ಜೊತೆಗೇ ಬಂದ ಮುದುಕ.

ಜೊತೆಗೇ ಬಂದ ಮುದುಕ.

ಬರಹ

ಜೊತೆಗೇ ಬಂದ ಮುದುಕ.
(ಶ್ರೀ.ಎಚ್.ಎಸ್.ವಿ ರವರ,'ಎಷ್ಟೊಂದು ಮುಗಿಲು,'ಕವನ ಸಂಗ್ರಹ ದಿಂದ.)

'ಉದ್ಯಾನ,* ದಲ್ಲಿ ಬರುವಾಗ ಬೊಂಬಾಯಿಂದ
ನಮ್ಮ ಕಂಪಾರ್ಟ್ ಮೆಂಟಿಗೊಮ್ಮೆಗೇ ನುಗ್ಗಿದರು
ಹತ್ತಾರು ಮಂದಿ. ಇದ್ದದ್ದು ಮೂರೇ ಬರ್ತು.
ನಮಗೆ ತ್ರುಣವೂ ತಿಳಿಯದಿರುವ ಭಾಷೆಯ ಬಳಸಿ
ಬೊಬ್ಬೆಯೋ ಬೊಬ್ಬೆ ! ಕಾದಿರಿಸಿರುವ ಬರ್ತಲ್ಲಿ
ಯಾಕೋ ಸುಮ್ಮಗೆ ಕೂತ ವ್ಯಕ್ತಿಯೊಂದಿಗೆ ಏರು
ಗಂಟಲಿನ ಕೂಗಟ. ಇನ್ನೇನು ಟ್ರೇನು ಹೊರ-
ಟಿತು.ಈಗ ಎಲ್ಲರೂ ನುಗ್ಗಿದರು ಹೊರಗೆ ಮೊದ-
ಲಂತೆಯೇ. ಹೊರಟವರು ಮೂರುಜನ. ಬೀಳ್ಕೊಡೆಗೆ
ಬಂದವರು ಆಪಾಟಿ ಮಂದಿ ! ಕಿಟಕಿಯ ಪಕ್ಕ
ಕೂತ ಹುಡುಗಿಯ (ಅವಳು ಹೊಸವಧುವೇ ?)ಮುಟ್ಟುತ್ತ
ಕಣ್ಣೀರುಗರೆದು ಏನೇನೋ ಹೇಳುತ್ತಾರೆ.

ಒಬ್ಬನಂತೂ(ಮುದುಕ) ಕಿಟಕಿಯುದ್ದಕ್ಕೂನೆ
ಬೇಡವೆಂದರು ಬಿಡದೆ ಅಳುತ ಬರುತ್ತಿದ್ದಾನೆ.

-ವೆಂ.

* ಉದ್ಯಾನ್ ಎಕ್ಸ್ ಪ್ರೆಸ್.