ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ’ !

ಚಿಕಾಗೋ ನಗರದ, ' ಸ್ಯುಯೆಜ್ ಕಾಲುವೆ ’ !

ಬರಹ

'ಸಿಯರ್ಸ್ ಟವರ್,’ ನಿಂದ ಕೆಳಗೆ ಕಾಣಿಸುತ್ತಿರುವುದು, ಚಿಕಾಗೋ ನಗರದ ಊರಿನ ಮಧ್ಯೆಹರಿಯುತ್ತಿರುವ ’ಸ್ಯುಯೆಜ್ ಕಾಲುವೆ.’ ಇದು ಅಷ್ಟೇನೂ ದುರ್ನಾತ ಹೊಡೆಯುವುದಿಲ್ಲವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ನಾತವಂತೂ ಇದ್ದೇ ಇರುತ್ತೆ. ವಿಧಿಯಿಲ್ಲ. ಊರೆಂದಮೇಲೆ ಇವೆಲ್ಲಾ ಇರಲೇಬೇಕಲ್ಲವೇ ! ವಿಶ್ವವಿಖ್ಯಾತ, 'ಸಿಯರ್ಸ್ ಟವರ್,' ಮೇಲಿಂದ ನೋಡಿದಾಗ, ಸುಮಾರು ೪೦-೫೦ ಮೈಲಿಗಳದೂರದ ಪ್ರದೇಶಗಳು ಕಣ್ಣಿಗೆ ಬೀಳುತ್ತವೆ. ಚಿಕಾಗೋಹತ್ತಿರ, ’ಮಿಚಿಗನ್ ಸರೋವರ,’ ವಿರುವುದು, ಒಂದು ವರದಾನದಂತೆ. ಸರಕುಸಾಮಗ್ರಿಗಳನ್ನು ಸಾಗಿಸಲು ಇದು ಅತಿ ಸೋವಿಯಾದ ಪ್ರಕ್ರಿಯೆ.

ಮಿಚಿಗನ್ ಸರೋವರದ ಬದಿಯಲ್ಲೇ, ’ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯ,’ ವಿದೆ. ’ಚಿಕಾಗೋನದಿ” , ಊರಿನ ಹತ್ತಿರದಲ್ಲೇ ಹರಿಯುತ್ತದೆ. ಆದರೆ, ಚಿಕಾಗೋನಗರದ ಯಂತ್ರೀಕರಣದ ತ್ಯಾಜ್ಯವಸ್ತುಗಳು ಅದರ ನೀರಿಗೆ ಸೇರಿ, ಮಾಲಿನ್ಯತೆಯ ಮಟ್ಟ, ಮಿತಿಮೀರಿದೆ. ಅದರಿಂದ ಅದರ ಹರಿಯುವ ದಿಕ್ಕನ್ನು ಮಿಚಿಗನ್ ಸರೋವರದ ಕಡೆ, ಬಿಟ್ಟು ದಕ್ಶಿಣಕ್ಕೆ ಹೋಗುವಂತೆ, ಅಲ್ಲಿನ ಹಿರಿಯವ್ಯಕ್ತಿಗಳು ತಾಂತ್ರಿಕವಾಗಿ ಏರ್ಪಾಡುಮಾಡಿ, ಜಯಶೀಲರಾಗಿದ್ದಾರೆ. ವಿಜ್ಞಾನಿಗಳು ಹಾಗೂ ತಾಂತ್ರಜ್ಞರಿಗೆ ಇದೊಂದು ದೊಡ್ಡಸವಾಲಾಗಿತ್ತು.

