ಜೀವನಕ್ಕೆ ಉಪಯುಕ್ತ ಹನಿಗಳು...

*ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ. ಬಾರದಿದ್ದರೆ ಎಲ್ಲವನ್ನು ನೆನಪಿಸುತ್ತದೆ.
*ಜೀವನದಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ. ನಿಧಾನವಾಗಿ ಬರಲಿ ಅಥವಾ ರಭಸವಾಗಿ ಬರಲಿ, ಆತ್ಮವಿಶ್ವಾಸವೆಂಬ ಕೊಡೆ ಇರಬೇಕು.
*ದೇವರಲ್ಲಿ ಕೇಳುವುದೊಂದೆ ನಮಗೆ, ಅಹಂಕಾರ ಕೊಡಬೇಡ. ಬೇರೆಯವರಿಗೆ ಸಹಾಯ ಮಾಡಲು ಆಗದಿದ್ದರೂ ನಮ್ಮಿಂದ ಕೆಡುಕು ಮಾಡಿಸಬೇಡ.
*ಪ್ರೀತಿಸುವವರು ಹೇಗಿರಬೇಕು ಎಂದರೆ ಇದ್ದರೆ ಕನ್ನಡಿ ತರಹ ಇರಬೇಕು. ಇಲ್ಲದಿದ್ದರೆ ನೆರಳಿನ ತರಹ ಇರಬೇಕು. ಏಕೆಂದರೆ ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ. ನೆರಳು ಯಾವತ್ತು ನಮ್ಮನ್ನು ಬಿಟ್ಟು ಹೋಗುವುದಿಲ್ಲ.
*ಮಾತಿಗೆ ಬೆಲೆ ಇಲ್ಲ ಎಂದಾಗ ಮೌನವಾಗಿರಬೇಕು. ಮೌನಕ್ಕೂ ಬೆಲೆ ಇಲ್ಲ ಎಂದಾಗ ಆ ಜಾಗದಿಂದ ದೂರ ಹೋಗಿಬಿಡಬೇಕು.
*ನಮ್ಮ ಹಿಂದೆ ಮಾತಾಡುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಅವರಿಗೆ ಮುಂದೆ ಮಾತನಾಡುವ ಯೋಗ್ಯತೆ ಇರುವುದಿಲ್ಲ.
*ಮನೆ ಎಷ್ಟು ದೊಡ್ಡದಿದೆ ಎನ್ನುವುದಕ್ಕಿಂತ, ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೇವೆ ಎನ್ನುವುದೇ ಮುಖ್ಯ .
*ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ ಕೆಟ್ಟವರಲ್ಲೂ ಒಳ್ಳೆಯತನವನ್ನು ಕಾಣಬಹುದು. ಆದರೆ ಕೆಟ್ಟ ಮನಸ್ಸಿನಿಂದ ಯೋಚಿಸಿದರೆ ಒಳ್ಳೆಯವರಲ್ಲೂ ಕೆಟ್ಟದ್ದನ್ನೇ ಕಾಣಬಹುದು.
*ಮನಸ್ಸಿನಲ್ಲಿ ನಂಬಿಕೆ ಗಟ್ಟಿ ಮಾಡಿಕೊಳ್ಳಿ. ಮನಸ್ತಾಪಗಳು ತಾನಾಗಿ ದೂರವಾಗುತ್ತವೆ.
*ಗರ್ವದಿಂದ ಇರಬೇಡ ದೇವರ ದಯೆಯನ್ನು ಕಳೆದುಕೊಳ್ಳುವಿ. ಈರ್ಷೆಯಿಂದ ಇರಬೇಡ ಸ್ನೇಹಿತರನ್ನು ಕಳೆದುಕೊಳ್ಳುವಿ. ಕೋಪದಿಂದ ಇರಬೇಡ ನಿನ್ನನ್ನು ನೀನೇ ಕಳೆದುಕೊಳ್ಳುವಿ.
*ನಮ್ಮಿಂದ ದೂರ ಇರಲು ಬಯಸುವವರು ನಮ್ಮವರು ಅಲ್ಲ. ನಮ್ಮ ಜೊತೆಗೇ ಇದ್ದು ನಮ್ಮವರಂತೆ ನಟಿಸುವವರು ನಮ್ಮವರು ಅಲ್ಲ ಎಲ್ಲೇ ಇದ್ದರೂ ಯಾವತ್ತೂ ನಮ್ಮ ಬಗ್ಗೆ ಯೋಚನೆ ಮಾಡುವರು ನಿಜವಾಗಿ ನಮ್ಮವರು.
*ಕೋಪದಲ್ಲಿ ಒಂದು ಕ್ಷಣ ಮೌನ ವಹಿಸಿದರೆ ಸಾಕು, ಅದು ದುಃಖದ ನೂರು ದಿನಗಳನ್ನು ಪಾರು ಮಾಡುತ್ತದೆ.
*ಜಾತಕ, ರೇಖೆ ಇತ್ಯಾದಿಗಳನ್ನು ನಂಬಿ ಕೂರುವುದಲ್ಲ. ಹಸ್ತವೇ ಇಲ್ಲದವನಿಗೂ ಭವಿಷ್ಯವಿದೆ. ಶ್ರಮ, ಶ್ರದ್ಧೆಗಳಲ್ಲಿ ವಿಶ್ವಾಸವಿರಲಿ.
*ದೃಷ್ಟಿ ಆಕಾಶದಲ್ಲಿರುವ ನಕ್ಷತ್ರಗಳತ್ತ ಇರುವಾಗಲೂ ಕಾಲು ಮಾತ್ರ ನೆಲದಲ್ಲಿರಲಿ. ನಮ್ಮ ಸ್ಥಾನಮಾನಗಳು ಮೂಲವನ್ನು ಮರೆಸುವಂತಿರಬಾರದು.
*ಹೃದಯ ಹತ್ತಿರವಿದ್ದಾಗ ಜೋಪಾನ ಮಾಡಿಕೊಳ್ಳಿ. ಮನಸ್ಸು ಹತ್ತಿರವಿದ್ದಾಗ ಅರ್ಥ ಮಾಡಿಕೊಳ್ಳಿ. ಏಕೆಂದರೆ ಬಿಟ್ಟು ಹೋದ ಹೃದಯ, ದೂರವಾದ ಮನಸ್ಸು ಬೇಕು ಎಂದಾಗ ಸಿಗುವುದು ತುಂಬಾ ಕಷ್ಟ.
*ಶರೀರ ಸುಂದರವಾಗಿರಲಿ ಇಲ್ಲದಿರಲಿ ನಾವಾಡುವ ಮಾತುಗಳು ಸುಂದರವಾಗಿಟ್ಟುಕೊಳ್ಳಬೇಕು. ಏಕೆಂದರೆ ಜನರು ಮುಖವನ್ನು ಮರೆಯುತ್ತಾರೆ, ನಾವಾಡುವ ಮಾತುಗಳು ಎಂದಿಗೂ ಮರೆಯುವುದಿಲ್ಲ.
-(ಸಂಗ್ರಹ) ದೇವಾನಂದ ಭಟ್, ಬೆಳುವಾಯಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