ಜೈ ಭುವನೇಶ್ವರಿ ಮಾತೆ

ಜೈ ಭುವನೇಶ್ವರಿ ಮಾತೆ

ಕವನ

ಕನ್ನಡ ಎಂದರೆ ಹೊನ್ನಿನ ನುಡಿಯು

ಮಣ್ಣಿನ ಕಣಕಣವು/

ಅನ್ನದ ಋಣವನು ತೀರಿಸು ಮಗುವೆ

ಚಿನ್ನದ ಗುಣವದುವು//

 

ಕನ್ನಡ ನೆಲಜಲ ಮರೆಯದಿರು

ಮುನ್ನುಡಿ ಬರೆಯುತಲಿ/

ಕನ್ನಡ ಗಾಳಿಯ ಉಸಿರಾಡುತಲಿ

ನಿನ್ನೆಯ ನೆನಪಿರಲಿ//

 

ಅಆಇಈ ಅಕ್ಷರ ಮಾಲೆ

ಹೊಳೆಯುವ ಮುತ್ತುಮಣಿ/

ಏರಿಸಿ ಹಾರಿಸಿ ಕನ್ನಡ ಧ್ವಜವನು

ಗೌರವ ಸಲಿಸುತಲಿ//

 

ನಾಡಗೀತೆಯ ಹಾಡುತ ಮುದದಿ

ತಾಯಿಗೆ ವಂದನೆ ಮಾಡುತಲಿ/

ಭೇದಭಾವ ನಮ್ಮಲಿ ಬೇಡ

ಮನುಜರೆಲ್ಲ ಒಂದೇ//

 

ಕನ್ನಡ ಭಾಷೆ ತಾಯಿ ಭಾಷೆ

ಕೂಗಿ ಹೇಳುತಲಿ/

ಅನ್ಯ ಭಾಷೆ ದ್ವೇಷಿಸ ಬೇಡ

ವ್ಯವಹಾರಕೆ ಇರಲಿ//

 

ಕರ್ನಾಟಕ ನಾಮಕರಣದ ದಿನವು

ಭಾಷಾ ವೈಭವವು/

ಸಂಭ್ರಮ ಸಡಗರ  ಸಂಸ್ಕೃತಿ ಮೆರುಗಲಿ 

ಬೆರೆಯುತ ನಲಿಯುತಲಿ//

 

ಅಮ್ಮನ ಮಮತೆಯ ಮಡಿಲಿನ ಕುಡಿಗಳು

ಅರಳುವ ಪುಷ್ಪಗಳು/

ಜೇನಿನ ಸಿಹಿಯ ನಗುವನು ಬೆರೆಸಿ

ಹೇಳುತ ಜೈ ಭುವನೇಶ್ವರಿ ಮಾತೆ//

-ರತ್ನಾ ಕೆ ಭಟ್,ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್