ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ

ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ

ಡಾ ಎಚ್ ಎಸ ವಿ ಯವರ   ಹೊಸ ಕಾದಂಬರಿ "ವೇದವತಿ ನದಿಯಲ್ಲ"   ಬಿಡುಗಡೆ

ಸ್ಪಂದನ ತಾ ೨೫.೧೨.೨೦೧೧ ರಂದು
ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ "ವಸ್ತಾರೆ" ಯಲ್ಲಿ


ಅದೊಂದು  ನವ ಚೈತನ್ಯದ ಅನುಭವದ ಸ್ಪಂದನ ಗೋಷ್ಠಿ .

 

 

ಸದ್ದಿಲ್ಲದೇ ತಮ್ಮ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡುವ ನಮ್ಮ ಜನಪ್ರೀತಿಯ ಕವಿ ಎಚ್ ಎಸ ವಿಯವರು ಕಳೆದೆ ಹೋಯ್ತು ಎಂದು ಕೊಂಡ ೩೫ ವರ್ಹದ ಹಳೆ ಕಾದಂಬರಿ "ವೇದವತಿ ನದಿಯಲ್ಲ " ಸದ್ದು ಗದ್ದಲವಿಲ್ಲದೆ ಹೊಸ ಸ್ಪಂದನದಿಂದ ಅನಾವರಣ ಗೊಂಡಿತು . ನಮ್ಮ ಪ್ರೀತಿಯ ಕವಿ ಲೇಖಕ ಕಥೆಗಾರ ಹಾಗು ವಾಸ್ತು ಶಿಲ್ಪಿ ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ ವಸ್ತಾರೆಯಲ್ಲಿ ಕಳೆದ ಕ್ರಿಸ್ಮಸ್ ದಿನದಂದು ( ೨೫.೧೨.೨೦೧೧ ರಂದು) ಡಾ ಸಿ ಎನ್ ರಾವ್ ಅವರಿಂದ  ಸುಂದರ ಸರಳ ಕೌಟುಂಬಿಕ ಪರಿಸರದಲ್ಲಿ ಅನಾವರಣಗೊಂಡಿತು.
ವಸ್ತಾರೆಯವರ ಸ್ವಾಗತ ನುಡಿಗಳಿಂದ ಆರಂಭಗೊಂಡ ಈ ಕಾರ್ಯಕ್ರಮ ಡಾ ಸಿ ಎನ್ ರಾವ್, ಡಾ ನರಹಳ್ಳಿ ,ಜ ನಾ ತೇಜಸ್ವಿ ,ವಸುಧೇಂದ್ರ, ಶ್ರೀಧರ್ ಮೂರ್ತಿ , ರುದ್ರ ಸ್ವಾಮಿ ಮುಂತಾದ ಗಣ್ಯರ ಈ ಕಾದಂಬರಿ ಬಗೆಗಿನ ಅನಿಸಿಕೆಗಳ ದೃಷ್ಟಿ ಕೋನ ನುಡಿಮುತ್ತು ಗಳಿಂದ ಅಲಂಕೃತಗೊಂಡು ನೆರೆದವರೆಲ್ಲರ ಮನರಂಜಿಸಿತು.


ನಾಗರಾಜರವರು ತಮ್ಮ  ಸ್ವಗೃಹ "ವಸ್ತಾರೆ" ಯ ಬಗೆಗೆ ಹೇಳುತ್ತಾ ಈಗಿನ ಯಾಂತ್ರಿಕತೆಯ ಯುಗದಲ್ಲಿ ನಾವೆಲ್ಲರೂ ಸಾಬುನಿನಂತೆ ಸವೆಯುತ್ತಿರುವಾಗ ಒಂದು ಗೃಹದ ಪರಿ ಕಲ್ಪನೆ ಅದಾಗಿಯೇ  ಉಳಿದಿರುವುದಿಲ್ಲ. ಪ್ರತಿ ಬದುಕೇ ಖಾಸಗಿಯಾಗಿರುವ ಈಗಿನ ಯಾಂತ್ರಿಕತೆಯ ಬಡಿವಾರದಲ್ಲಿ ಕಳೆದೇ ಹೋದ ಹಜಾರೆ ಪಡಸಾಲೆಗಳನ್ನು ಶೋಧಿಸುವ ಕಾರ್ಯದಲ್ಲಿ ಈ ವಸ್ತಾರೆಯೊಂದು ಪ್ರಯತ್ನವಾಗಿದೆ ಎನ್ನುತ್ತಾ, ಕಳೆದ ಅಭ್ಯಾಸ ಕಾರ್ಯಕ್ರಮವೊಂದು ಇಲ್ಲಿಯೇ ನಿರ್ವಹಣೆಗೊಂಡುದನ್ನು ನೆನಪಿಸುತ್ತಾ, ಇಂತಹ ಆನೇಕ ಉದ್ದೇಶಿತ ಹಾಗೂ ಅನುದ್ದೇಶಿತ ಮುಖಾ ಮುಖಿ ಆಪ್ತ ಕೂಟಗಳು ಇಲ್ಲಿ ಸಲ್ಲುವಂತಾಗಲೆಂಬುದೇ ನಮ್ಮ ಮುಖ್ಯ ಆಶಯ ಎಂದರು.  
ಕಾದಂಬರಿಯ ಸಾಂಕೇತಿಕ ಬಿಡುಗಡೆ ಮಾಡುತ್ತ ಡಾ ಸಿ ಎನ್ ರಾಮಚಂದ್ರ ರಾಯರು ವಸ್ತಾರೆಯವರನ್ನು ಸಾಹಿತ್ಯಿಕ ದಾರ್ಶನಿಕ ಯಾಂತ್ರಿಕ ನೆಲೆಯುಳ್ಳವರು ಎನ್ನುತ್ತಾ ಇದೊಂದು ವಿಶಿಷ್ಟ ಕಾರ್ಯಕ್ರಮಎಂದರು. ಸಾರ್ವಜನಿಕ ಲೇಪವಿಲ್ಲದೇ ಆಪ್ತವಾಗಿ ಮನೆಯ  ಪರಿಸರದಲ್ಲಿ ನಡೆಯುವ ಈ ಸಂಭ್ರಮದ ಅವಕಾಶ ತನಗೆ ಸಲ್ಲಿಸಿದ್ದಕ್ಕೆ ಎಚ್ ಎಸ್ ವೀ ಯವರನ್ನು ಅಭಿನಂದಿಸುತ್ತಾ ೩೫ ವರ್ಶಗಳ ಹಿಂದೆ ಬರೆದ ಈ ಕಾದಂಬರಿ ಅಕಾಸ್ಮಾತ್ ಕಳೆದು ಹೋಗಿರಲಾರದೆಂದರು.


