ಹಿಂದಾಗಿ ಚಲಿಸುವ) ಗತಿಗಳುಂಟು. ರಾಹು ಕೇತುಗಳಿಗೆ ಯಾವಾಗಲೂ ವಕ್ರಗತಿ. ಅವುಗಳಿಗೆ ಋಜುಗತಿಯಿಲ್ಲ. ಸಾಮಾನ್ಯವಾಗಿ ಬುಧ ಶುಕ್ರರಿಗೆ ಆಗಾಗ್ಗೆ ಮಾರ್ಗಿ (ಮುಂದು ಮುಂದೆ ಹೋಗುವ) ಆಗಾಗ್ಗೆ ವಕ್ರರೂ ಆಗುತ್ತಾರೆ. ಇದಕ್ಕೆ ಕಾರಣ ಬುಧ ಶುಕ್ರರಿಬ್ಬರೂ ಭೂಮಿಯ ಕಕ್ಷೆಯೊಳಗಿನ ಗ್ರಹಗಳು. ಅವರ ಗತಿ ಮುಂದು ಮುಂದೆ ಇದ್ದರೂ ಅವುಗಳ ಕಕ್ಷೆ ಭೂಮಿಯ ಕಕ್ಷೆಗಿಂತ ಸಣ್ಣದಿರುವುದಱಿಂದ ಸೂರ್ಯನ ಸುತ್ತ ಸುತ್ತುವಾಗ ಸಣ್ಣ ಪರದೆಯಂತೆ ಕಾಣುವ ಆಕಾಶಮಾರ್ಗದಲ್ಲಿ ತಮ್ಮ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುವಾಗ ಒಮ್ಮೆ ಮುಂದೆ ಹೋದಂತೆ ಒಮ್ಮೆ ಹಿಂದೆ ಹೋದಂತೆ ಈ ಬುಧ ಶುಕ್ರರು ಭೂಮಿಯಿಂದ ಗೋಚರಿಸುತ್ತಾರೆ. ಇದೇನೋ ಸರಿ. ಆದರೆ ಭೂಮಿಯ ಹೊಱಗಿನ ಕಕ್ಷೆಗಳಲ್ಲಿರುವ ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್‍ಗಳು ಹಿಂದೆ ಹಿಂದೆ ಹೋಗುತ್ತಾರಲ್ಲ ಏಕೆ ಪ್ರಶ್ನೆ ಹುಟ್ಟುತ್ತದೆ. ಈ ಸೌರವ್ಯೂಹದಲ್ಲಿ ಎಲ್ಲಾ ಗ್ರಹಗಳು ನಕ್ಷತ್ರಗಳಿಗೆ ಹೋಲಿಸಿದರೆ ಹತ್ತಿರದಲ್ಲಿದ್ದರೂ ಇವುಗಳ ಕಕ್ಷೆ ಒಂದೇ ಪಾತಳಿಯಲ್ಲಿಲ್ಲ(non coplanar). ಹಾಗಾಗಿ ಕೆಲವು ವೇಳೆ ಭೂಮಿಯಿಂದ ನೋಡಿದಾಗ ಇವುಗಳು ಹಿಂದೆ ಹೋದಹಾಗೆ ಕಾಣುತ್ತದೆ. ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಲು ಪ್ರಯತ್ನಿಸುತ್ತೇನೆ. ನಾವೊಂದು ಬಸ್‍ನಲ್ಲಿ (ಭೂಮಿ) ಚಲಿಸುತ್ತಿದ್ದೇವೆ ಎಂದು ಭಾವಿಸೋಣ. ನಮ್ಮ ಬಲಪಕ್ಕದಲ್ಲಿ ಇನ್ನೊಂದು ಬಸ್ ನಮ್ಮ ದಿಕ್ಕಿನಲ್ಲೇ ಚಲಿಸುತ್ತಿದೆ ಎಂದು ಭಾವಿಸಿ(ಮಂಗಳ, ಗುರು ಇನ್ಯಾವುದೋ ಗ್ರಹ). ಮಧ್ಯ ನಮ್ಮ ದಾರಿಯಲ್ಲಿ ನಾವು ಎಡತಿರುವು ತೆಗೆದುಕೊಂಡಾಗ ನಮ್ಮ ಪಕ್ಕದ ಬಸ್ ಸ್ವಲ್ಪ ಸಮಯದವರೆಗೆ ಹಿಂದುೞಿದಂತೆ ಭಾಸವಾಗುತ್ತದೆ. ಇದೇ ಈ ಗ್ರಹಗಳು ಚಲಿಸುವಾಗ ನಮಗಾಗುವ ಭಾಸ. ಇದು ಗ್ರಹಗಳು ವಕ್ರವಾಗಿ ಚಲಿಸುತ್ತಿವೆಯೆಂಬ ಭ್ರಮೆಯುಂಟು ಮಾಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet