ಡಿಜಿಟಲ್ ಕ್ಯಾಮೆರಾ ಕೊಳ್ಳುವ ಮುನ್ನ ಇದನ್ನೊಮ್ಮೆ ಓದಿ
ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ ಮಟ್ಟಿಗಾದರೂ ಸಮಾಧಾನ ಹೆಳುತ್ತದೆಂದು ಹೇಳಬಲ್ಲೆ. ನಾನು ಕ್ಯಾಮೆರ ಕೊಳ್ಳುವಾಗ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಕೆಲವು ಕನ್ನಡ ಪದಗಳು ತಪ್ಪಿರಬಹುದು, ನೀವು ತಪ್ಪಾಗಿ ಭಾವಿಸುವುದಿಲ್ಲ ಎಂದುಕೊಂಡಿದ್ದೇನೆ. :-)
ಮೊದಲಿಗೆ ಕ್ಯಾಮೆರ ಹಾಗೂ ಫೋಟೋಗಳಲ್ಲಿ ಬಳಸುವ ಕೆಲವು ಟರ್ಮಿನಾಲಜಿಸ್ ತಿಳಿದುಕೊಳ್ಳೋಣ. ಪಿಕ್ಸೆಲ್ ಎಂಬುದು ಫೋಟೋದ ಅತಿ ಸಣ್ಣ ಭಾಗ,ಇದು ಚಿತ್ರದ ಬಣ್ಣದ ವಿವರಣೆಯನ್ನು ಹೊಂದಿರುತ್ತದೆ.
ರೆಸೊಲ್ಯೂಶನ್ ಎಂದರೆ ಒಂದು ಇಂಚಿನ ಚೌಕದಲ್ಲಿ ಇರಬಹುದಾದ ಪಿಕ್ಸೆಲ್ ಗಳು. ಪಿಕ್ಸೆಲ್ ಸೈಜ್ ಎಂದರೆ ಒಂದು ಫೊಟೊದಲ್ಲಿ ಇರುವ ಒಟ್ಟು ಪಿಕ್ಸೆಲ್ ಗಳು, ಈಗಿನ ಮಾರುಕಟ್ಟೆಯಲ್ಲಿ 1 ಮೆಗಾ ಪಿಕ್ಸೆಲ್ ನಿಂದ 16 ಮೆಗ ಪಿಕ್ಸೆಲ್ ವರೆಗಿನ ಕ್ಯಾಮೆರಾಗಳು ಲಭ್ಯವಿದೆ. ಉದಾಹರಣೆಗೆ 3.1 ಮೆಗಾ ಪಿಕ್ಸೆಲ್ ಎಂದರೆ 3145728 ಪಿಕ್ಸೆಲ್ ಗಳು(2288 X 1728 ಪಿಕ್ಸೆಲ್ಸ್) ಇರುತ್ತವೆ.ಆ ಕ್ಯಾಮೆರಾದಿಂದ ತೆಗೆದ ಫೋಟೋದಲ್ಲಿ 3145728 ಪಿಕ್ಸೆಲ್ ಗಳು ಇರುತ್ತವೆ, ಇನ್ನೂ ವಿವರವಾಗಿ ಹೇಳಬೇಕೆಂದರೆ ಒಂದು ಫೋಟೋದ ವಿವರಣೆಗಳನ್ನೊಳಗೊಂಡ 3145728 ಅತಿ ಸಣ್ಣ ಭಾಗಗಳಿರುತ್ತವೆ.
