ಜನಾರ್ದನ್ ದುರ್ಗಾ ಅವರ ಹನಿ-ಫನ್ನಿಗಳು

ಜನಾರ್ದನ್ ದುರ್ಗಾ ಅವರ ಹನಿ-ಫನ್ನಿಗಳು

ಕವನ

*ಅರ್ಪಣೆ!* 

ಎಲ್ಲೋ ಹಾರುತಿಹ ಹಕ್ಕಿ

ನನ್ನೊಳಗೆ ಹೊಕ್ಕಿ..!

ಬಡಿದೇಳಿಸುತಿದೆ

ಉತ್ಸಾಹ ಉಕ್ಕಿ.!!

***

 *ಕವಿರಾಜ ಮಾರ್ಗ!?* 

ಆಸ್ತಾನದಲ್ಲಿದ್ದ

ಕವಿಗಳಂದು

ಹೊಗಳುತ್ತಿದ್ದರು

ರಾಜನನ್ನ...

ಭೀಮ ಕರ್ಣ ಅರ್ಜುನ.!

ಇಂದೂ ಹಾಗೆಯೇ

ಕವಿಗಳೊಂದಿಗೆ

ಹೊಗಳುವುದಕ್ಕೆಂದೆ

ಇರಬೇಕು...

ಒಂದಷ್ಟು ಜನ!!

***

*ಹೊ-ಗಳಿಕೆ!* 

ತುಸು ಹೊಗಳುತಲಿ

ಉಬ್ಬಿಸಿ ಬಿಡುವರು

ಸುಲಭದಲಿ ಹೆಣ್ಣ.!

ಆಕೆಯಿಂದಲೆ ಮತ್ತೆ

ಕದ್ದು ಒಯ್ಯುವರು

ಪಡೆದು ಹೊನ್ನ.!!

***

*ಪ್ರಶ್ನೆ...*

ಶಾಲೆ ಆರಂಭದ

ದಿನವಂದು 

ಜೂನ್ ಒಂದು!

ಹುಟ್ಟು ದಿನ

ಅರಿವಿಲ್ಲದವರಿಗೆ

ಹುಟ್ಟುಹಬ್ಬವಂದು!

ವಿಶ್ವ ಹುಟ್ಟುಹಬ್ಬ

ದಿನವೆಂದೇಕೆ

ಆಚರಿಸಬಾರದು ಅಂದು?!

***

 *ಲೆಕ್ಕಾಚಾರ* 

ಲೆಕ್ಕಾಚಾರದಿ

ಹಿಂದುಳಿದಾಗಲೇ

ಟ್ರಂಪ್ ಘೋಷಿಸಿದ್ದಾರಂತೆ

ತಾನು ವಿಜೇತ.!!

ಮೊದಲೇ ಅನಿಸಿರಬಹುದೆ

ಈ ಬಾರಿ ತಾನೇ ಗೋತ..?!

***

 *ಬಿಡುವುದಿಲ್ಲ!* 

ನನಗೂ

ಬರೆಯಲು

ಇಷ್ಟ

ಹನಿಗವನ!

ಆದರೆ

ಬಿಡಬೇಕಲ್ಲ

ನನ್ನ 'ಹನಿ'

'ಕವನ'..!!

***

 *ಐ(ಫೀಲ್)ಎಲ್!* 

ಮಲ್ಯನಿಗೆ

ತೀರಿಸಲಾಗಿಲ್ಲ

ಇನ್ನೂ ತನ್ನ ಸಾಲ!

ಬೆಂಗಳೂರು

ಗೆಲ್ಲುವುದಕ್ಕೂ

ಆಗಿಲ್ಲ ಕಪ್...

ಇನ್ನೂ ಒಂದು ಸಲ!!

***

 *ಹೊಡಿಬಡಿ* 

ಕಡೆಯವರೆಗೂ

ನಿಂತು ಆಡಿದ್ದು

ಏಕಮಾತ್ರ ಎಬಿಡಿ!

ಉಳಿದವರದ್ದೆಲ್ಲ

ಬರೆ ಗಡಿಬಿಡಿ.!!

***

 *ನಿರೀಕ್ಷಣೆ* 

ಹವಾಲ ದಂಧೆಯಲ್ಲಿ

ಬಂಧಿಯಾಗಿದ್ದಳು ಅವಳಲ್ಲಿ!

ಕಾಯುತ್ತಿದ್ದಾಳೆ...

ನಿರೀಕ್ಷಣಾ ಜಾಮೀನಿನ

ನಿರೀಕ್ಷೆಯಲ್ಲಿ.!!

***

 *ಲೈ(ನಾಲಾಯ)ಕು* 

 ಇಂದೆಲ್ಲ

 ಕವನದ 

 ಆಯ್ಕೆ... 

 ಬಂದಾಗಲಷ್ಟೆ 

 ಅತೀ ಹೆಚ್ಚು ಲೈಕು..! 

 ಲೈಕುಗಳಿಲ್ಲದಿರೆ 

 ಅದೇ ಕವನ

 ಬಹುಮಾನಕ್ಕು 

 ನಾಲಾಯಕ್ಕು..!! 

-ಜನಾರ್ದನ ದುರ್ಗ

 

ಚಿತ್ರ್