ಶಾನುಭೋಗಿಕೆಯ ಗುಮಾಸ್ತನಾದ ಮಲ್ಲಪ್ಪನ ಕುಟುಂಬ ಒಂದು ಹಳ್ಳಿಗೆ ಬರುವಲ್ಲಿಂದ ಆರಂಭವಾಗುವ ಈ ಕಥೆ ೧೯೩೫ ರಿಂದ ೧೯೬೫ ರ  ಆಸುಪಾಸಿನ  ಕಾಲಗಟ್ಟದ ಕಥೆಯಾದ ಈ ಕಾದಂಬರಿ ಹಳ್ಳಿಯ ಚಿತ್ರಣವನ್ನು ತುಂಬಾನೇ ಚೆನ್ನಾಗಿ ವಿಸ್ತ್ರತವಾಗಿ ಕಣ್ಣೆದುರುತಂದು ನಿಲ್ಲಿಸಿದ್ದಾರೆ. ವಿಭಿನ್ನ ನೆಲೆಗಳಲ್ಲಿ ಗ್ರಾಮೀಣ ಬದುಕಿನ ಮಜಲುಗಳನ್ನು ಅವಿಭಾಜ್ಯ ಅಂಗಗಳನ್ನು ಅತಿ ನಿಖರವಾಗಿ ಕಟ್ಟಿ ಕೊಡುತ್ತಿದೆ ಈ ಸಾಂಸ್ಕೃತಿಕ ಧಾರ್ಮಿಕ ವತ್ತಡಗಳನ್ನು ಮೀರಿದ ಜಾತಿಮ್ ವ್ಯವಸ್ಥೆಯ ವಿರೋಧೀ ಪ್ರಾದೇಶಿಕ  ಸುಧಾರಣಾವಾದಿ ಕಾದಂಬರಿ , ಚಲನ ಶೀಲ ಬದುಕಿನ   ಸಾಂಕೇತಿಕ ನೆಲೆಯಾದ ಅಲೆದಾಟ " ಅದೇ ವೇದವತಿಯೆಂದರೆ ಬರೇ ನದಿಯಲ್ಲ ಅಂತ ಅರ್ಥ ಇದ್ದಿರಬಹುದು ಎಂದರು.
ಡಾ ನರಹಳ್ಳಿಯವರು  ನವೋದಯ ಕಾಲದಲ್ಲಿ ಇಂತಹಾ ಕೂಟಗಳು ಸಾಮಾನ್ಯವಾಗಿದ್ದವೆಂದು ನೆನಪಿಸಿಕೊಳ್ಳುತ್ತಾ ನಾವೆಲ್ಲರೂ ನಮ್ಮ ಬದುಕಿನಲ್ಲಿ ಎಲ್ಲವನ್ನೂ ಉಪಯೋಗದ ದೃಷ್ಟಿಯಿಂದಲೇ ನೋಡುವಂತಹ ಅಭ್ಯಾಸ ಮಾಡಿಕೊಂಡಿದ್ದು ಸಹಜ ಸಂತೋಷದ ಸೆಲೆಯಿಂದ ವಂಚಿತರಾಗುತ್ತಿದ್ದೇವೆ ಎಂದರು. ಈ ಕಾದಂಬರಿಯನ್ನು ಮಾನ್ಯ ಎಚ್ ಎಸ್ ವಿಯವರು ಈಗ ಬರೆಯುವದಾಗಿದ್ದರೆ ಈ ರೀತಿಯಲ್ಲಿ ಬರೆಯುತ್ತಲಿರಲಿಲ್ಲ ಎಂದರು. ಕಳೆದು ಹೋದ ಒಂದು ಗ್ರಾಮೀಣ ಜಗತ್ತನ್ನೇ ನಮ್ಮಿದುರು ತೆರೆಯುತ್ತದೆ . ಒಂದು ಕುಟುಂಬದ ಕಥೆ  ಗ್ರಾಮ ಸಮಾಜ ವ್ಯವಸ್ಥೆಯನ್ನೊಳಗೊಂಡು ಹೇಗೆ ವ್ಯವಸ್ಥೆಯ ಚೌಕಟ್ಟಿನಲ್ಲೇ ಒಳಬಂಡಾಯದ ಸಾಧ್ಯತೆಯನ್ನು ಉದ್ದೀಪಿಸುತ್ತದೆ ಮತ್ತು ಹೊಸ ಹೊಳಹುಗಳನ್ನು ಪ್ರೇರೇಪಿಸುತ್ತದೆ ಎಂದರು.
ಶ್ರೀಮತಿ ಜ ನಾ ತೇಜಸ್ವೀಯವರು ಮಾತನಾಡುತ್ತ ಒಬ್ಬ ವ್ಯಕ್ತಿಯ ನಂಬುಗೆಯೇ ಅವನ ಕ್ರೀಯೆಗಳನ್ನು ನಿರ್ದೇಶಿಸುತ್ತದೆ ವ್ಯಕ್ತಿತ್ವದ ಅನಾವರಣ ಎನ್ನಿಸಿದರೂ ಇಡೀ ಕಾದಂಬರಿಯ ಪಾತ್ರಗಳು ತಮ್ಮೊಳಗಿನ ಪ್ರತಿಕ್ರೀಯೆಗಳನ್ನು ಗೌಣವಾಗಿರಿಸಿಕೊಂಡು ಹೊರಗಿನ ಅನುಭವಗಳಿಗೆ ತನ್ನನ್ನೆ ಇದಿರುಗೊಳ್ಳುತ್ತಾ ಸಾಗುತ್ತದೆ. ಹುಟ್ಟು ಮತ್ತು ಸಾವಿನ ಬದುಕಿನ ನಿರಂತರತೆ.
ಈ ಕಾದಂಬರಿಯು ಶ್ರೀಯುತ ವಸುಧೇಂದ್ರರಿಗೆ ಭೈರಪ್ಪನವರ ಗೃಹಭಂಗ ಮತ್ತು ಖಾಸನೀಸರ ಕಾದಂಬರಿಯ ಪ್ರಭಾವದಂತೆ ಅನ್ನಿಸಿತಾದರೂ ಸಾಮಾಜಿಕ ವ್ಯವಸ್ಥೆ  ಮತ್ತು ಖಾಸಗೀ ಬದುಕಿನ ಹಾಸ್ಯವನ್ನೂ ಈ ಕಾದಂಬರಿಯ ಪರಿಣಿತತೆ ಮನಸೆಳೆಯಿತು, ವಿಪರೀತತೆಯನ್ನು ಇದಕ್ಕೆ ಹಚ್ಚಿ ನೋಡುವ ಅವಶ್ಯಕತೆಯಿಲ್ಲ ಎಂದರು.


ಡಾ ಸಿ ಎನ್ ರಾವ್, ಡಾ ನರಹಳ್ಳಿ, ಶ್ರೀಮತಿ ಜ ನಾ ತೇಜಸ್ವಿ,  ಶ್ರೀಶ್ರೀಯುತ ಶ್ರೀಧರ ಮೂರ್ತಿ, ಶ್ರೀಯುತ ವಸುಧೇಂದ್ರ,ಶ್ರೀಯುತ ರುದ್ರ ಸ್ವಾಮಿ  ಶ್ರೀಯುತ ದತ್ತ, ಶ್ರೀಯುತ ಅನು ಬೆಳ್ಳೆ ಮುಂತಾದ ಅನೇಕ ಗಣ್ಯರು ಉಪಸ್ತಿತರಿದ್ದರು. ಮಾನ್ಯ ಡಾ ಶಿವರುದ್ರಪ್ಪ ಮತ್ತು ಶ್ರೀಯುತ ಜೋಗಿ ಯವರು ಕಾರ್ಯ ಬಾಹುಳ್ಯದಿಂದಾಗಿ ಹಾಜರಾಗಿರಲಿಲ್ಲ.
ಮುನ್ನುಡಿಯನ್ನು ಬರೆದ ಎನ್ ಎಸ್ ಶ್ರೀಧರ ಮೂರ್ತಿಯವರು ಅವಿಷ್ಕಾರವಾಗಿರುವ ಇದರಲ್ಲಿ ವ್ಯಕ್ತಿ ಮತ್ತು ಕಥಾನಕಗಳು ಒಟ್ಟಾಗಿಯೇ ಸಾಗುತ್ತವೆ. ಈ ಕಾದಂಬರಿ ಹಲವು ನೆಲೆಗಳನ್ನು ಒಳಗೊಂಡಿದೆ. ಪ್ರಧಾನ ಪಾತ್ರವಾದ ರಂಗ ಲಕ್ಷ್ಮಿ ತಾನು ಯಾರು ಎಂಬ ಅರಿವನ್ನು ಪಡೆದುಕೊಳ್ಳುವ ಮೊದಲೇ ಅವಳ ಬದುಕಿನಲ್ಲಿ ಹಲವಾರು ಘಟನೆಗಳು ನಡೆದುಹೋಗಿ ತನ್ನದೇ ಆದ  ಬದುಕನ್ನು ಕಟ್ಟಿಕೊಳ್ಳುವ ಅವಳ ಪ್ರಯತ್ನಕ್ಕೆ ಒಂದಲ್ಲ ಒಂದು ಅಡಚಣೆ ಒದಗುತ್ತಾ ಇನ್ನೊಬ್ಬರ ಬದುಕಿಗೆ ನೆರವಾಗುವಲ್ಲೇ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಾಳೆ.ಬದುಕಿಗೆ ಆಧಾರ ಎಂದು ಭಾವಿಸಿದ್ದತಂದೆ ಮೂರನೆಯ ಮದುವೆಯಾಗುತ್ತಾನಾದರೂ ತನ್ನ ವಿಧವೆ ಮಗಳ ಬದುಕು ಹಸನಾಗುವತ್ತ ಯೋಚಿಸುವುದಿಲ್ಲ.