ಈಗ ಪಿಕ್ಸೆಲ್ ಸೈಜ್ ಹಾಗೂ ಫೋಟೋ ಪ್ರಿಂಟ್ ಸೈಜ್ ಗೂ ಏನು ಸಂಬಂದ ಇದೆ ಎಂದು ತಿಳಿದು ಕೊಳ್ಳೋಣ. ಈಗ ಉದಹರಣೆಗೆ 3.2 ಮೆಗ ಪಿಕ್ಸೆಲ್ ಕ್ಯಾಮೆರಾದಲ್ಲಿ ತೆಗೆದ ಫೋಟೋವನ್ನು 13.5 X 10" ಸೈಜ್ ನಲ್ಲಿ ಪ್ರಿಂಟ್ ತೆಗೆದರೂ ಗುಣಮಟ್ಟದಲ್ಲಿ ವತ್ಯಾಸ ಬರುವುದಿಲ್ಲ. ಹೀಗೆ ಇನ್ನು ಕೆಲವು ಉದಾಹರಣೆಗಳನ್ನು ನೋಡೋಣ.
ಪಿಕ್ಸೆಲ್ಸ್ | ಪ್ರಿಂಟ್ ಸೈಜ್ |
0.3Mega Pixels(640 X 480) | 4" X 3" |
1.2Mega Pixels(1280 X 960) | 7" X 5" |
2Mega Pixels(1600 X 1200) | 10" X 8" |
3.2Mega Pixels(2048 X 1536) | 13.5" X 10" |
4Mega Pixels(2288 X 1712) | 15" X 11" |
5Mega Pixels(2500 X 2000) | 17" X 13" |
ಈಗ ಪ್ರಿಂಟ್ ಸೈಜ್ ನ ಒಂದು ಅಂದಾಜು ಸಿಕ್ಕಂತಾಯಿತು. ಈಗ ನಿಮ್ಮ ಉಪಯೋಗಕ್ಕೆ ತಕ್ಕಂತೆ ಪಿಕ್ಸೆಲ್ ಸೈಜ್ ಅನ್ನು ಆರಿಸಿಕೊಳ್ಳಿ. ಈಗ ನೀವು 4" X 6" ಫೋಟೋ ಪ್ರಿಂಟ್ ತೆಗೆಯಬೇಕು ಎಂದುಕೊಳ್ಳಿ, 3 ಮೆಗಾ ಪಿಕ್ಸೆಲ್ ನ ಕ್ಯಾಮೆರಾದಲ್ಲಿ ತೆಗೆದ ಫೋಟೋಗೂ 1 ಮೆಗಾ ಪಿಕ್ಸೆಲ್ ನ ಕ್ಯಾಮೆರಾದಲ್ಲಿ ತೆಗೆದ ಫೋಟೋ ಪ್ರಿಂಟ್ ಗೂ ಬಹಳ ವತ್ಯಾಸವಿರುತ್ತದೆ, ಏಕೆಂದರೆ ಪಿಕ್ಸೆಲ್ ಗಳ ಸಂಖ್ಯೆಯಲ್ಲಿ ಇರೋ ವ್ಯತ್ಯಾಸ. ಜಾಸ್ತಿ ಪಿಕ್ಸೆಲ್ ಗಳಿದ್ದಷ್ಟೂ ಬಣ್ಣದ ಬಗ್ಗೆ ಮಾಹಿತಿ ಹಿಡಿದಿಡಲು ಹೆಚ್ಚು ಜಾಗ ಸಿಕ್ಕಂತಾಗುತ್ತೆ, ಆದ್ದರಿಂದಲೇ ಫೋಟೋದ ಗುಣಮಟ್ಟದಲ್ಲಿ ವ್ಯತ್ಯಾಸ ಬರುತ್ತದೆ.
