ಜೀವನಕ್ಕೊಂದರ್ಥವಿಲ್ಲ

ಜೀವನಕ್ಕೊಂದರ್ಥವಿಲ್ಲ

Comments

ಬರಹ

ಜೀವನದಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚು. ಮಣ್ಜುಗೆಡ್ಡೆ ನೀರಿನ ಮೇಲೆ ಎಷ್ಟು ಕಾಣುತ್ತದೆಯೋ ಅಷ್ಟು ಮಾತ್ರವೇ ಸುಖ. ನೀರಿನಲ್ಲಿ ಮುೞುಗಿದ ಮಂಜುಗೆಡ್ಡೆಯಷ್ಟು ದುಃಖವೇ ಹೆಚ್ಚು. ಈ ಸಾರವಿಲ್ಲದ ಸಂಸಾರವಿದು. ಬೆರಳೆಣಿಕೆಯಷ್ಟೇ ಜನರು ತಮ್ಮ ಜೀವಮಾನದಲ್ಲಿ ಸುಲಭವಾಗಿ ಸುಖವಾಗಿ ಜೀವಿಸುತ್ತಾರೆ. ಬಹಳಷ್ಟು ಜನಗಳಿಗೆ ಸಾವು ನೋವು ರೋಗರುಜಿನಗಳು ಬಾಧಿಸುತ್ತವೆ. ಹಾಗೆಯೇ ಸುಖವಾಗಿ ಭೋಗಲಾಲಸೆಯಲ್ಲಿ ಬೆಳೆದ ಜನಗಳು ತಮ್ಮ ಅಂತಿಮ ದಿನಗಳಲ್ಲಿ ರೋಗಕ್ಕೆ ಗುಱಿಯಾಗಿ ದುಃಖಿಸುವುದನ್ನು ಕಾಣಬಹುದು. ಅರಿಷಡ್ವರ್ಗಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ತು ಮತ್ಸರಗಳಿಂದಲೂ ಜನ ದುಃಖಕ್ಕೆ ಗುಱಿಯಾಗುತ್ತಾರೆ. ಇವೆಲ್ಲವನ್ನು ಮೆಟ್ಟಿ ನಿಂತು ಸಂತೋಷಚಿತ್ತನಾಗಿ ಆಶಾವಾದಿಯಾಗಿ ಬದುಕುವುದೇ ಒಂದು ಸಾಧನೆ. ಒಟ್ಟಿನಲ್ಲಿ ನಿರರ್ಥಕ, ನಿಸ್ಸಾರ ಸಂಸಾರವೀ ಜೀವನ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet