ಝೆನ್ ಕತೆ: ೨೦ ಎರಡು ಮೊಲಗಳ ಬೇಟೆ

ಝೆನ್ ಕತೆ: ೨೦ ಎರಡು ಮೊಲಗಳ ಬೇಟೆ

ಬರಹ
ಯುದ್ಧ ಕಲೆಯನ್ನು ಅಭ್ಯಾಸ ಮಾಡುತ್ತಿದ್ದ ಒಬ್ಬ ಶಿಷ್ಯ ಗುರುವನ್ನು ಕೇಳಿದ: "ಗುರುವೇ, ನಾನು ಯುದ್ಧ ಕಲೆಯನ್ನು ಕುರಿತು ಎಲ್ಲವನ್ನೂ ತಿಳಿಯಬೇಕೆಂದಿದ್ದೇನೆ. ನಿಮ್ಮೊಡನೆ ಕಲಿಯುತ್ತಿರುವುದರೊಂದಿಗೆ ಬಿಡುವಿನ ಸಮಯದಲ್ಲಿ ಇನ್ನೊಬ್ಬ ಗುರುವಿನ ಬಳಿ ಯುದ್ಧ ಕಲೆಯ ಮತ್ತೊಂದು ಶೈಲಿಯನ್ನೂ ಅಭ್ಯಾಸ ಮಾಡಬೇಂದಿರುವೆ. ನಿಮಗೇನು ಅನ್ನಿಸುತ್ತದೆ?" "ಏಕ ಕಾಲದಲ್ಲಿ ಎರಡು ಮೊಲಗಳನ್ನು ಅಟ್ಟಿಸಿಕೊಂಡು ಹೋದ ಬೇಟೆಗಾರನಿಗೆ ಯಾವ ಮೊಲವೂ ಸಿಗುವುದಿಲ್ಲ" ಎಂದ ಗುರು. [ಮನಸ್ಸನ್ನು ಮತ್ತೊಂದು ಕಡೆಗೆ ಎಳೆಸದೆ ಮಾಡುತ್ತಿರುವ ಕೆಲಸವನ್ನು ಮಗ್ನತೆಯಿಂದ ಸರಿಯಾಗಿ ಮಾಡುವುದು ಕೂಡ ಝನ್]