ಚಿಕಾಗೋ ನಗರದಲ್ಲಿ ಆಯೋಜಿಸಲಾಗಿದ್ದ, ೨೦೦೮ ರ ೫ ನೆಯ, ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, " ಮಂಥನ," ಚೆನ್ನಾಗಿ ಮೂಡಿಬಂದಿದೆ !

ಚಿಕಾಗೋ ನಗರದಲ್ಲಿ ಆಯೋಜಿಸಲಾಗಿದ್ದ, ೨೦೦೮ ರ ೫ ನೆಯ, ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, " ಮಂಥನ," ಚೆನ್ನಾಗಿ ಮೂಡಿಬಂದಿದೆ !

ಬರಹ

ಇದೇನಪಾ ವಿಶ್ವಕನ್ನಡ ಸಮ್ಮೇಳನ ನಡೆದದ್ದು, ೨೦೦೮ ರ ಆಗಸ್ಟ್ ೨೯, ೩೦, ೩೧ ರಂದು. ಈಗ್ಯಾಕೆ ಈ ಸ್ಮರಣಸಂಚಿಕೆಯ ಪುರಾಣ, ಅಂತ ಅಂತೀರ, ನನಗ್ ಗೊತ್ತು. ಆದ್ರೆ, ಏನ್ಮಾಡೋದು. ಈ ಸಂಚಿಕೆ, ನನ್ನ ಕೈಗೆ ವಾಪಸ್ ಬಂದಿದ್ದು, ಮೊನ್ನೆ ಮೊನ್ನೆ. ಕೆಲವರು ತುಂಬಾ ಇಷ್ಟಪಟ್ರು. ಯಾಕೆ ಅಂತಾ ವಿಚಾರಿಸಿದಾಗ, ಅಬ್ಬ, ಅಮೆರಿಕದಲ್ಲಿ ಕನ್ನಡನ ಓದೋ ಜನ ಇದಾರಲ್ವ ? ಅಷ್ಟೆ ಅವರು ಮಾಡಿದ ಕಾಮೆಂಟ್ ! ಒಟ್ಟಿನಲ್ಲಿ ಅಮೆರಿಕ ಏನು ಮಾಡಿದರೂ ಅದು ಸುದ್ದಿಯಲ್ಲಿ ಬರದಿದ್ದರೆ ಹೇಗೆ ?

ಹೌದು. ಅವರು ಅಷ್ಟು ಚೆನ್ನಾಗಿ ನಿರ್ವಹಿಸುತ್ತಾರೆ ಸಹಿತ ! ಅದರಲ್ಲಿ ಎರಡು ಮಾತಿಲ್ಲ, ಬಿಡಿ. ಇಷ್ಟಕ್ಕೂ ಅಮೆರಿಕದಲ್ಲಿ ಇರೋರಾದೄ ಯಾರು ? ನಮ್ಮ ವಿಶ್ವವಿದ್ಯಾಲಯಗಳಲ್ಲಿ ಚಿನ್ನದ ಪದಕ, ಮೆರಿಟ್ ಗಳಿಸಿ ಯುವಕ-ಯುವತಿಯರು ಕೊನೆಗೆ ಸೇರುವುದು, ಅಥವಾ ಇಷ್ಟಪಡುವ ತಾಣ ಅದೇ ತಾನೇ ?ಅವರೆಲ್ಲಾ ಅತ್ಯಂತ ಪ್ರತಿಭಾನ್ವಿತರು. ಕನ್ನಡಭಾಷೆಯಲ್ಲಿ ಪ್ರಾವೀಣ್ಯಪಡೆದ ಯಶಸ್ವೀ ಕನ್ನಡಿಗರು ! ಇತ್ತೀಚೆಗಷ್ಟೇ ಪ್ರಕಟವಾದ, " ಕರ್ಣಾಟಕ ಭಾಗವತ " ವೇ ಅದಕ್ಕೆ ಒಂದು ಉದಾಹರಣೆ !

ಸಮಗ್ರ ಭಾಗವತದ, ಸಂಶೋಧಿತ, ಹಾಗೂ , ಪಂಡಿತರಿಂದ ಪರಿಶ್ಕೃತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪಾದಿಸಿದ, ಎರಡು ಸಂಪುಟಗಳಲ್ಲಿ ಪ್ರಕಟಿಸಲ್ಪಟ್ಟಿರುವ ಉದ್ಗ್ರಂಥ,-" ಕರ್ಣಾಟಕ ಭಾಗವತ " ! ಇದು ಈ ಶತಮಾನದ ಅತ್ಯಂತ ಉಚ್ಚಮಟ್ಟದ ಗ್ರಂಥ ಸಂಪಾದನೆಗಳಲ್ಲೊಂದೆಂದು, ವಿಶ್ವದ ಕನ್ನಡ ಸಾಹಿತ್ಯದ ಪಂಡಿತೋತ್ತಮರೆಲ್ಲಾ ಶ್ಲಾಘಿಸಿದ್ದಾರೆ ! ಈ ಗ್ರಂಥದ ಅಂತಿಮ ’ ವಿಶ್ವಾರ್ಪಣಾ ಸಮಾರಂಭ, ” ಅಕ್ಕಾ ವಿಶ್ವಕನ್ನಡ ಸಮ್ಮೇಳನದಲ್ಲಿ ಡಾ. ಚಂದ್ರಶೇಖರ ಕಂಬಾರರ ಹಸ್ತದಿಂದ ಜರುಗಿತು. ವೇದಿಕೆಯಲ್ಲಿ ಡಾ. ಎಸ್. ಎಲ್. ಭೈರಪ್ಪ, ಜಯಂತ್ ಕಾಯ್ಕಿಣಿ, ಮುಂತಾದ ಗಣ್ಯ, ಕವಿಗಳ ಸಮ್ಮುಖದಲ್ಲಿ ನೆರವೇರಿದ ಕಾರ್ಯಕ್ರಮವನ್ನು ಸುಮಾರು ೪,೦೦೦ ಅಮೆರಿಕನ್ನಡದ ಬಾಂಧವರು ಕಂಡುಕೇಳಿ ಆನಂದಿಸಿದರು !

ಭಾರತದಲ್ಲಿ ಮೈಸೂರು, ಬೆಂಗಳೂರು, ಧಾರವಾಡ, ಹಾಗೂ ಶಿವಮೊಗ್ಗದಲ್ಲಿ ಇದೇ ತರಹದ ’ ವಿಶ್ವಾರ್ಪಣಾ ಸಮಾರಂಭ, ” ಗಳು ಜರುಗಿದ್ದು, ವಿದ್ವಜ್ಜನರನ್ನು ಆಕರ್ಷಿಸಿದವು. ಅಮೆರಿಕದಲ್ಲಿ ಮೊಟ್ಟಮೊದಲನೆಯ ವಿಶ್ವಾರ್ಪಣಾ ಸಮಾರಂಬವನ್ನು ಹಮ್ಮಿಕೊಂಡು ಡಾ. ಚಂದ್ರರವರಿಗೆ ಎಲ್ಲಾ ವಿಧದಲ್ಲಿ ನೆರವಾದದ್ದು- ಕನ್ನಡದಲ್ಲಿ ಮಂಚೂಣಿಯಲ್ಲಿರುವ, " ಹೂಸ್ಟನ್ ಕನ್ನಡ ವೃಂದ," ! ಯುಗಾದಿಯ ಶುಭದಿನದಂದು ಈ ಕಾರ್ಯ, ನೆರವೇರಿತು. ಕನ್ನಡ ಸಾಹಿತ್ಯ ಪ್ರಿಯರು ಹೆಚ್ಚುಸಂಖ್ಯೆಯಲ್ಲಿ ಹಾಜರಿದ್ದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ಮಹಾಕಾವ್ಯದ ಕರ್ತೃ, ಅಮೆರಿಕದವರೇ ಆದ, ಬೌತಶಾಸ್ತ್ರದಲ್ಲಿ ಹೆಸರಾಂತ, ಪ್ರಾಧ್ಯಾಪಕ, ಡಾ. ಎಚ್. ಆರ್. ಚಂದ್ರಶೇಖರ್ ರವರು, ಅಪ್ಪಟ ಕನ್ನಡಿಗರು ! ಅವರನ್ನು ಅವರ ಆಪ್ತಗೆಳೆಯರು, ’ಚಂದ್ರಾ” ಎಂದು ಸಂಭೋದಿಸುತ್ತಾರೆ. ಈಗ ಉನ್ನತವಲಯಗಳಲ್ಲಿ ಬುದ್ದಿಜೀವಿಗಳು, ಸಂಶೋಧಕರುಗಳು ವಿಶ್ವದಾದ್ಯಂತ ’ಕರ್ಣಾಟಕ ಭಾಗವತ,’ ಗ್ರಂಥದ ಬಗ್ಗೆ ಚರ್ಚಿಸುತ್ತಿದ್ದಾರೆ !