’೫ ನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನ,’ ಈ ನಗರದಲ್ಲೇ ಅದ್ಧೂರಿಯಿಂದ ೨೦೦೮ ರ ಆಗಸ್ಟ್ ೨೯, ೩೦, ೩೧ ರಂದು ಜರುಗಿತು. ಆ ದೃಷ್ಟಿಯಿಂದ ಚಿಕಾಗೋನಗರ ನಮಗೆ ಇನ್ನೂ ಹತ್ತಿರವಾಯಿತು. ನಮಗೆ, ಸ್ವಾಮೀ ವಿವೇಕಾನಂದರು, ೧೮೯೩ ರಲ್ಲಿ ವಿಶ್ವಮತಗಳ ಸಭೆಗಳು ಆಯೋಜಿಸಿ ನಡೆಸಿಕೊಟ್ಟ ಒಂದು ಸಮ್ಮೆಳನದ ಸ್ಥಳ,’ ವನ್ನು ಕಣ್ಣಾರೆ ಕಾಣುವ ತವಕವಿತ್ತು. ಆ ಸುಂದರದಿನದಂದು ಅವರು ಪ್ರಚಂಡ ಜನಸ್ಥೋಮವನ್ನು ಉದ್ದೇಶಿಸಿ ಮಾತಾಡಿದ್ದರು. ಪ್ರಾರಂಭದಲ್ಲೇ, ಅವರು ಎದ್ದುನಿಂತು, " ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕ, ಎಂದಾಗ, ಅಲ್ಲಿನ ಜನರ ಮೈಮನಗಳಲ್ಲಿ ವಿದ್ಯುತ್ ಸಂಚಾರವಾಗಿತ್ತು. ತೇಜಃಪುಂಜವಾದ ಕಣ್ಣುಗಳು, ವಿಶಾಲ ಹಣೆ, ಅಗಲವಾದ ವಕ್ಷಸ್ಥಳ, ಅಜಾನುಬಾಹು, ಮುಖದಲ್ಲಿ ಮಂದಹಾಸ, ಮಾತಿನಲ್ಲಿ ಧೃಡತೆ, ಹಾಗೂ ಮನಸ್ಸನ್ನು ಮುಟ್ಟುವ ವಾಕ್ಝರಿ, ಇವೆಲ್ಲಾ ಅಮೆರಿಕನ್ ಪ್ರೇಕ್ಷಕವೃಂದವನ್ನು ದಿಗ್ಭ್ರಾಂತರನ್ನಾಗಿಯೂ ಮೂಕರನ್ನಾಗಿಯೂ ಮಾಡಿದ್ದವು. ಎಲ್ಲರೂ ಎಣಿಸಿದಂತೆ, ಭಾರತದಿಂದ ಬಂದ ಕಪ್ಪು ಮನುಷ್ಯ, ಎಲ್ಲರ ಕರುಣೆಗೆ ಪಾತ್ರನಾಗುವ ಅಪಾಯದಿಂದ ಮುಂದೆಹೋಗಿ, ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ, ನಮ್ಮದೇಶದ ವೇದಾಂತ, ಹಾಗೂ ತತ್ವಜ್ಞಾನದ ಪಾಠಗಳನ್ನು ಸಮಯೋಚಿತವಾಗಿಯೂ, ಅತ್ಯಂತ ಪ್ರಭಾವಶಾಲಿಯಾಗಿಯೂ, ತಿಳಿಯಹೇಳಿದ ವಿವೇಕಾನಂದರು, ಒಂದು ಇತಿಹಾಸವನ್ನೇ ಸೃಷ್ಟಿಸಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಅವರ ವ್ಯಕ್ತಿತ್ವ ಅಮೆರಿಕದ ಜನರನ್ನು ಮರುಳುಮಾಡಿತ್ತು ! ನನಗೆ ಆ ಸ್ಥಳದಲ್ಲಿ ನಿಂತು, ಆ ದಿನದ ಸ್ವಾಮೀಜಿಯವರ ಭಾಷಣದ ಧ್ವನಿ-ಸುರಳಿಯನ್ನು ಆಲಿಸುವ ವ್ಯಾಮೋಹವಿತ್ತು !

(ಭಾಷಣವನ್ನು, " ಇಂಟರ್ನೆಟ್ ಸೌಜನ್ಯ, " ದಿಂದ ಕೇಳಿದ್ದೇನೆ)

ಆದರೆ ದುರಾದೃಶ್ಟವಶಾತ್, ಆ ತಾಣವನ್ನು ನೋಡಲಾಗಲೇ ಇಲ್ಲ. ಹೀಗೆ, ಕೆಲವು ನಮಗೆ ತಿಳಿಯದಂತೆ ನೆರವೇರುತ್ತವೆ. ಕೆಲವಂತೂ ನಾವು ಸನ್ನದ್ಧರಿದ್ದಾಗ್ಯೂ, ಅದಕ್ಕೆ ತಕ್ಕ ಏರ್ಪಾಟುಮಾಡಿಕೊಂಡಿದ್ದಾಗ್ಯೂ, ಆಗುವುದಿಲ್ಲ. ಇದೊಂದು ವಿಧಿನಿಯಮವೇ ?? !!