ಈ ಕಾದಂಬರಿಯನ್ನು ಮೂರ್ತಿಯವರು ಮೊದಲು ಓದಿದ್ದು ಅವರು ಏಳನೇ ತರಗತಿಯಲ್ಲಿದ್ದಾಗ, ೧೯೭೮ರ " ಕಾದಂಬರಿ " ಎಂಬ ಮಾಸ ಪತ್ರಿಕೆಯಲ್ಲಿ. ಕಾಲಘಟ್ಟದಲ್ಲಿ ಎಷ್ಟು ದೂರ ತಾನು ಬಂದೆ ಎಂಬುದನ್ನೂ ಅಚ್ಚರಿಯಾಗಿಸಿದೆ ಈ ಕೃತಿ ಎನ್ನುತ್ತಾರೆ.
ಸಪ್ನ ಬುಕ್ ಹೌಸ್ ನವರ ಈ ಕೃತಿ ಜೋಗಿಯವರ ಹಿನ್ನುಡಿಯೊಳಗೊಂಡಿದೆ.
ರುಚಿ ರುಚಿಯಾದ ರಾತ್ರೆಯೂಟವನ್ನೂ ಅಲ್ಲಿಯೇ ಸವಿದು ಮನೆಗೆ ಮರಳುವಾಗ ಇವತ್ತಿನ ಈ ಸದ್ದು ಗದ್ದಲವಿಲ್ಲದ ವಿನೂತನವೆನಿಸಿದ ಕಾರ್ಯಕ್ರಮ ಮನದಲ್ಲೇ ಸ್ಪಂದನದ ಹೊಸ ಹುಟ್ಟು ಓದುವ ನಿಟ್ಟಿನಲ್ಲಿ ಹೊಸ ಹೊಸ ಹೊಸ ದೃಷ್ಟಿ ಕೋನಗಳನ್ನು ಒದಗಿಸಿ ಚಿಂತನೆಗೆ ಖಂಡಿತಾ ಗ್ರಾಸವಾಗುತ್ತಿದೆ ಅನ್ನಿಸಿ ಡಾ ಎಚ್ ಎಸ್ ವೀ ಯವರ ಹಾಗೂ ನಾಗರಾಜ ದಂಪತಿಗಳ ಇವತ್ತಿನ ಸದ್ದುದ್ದೇಶ ಸಫಲವಾಗಲಿ ಎಂದು ಹಾರೈಸಿತ್ತು.

 
 1.  vastaare  Munnudi      http://youtu.be/C4NzYjaipFw
 
2.  Dr CN RAO;b,c,d,e,f       http://youtu.be/Gu9-s-BxO1U,
 
3. Dr NarahaLli   i,j,k,         http://youtu.be/rHbZL826f9s
 
4. Ms Tejasvi   l,m,       http://youtu.be/B-7kaeU3ogE
 
5. Mr Vasu    p,        http://youtu.be/kYU5u7-SVvY