ಎಲ್ಲಾ ಸರಿ ಸಾರ್, ನಮಗೆ ನೀವ್ ಹೇಳ್ತಾ ಇರೋ ’ಕರ್ಣಾಟಕ ಭಾಗವತ ’ ದ ಬಗ್ಗೆ ಏನೂ ಮಾಹಿತಿನೇ ಅದ್ರಲ್ಲಿ ಸಿಗ್ತಿಲ್ವಲ್ಲ ? ಆಂತ ಹುಬ್ಬು ಮೇಲೆ-ಹಾರಿಸ್ತೀರೋ ? ನಿಜ. ವಿಶೇಷ ಲೇಖನ ಕೊಟ್ಟಿದ್ರು. ಆದ್ರೆ. ಏಡಿಟೋರಿಯಲ್ ಕಮಿಟಿಯವರು, ಅದನ್ನ ನೋಡ್ದೆ, ಕಣ್ಮುಚ್ಕೊಂಡ್ ಪ್ರಕಟಣೆ ಮಾಡದಿದ್ರೆ, ಏನ್ಮಾಡ್ಬೇಕ್ ಹೇಳಿ ?

ಅರೆ, ಅಮೆರಿಕದಲ್ಲಿ ನಮ್ಮ ಜೊತೇನಲ್ಲೇ  ಇಂತಾ ಮಹಾಪ್ರತಿಭೆ ಇದೆ. ಅದು ನಮಗೆ ಒಳ್ಳೇದು. ಕರ್ನಾಟಕದ ಹೊರಗೆ, ನಮ್ಮ ಅಮೆರಿಕದಲ್ಲೂ ಅಂಥಾ ಮೇಧಾವಿಗಳಿದಾರೆ, ಇಲ್ಲಿ ನೋಡಿ ! ಅಂತ ಹೇಳ್ಕೊಂಡು ಮೆರೆಯೋ ಭಾಗ್ಯ ಎಲ್ರಿಗೂ ಎಲ್ಲಿ ಸಿಗುತ್ತೆ ? ಅದಕ್ಕೇ ಕಣ್ತೆರಿಬೇಕು. ಎಲ್ಲ ಅದಾಗಿಯೇ ನಮಗೆ ಗೋಚರಿಸಲ್ಲ. ಒಟ್ಟಿನಲ್ಲಿ ಯವುದು ಒಳ್ಳೇದು ಯಾವುದು ಶ್ರೇಷ್ಠ ಅನ್ನೋದನ್ನ ನಿರ್ಧರಿಸಕ್ಕು ಸ್ವಲ್ಪ ತಾಳ್ಮೆ, ಸಂಯಮ, ಕನ್ನಡದ ಬಗ್ಗೆ ನಿಷ್ಥೆ ಬೇಕಲ್ಲವೇ ?!

ಬರೀ ಪುಸ್ತಕ ಪ್ರಕಟಣೆ ಯಾರಿಗೆ ಬರಲ್ಲ, ಈಗಿನಕಾಲದಲ್ಲಿ ? ಅದೂ ಅಮೆರಿಕದಂತ ಶ್ರೀಮಂತದೇಶದಲ್ಲಿ ನಿಜವಾಗ್ಲೂ ಹೇಳ್ತೀನಿ ; ಇವೆಲ್ಲಾ ಅತಿ ಸುಲಭ ! ಆದರೆ ಇ ಪುಸ್ತಕ ಹಾಗಲ್ಲ. ೧೫ ವರ್ಶಗಳ  ತಪಸ್ಸಿನ ನಂತರ ಬಂದಿರೋದು.  ಸ್ವಲ್ಪ ಮುಂದಾಲೋಚನೆ, ಇರಬೇಕಲ್ಲವಾ ?

ಏನಂತೀರಾ ? ಹೋಗ್ಲೀ ಬಿಡಿಸಾರ್, ಇವೆಲ್ಲಾ ಆಗತ್ವೆ ! ( ಅಥವಾ ಆಗ್ತಾನೇ ಇರತ್ವಾ ??? ) ಚಿತ್ರ. ವೆಂ.