ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಬರಹ

ಮನೇಲ್ ಕುಂತ್ಕಂಡು ಮಂಡಕ್ಕಿ ತಿಂದು ಕೊಂಡು ನಿಮ್ಮಲ್ಲೇಷ್ಟೋ ಜನ ಭಾನುವಾರದ ಸಂಜೆ ಕಳೆದಿರ ಬೇಕಲ್ಲ. ಅತ್ತೊಂದು ಕಡೆ, ರಣರಂಗ. ವಿಂಬಲ್ಡನ್ ಕಿರೀಟವನ್ನ ತನ್ನದಾಗಿಸಿಕೊಳ್ಳಲು ಘಟಾನುಘಟಿಗಳ ಹರ ಸಾಹಸ. ಆರನೇ ಭಾರಿಗೆ ವಿಂಬಲ್ಡನ್ ನಲ್ಲಿ ಎದುರಾಗಿ ಸೆಣಸುತ್ತಿರುವ ಫೆಡರರ್ ಮತ್ತು ನಡಾಲ್ ಇಂದು ಇತಿಹಾಸವನ್ನ ರಚಿಸಿದ್ದಾಗಿದೆ. ಯಾಕೆಂದರೆ ಇವರನ್ನ ಬಿಟ್ಟರೆ, ಇವಾನ್ ಲೆನ್ಡಲ್ (Ivan Lendl) - ಮ್ಯಾಟ್ಸ್ ವಿಲನ್ಡೆರ್ (Mats Wilander) ಹಾಗು ಸಾಮ್ಪ್ರಾಸ್ (Sampras) - ಆಡ್ರೆ ಅಗಾಸ್ಸಿ (Andre Agassi) ಮಾತ್ರ ಐದು ಬಾರಿ ಎದುರಾಗಿದ್ದರು.

೨೦೦೩ ರಿಂದ ಸತತವಾಗಿ ಪ್ರತಿ ವರ್ಷ ವಿಂಬಲ್ಡನ್ ಗೆದ್ದು ಬಂದಿರುವ ಫೆಡರರ್ ಮತ್ತೆ ಗೆದ್ದು ಇನ್ನೊಂದು ಅಧ್ಯಾಯ ಬರೆಯುತ್ತಾರಾ? ಇಲ್ಲ ನಡಾಲ್ ತನ್ನದೇ ಆದ ಹೊಸ ಅಧ್ಯಾಯವನ್ನ ಬರೆದು ಟೆನಿಸ್ ಸಾಮ್ರಾಜ್ಯದ ಅಧಿಪತ್ಯವನ್ನ ವಹಿಸಿಕೊಳ್ಳುತ್ತಾನೋ ಕಾದು ನೋಡಬೇಕು. ವರುಣನೂ ಫೆಡರರ್ ನ ಇಂದಿನ ಆಟದಿಂದ ಸಿಟ್ಟಿಗೆದ್ದಿರುವಂತಿದೆ. ಮೊದಲೇ ನಿಧಾನವಾಗಿ ಶುರುವಾದ ಪಂಧ್ಯದಲ್ಲಿ ಈಗ ಮತ್ತೆ ವರುಣನ ತಡೆ. ಪರೀಕ್ಷೆ ಮುಗಿಸಿ ಕೊಂಡು ಬಂದ ನನಗೆ ಇವರುಗಳ ನಡುವಿನ ಶಕ್ತಿ ಪ್ರದರ್ಶನದ ಪರೀಕ್ಷೆ ಕಂಡು ಸ್ವಲ್ಪ ಸಮಾಧಾನ. ನನಗೆ ಮಾತ್ರ ಪರೀಕ್ಷೆಯ ಭೂತ ಕಾಡಿಲ್ಲವಲ್ಲ ಎಂದು. 

ಫೆಡರರ್ ಇಂದು ನಡಾಲ್ ನೆದುರು ತಡಬಡಿಸುತ್ತಿರುವಂತಿದೆ. ಇವರಲ್ಲಿ ನಿಮ್ಮ ಓಟು ಯಾರಿಗೆ? ;)

 

 

ಚಿತ್ರ : ©Reuters / T. Melville : http://www.wimbledon.org/ ಕೃಪೆ