ಜಂಬುನೇರಳೆ ಹಣ್ಣಿನ ಜಾಮ್
ಬೇಕಿರುವ ಸಾಮಗ್ರಿ
ಜಂಬುನೇರಳೆ ಹಣ್ಣು - 15, ಶುಂಠಿ - ಒಂದು ಇಂಚಿನಷ್ಟು, ಸಕ್ಕರೆ - 3/4 ಕಪ್, ಉಪ್ಪು ಚಿಟಿಕೆ
ತಯಾರಿಸುವ ವಿಧಾನ
ಹಣ್ಣುಗಳನ್ನು ಬೀಜ ಹಾಗೂ ಗಟ್ಟಿಯಾದ ಭಾಗವನ್ನು ತೆಗೆದು ಶುಂಠಿ ತುಂಡಿನೊಂದಿಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಾಣಲಿಯಲ್ಲಿ ಹಾಕಿ ಮಗುಚ ಬೇಕು. ಬೆಂದ ನಂತರ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಹಾಕಿ ಜಾಮ್ ನ ಹದ ಬರುವವರೆಗೆ ಮಗುಚುವುದು.
-ಗೀತಾ ಕೋಟೆ, ಅಂಚೆ ಕಳಂಜ, ಸುಳ್ಯ