ಈಗ ಆಪ್ಟಿಕಲ್ ಹಾಗೂ ಡಿಜಿಟಲ್ ಜೂಮ್ ಬಗ್ಗೆ ತಿಳಿದು ಕೊಳ್ಳೋಣ. ಆಪ್ಟಿಕಲ್ ಜೂಮ್ ಎಂದರೆ ದೂರದ ಚಿತ್ರಗಳನ್ನು ತೆಗೆಯಲು ಕ್ಯಾಮೆರಾದಲ್ಲಿರುವ ಎರಡು ಲೆನ್ಸ್ ಗಳ ನಡುವಿನ ಅಂತರವನ್ನು ಬದಲಿಸಿ ಫೋಟೋಗಳ ಗುಣಮಟ್ಟ ಕಾಯ್ದುಕೊಳ್ಳುವ ಒಂದು ವಿಧಾನ. ಆದರೆ ಡಿಜಿಟಲ್ ಜೂಮ್ ನಲ್ಲಿ ಲೆನ್ಸ್ ಗಳ ಅಂತರ ಬದಲಾಗುವುದಿಲ್ಲ, ಬದಲಿಗೆ ವಿದ್ಯುನ್ಮಾನ ತಂತ್ರಜ್ನಾನ ಬಳಸಿ ಹತ್ತಿರದಲ್ಲಿ ನೋಡಿದಾಗ ಕಾಣುವಂತೆ ಮಾಡುತ್ತದೆ. ಡಿಜಿಟಲ್ ಜೂಮ್ ಫೋಟೋದ ಗುಣಮಟ್ಟವನ್ನು ತಗ್ಗಿಸುತ್ತದೆ, ಆದ್ದರಿಂದ ಡಿಜಿಟಲ್ ಜೂಮ್ ಗಿಂತ ಆಪ್ಟಿಕಲ್ ಜೂಮ್ ಗೆ ಹೆಚ್ಚಿನ ಮಹತ್ವ ಕೊಡಬೇಕು. ಡಿಜಿಟಲ್ ಜೂಮ್ ಅನ್ನು ಯಾವುದೇ ಫೋಟೋ ಎಡಿಟಿಂಗ್ ತಂತ್ರಾಂಶ ಬಳಸಿ ಮಾಡಬಹುದು.
ಕ್ಯಾಮೆರಾದಲ್ಲಿರುವ ಇಂಟರ್ನಲ್ ಮೆಮೋರಿ ಲೆಖ್ಖಕ್ಕೇ ಬರುವುದಿಲ್ಲ ಯಾಕೆಂದರೆ ಅದು ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಪ್ರತ್ಯೇಕವಾಗಿ ಮೆಮೋರಿ ಕಾರ್ಡ್ ತೆಗೆದುಕೊಳ್ಳಲೇ ಬೇಕಾಗುತ್ತದೆ. 256 ಎಮ್ ಬಿ ಅಥವಾ 512 ಎಮ್ ಬಿ ಮೆಮೋರಿ ಕಾರ್ಡ್ ಬಳಸಬಹುದು ತಮ್ಮ ಅವಶ್ಯಕತೆಗನುಗುಣವಾಗಿ.
ಸಾಮನ್ಯವಾಗಿ Compact flash, Smart media, SD(Secured Digital), MMC, Memory stic ಇವುಗಳನ್ನು ಬಳಸಲಾಗುತ್ತದೆ. ಎಸ್ ಡಿ ಕಾರ್ಡ್ ಮಲ್ಟಿಪರ್ಪೋಸ್ ಆಗಿರುವುದರಿಂದ ಬೇರೆ ಉಪಕರಣಗಳಲ್ಲೂ ಉಪಯೋಗಿಸಬಹುದು.ಇನ್ನು ಎಲ್ಲರಿಗೂ ಗೊತ್ತಿರುವಂತೆ ರಿಚಾರ್ಜ್ ಮಾಡುವಂತ ಬ್ಯಾಟೆರಿಗಳಿದ್ದರೆ ಉತ್ತಮ.
ಇನ್ನೂ ಬಹಳ ವಿಷಯಗಳನ್ನು ಇಲ್ಲಿ ಚರ್ಚಿಸಿಲ್ಲ. ಇವಿಷ್ಟು ಮುಖ್ಯವಾದವುಗಳೆಂದು ಭಾವಿಸಿದ್ದೇನೆ.